ವೀರೂ ಟಾಕೀಸಿನ‌ ಹೊಸ ಚಿತ್ರ 'ಸೇಲೆ ದುಗ್ಗಮ್ಮ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ವೀರೂ ಟಾಕೀಸಿನ‌ ಹೊಸ ಚಿತ್ರ 'ಸೇಲೆ ದುಗ್ಗಮ್ಮ'

Share This

'ಮಗನೇ ಮಹಿಷ' ಸಿನಿಮಾಕ್ಕೆ 50ರ ಸಂಭ್ರಮ

ಮಂಗಳೂರು: ವೀರು ಟಾಕೀಸ್ ಲಾಂಛನದಲ್ಲಿ ವೀರೇಂದ್ರ ಶೆಟ್ಟಿ ಕಾವೂರು ನಿರ್ಮಾಣ, ನಿರ್ದೇಶನದಲ್ಲಿ ತಯಾರಾದ ಮಗನೇ ಮಹಿಷ ಸಿನಿಮಾ ಐವತ್ತು ದಿನಗಳನ್ನು ಪೂರೈಸಿದ್ದು ಇದರ ಸಂಭ್ರಮಾಚರಣೆ ಭಾರತ್ ಮಾಲಿನ‌ ಬಿಗ್ ಸಿನಿಮಾಸ್ ನಲ್ಲಿ ನಡೆಯಿತು.
ಡಾ. ರಾಮಚಂದ್ರ ರಾವ್ ಅವರು ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ದೈಜಿವಲ್ಡ್ ಸಂಸ್ಥೆಯ ಚೆಯರ್ ಮೆನ್ ವಾಲ್ಟರ್ ನಂದಳಿಕೆ ಮಾತನಾಡಿ ಮಗನೇ ಮಹಿಷ ಸಿನಿಮಾ ಎಲ್ಲಾ ವರ್ಗದ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ಶೀಘ್ರದಲ್ಲಿ ವಿದೇಶದಲ್ಲೂ ಬಿಡುಗಡೆಗೊಂಡು ಅಲ್ಲಿಯ ತುಳುವರನ್ನು ರಂಜಿಸಲಿದೆ ಎಂದರು.

ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಎಂ ಶೆಟ್ಟಿ ಕಟೀಲು ಮಾತನಾಡಿ, ಹಿರಿಯ ಕಲಾವಿದರ ಜೊತೆಗೆ ಹೊಸ ಕಲಾವಿದರಿಗೂ ಮಗನೇ ಮಹಿಷ ಸಿನಿಮಾದಲ್ಲಿ ಅವಕಾಶ ದೊರೆತಿದೆ. ಸಿನಿಮಾಕ್ಕೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿರುವುದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ ಎಂದರು. 

ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ, ತುಳು ಸಿನಿಮಾರಂಗಕ್ಕೆ 2022 ಪರ್ವಕಾಲ. ಈ ವರ್ಷ ಬಿಡುಗಡೆಗೊಂಡ ಮೂರು ತುಳು ಸಿನಿಮಾಗಳು ಯಶಸ್ಸನ್ನು ದಾಖಲಿಸಿದೆ. ಮಗನೇ ಮಹಿಷ ಯಶಸ್ವೀ 50 ದಿನಗಳನ್ನು ಪೂರೈಸಿದ್ದು ಸಿನಿಮಾ ಶತದಿನವನ್ನು ಪೂರೈಸಲಿ ಎಂದರು.

ವೀರು ಟಾಕೀಸ್ ನಿಂದ ಹೊಸ ಸಿನಿಮಾ: ವೀರು ಟಾಕೀಸ್ ಬ್ಯಾನರ್ ನಿಂದ ಹೊಸ ಸಿನಿಮಾ ತಯಾರಾಗಲಿದೆ ಎಂದು ನಿರ್ದೇಶಕ ನಿರ್ಮಾಪಕ ವೀರೇಂದ್ರ ಶೆಟ್ಟಿ ತಿಳಿಸಿದರು.

ಸೇಲೆ ದುಗ್ಗಮ್ಮ : ಸೇಲೆ ದುಗ್ಗಮ್ಮ ತನ್ನ ಹೊಸ ತುಳು ಸಿನಿಮಾ. ಮಳೆಗಾಲದ ಬಳಿಕ ಸಿನಿಮಾದ ಚಿತ್ರೀಕರಣ ಒಂದೇ ಹಂತದಲ್ಲಿ ನಡೆಯಲಿದೆ. ಸಿನಿಮಾದ ಕತೆ ಚಿತ್ರಕತೆ ರೆಡಿಯಾಗಿದೆ. ಈ ಸಿನಿಮಾಕ್ಕೆ ಲಾಯ್ ವೆಲೆಂಟಿನ್ ಸಲ್ದಾಣ ಸಂಗೀತ ನೀಡಲಿದ್ದಾರೆ. ಗಣೇಶ್ ನೀರ್ಚಾಲ್ ಸಂಕಲನಕಾರರಾಗಿದ್ದಾರೆ, ತಾಂತ್ರಿಕ ಮತ್ತು ಕಲಾವಿದರ ಆಯ್ಕೆ ನಡೆಯಲಿದೆ ಎಂದು ವೀರೇಂದ್ರ ಶೆಟ್ಟಿ ತಿಳಿಸಿದರು.

ಸಮಾರಂಭದಲ್ಲಿ ಮಗನೇಮಹಿಷ ಸಿನಿಮಾದ ನಾಯಕಿ ಜ್ಯೋತಿ ರೈ, ಪತ್ರಕರ್ತ ರವೀಂದ್ರ ಬಿ ಶೆಟ್ಟಿ, ಪ್ರಸಣ್ಣ ರಾವ್, ವೆಂಕಟೇಶ್ ಕಾಮತ್, ಪ್ರದೀಪ್ ಚಂದ್ರ ಕುತ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

Pages