ಮಂಗಳೂರು: ಅಖಿಲ ಭಾರತೀಯ ಓಬಿಸಿ ಮಹಾಸಭಾ ಇದರ ರಾಜ್ಯ ಉಪಾಧ್ಯಕ್ಷರಾಗಿ ಆರ್ ಧನರಾಜ್ ಅವರನ್ನು ನೇಮಕ ಮಾಡಲಾಗಿದೆ.


ಅಖಿಲ ಭಾರತೀಯ ಓಬಿಸಿ ಮಹಾಸಭಾದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ರಾಜ್ಯದಲ್ಲಿ ಈ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ರಾಜ್ಯಾಧ್ಯಕ್ಷ ದೀಪಕ್ ಶೆಟ್ಟಿ ಎಂ. ಅವರು ಆರ್ ಧನರಾಜ್ ಅವರಿಗೆ ಹೊರಡಿಸಿದ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಆರ್ ಧನರಾಜ್ ಚಲನ ಚಿತ್ರ ನಿರ್ಮಾಪಕರಾಗಿ ಕೋಟಿ ಚೆನ್ನಯ್ಯ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅವರು ಕ್ಯಾಟ್ಕ ಸಂಸ್ಥೆಯ ಗೌರವ ಸಲಹೆಗಾರರಾಗಿದ್ದಾರೆ. ರಾಜ್ಯ ಚಲನಚಿತ್ರ ಮಂಡಳಿಯ ನಿರ್ಮಾಪಕ ವಲಯ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಆರ್ ಧನರಾಜ್ ಇತ್ತೀಚೆಗೆ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಅವರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.