ಮಂಗಳೂರು: ಮೂಡುಶೆಡ್ಡೆ ಹೊಸಲಕ್ಕೆ ಶ್ರೀ ದುರ್ಗಾಪರಮೇಶ್ವರಿ ಕೃಪಾ ಮನೆಯ ದೇವಕಿ ಸಂಜೀವ ಶೆಟ್ಟಿ (88) ಅವರು ಜೂ.9 ರಂದು ಸ್ವಗೃಹದಲ್ಲಿ ನಿಧನರಾದರು.
ದೇವಕಿ ಶೆಟ್ಟಿಯವರು ದಿವಂಗತ ಮಣೆಲ್ ತೊಟ್ಲಂಜ ಸಂಜೀವ ಶೆಟ್ಟಿಯವರ ಧರ್ಮಪತ್ನಿ ಹಾಗೂ ನಾಲ್ಕು ಗಂಡು ಮಕ್ಕಳಾದ ಮುಂಬೈ ಬಂಟರ ಸಂಘದ ಭಿವಂಡಿ - ಬದ್ರಾಪುರ ಪ್ರಾದೇಶಿಕ ಮೊದಲ ಕಾರ್ಯಧ್ಯಕ್ಷ, ಶ್ರೀ ಮೂಕಾಂಬಿಕಾ ದೇವಸ್ಥಾನ ಸಹಡ್'ನ ಟ್ರಸ್ಟಿ, ವಿಶ್ವಮೃತ ಟೌನ್ ಶಿಪ್ ಮಾಲಕ ಮೂಡುಶೆಡ್ಡೆ ವಿಶ್ವನಾಥ್ ಶೆಟ್ಟಿ ಸಹಿತ, ಕರುಣಕರ್ ಶೆಟ್ಟಿ, ದಿನೇಶ್ ಶೆಟ್ಟಿ ಮತ್ತು ಉಮೇಶ್ ಶೆಟ್ಟಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ದೇವಕಿ ಎಸ್ ಶೆಟ್ಟಿ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಚಂದ್ರಹಾಶ್ ಶೆಟ್ಟಿ, ಬಂಟರ ಸಂಘದ ಭಿವಂಡಿ-ಬದ್ರಾಪುರ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ರವೀಂದ್ರ ವೈ ಶೆಟ್ಟಿ, ಮೂಾಂಬಿಕಾ ದೇವಸ್ಥಾದ ಅಧ್ಯಕ್ಷ ಕರುಣಾಕರ ಶೆಟ್ಟಿ ಮತ್ತು ಆಡಳಿತ ಪದಾಧಿಕಾರಿಗಳು ದುಃಖ ಸಂತಾಪ ಸೂಚಿಸಿರುವರು.