ಬಂಟರ ಸಾಧನೆಗೆ ಶಿಕ್ಷಣ, ಶ್ರಮ ಕಾರಣ, ಬಂಟರಲ್ಲಿ ನಾಯಕತ್ವದ ಗುಣ ಇದೆ: ಶ್ರೀ ಸಂತೋಷ್ ಗುರೂಜಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟರ ಸಾಧನೆಗೆ ಶಿಕ್ಷಣ, ಶ್ರಮ ಕಾರಣ, ಬಂಟರಲ್ಲಿ ನಾಯಕತ್ವದ ಗುಣ ಇದೆ: ಶ್ರೀ ಸಂತೋಷ್ ಗುರೂಜಿ

Share This
ಸುರತ್ಕಲ್: ಬಂಟರ ಸಾಧನೆಗೆ ಶಿಕ್ಷಣ, ಶ್ರಮ ಕಾರಣ. ಬಂಟರಿಗೆ ನಾಯಕತ್ವ ಗುಣವಿದೆ, ಬಂಟರಿಗೆ ಧಾಮಿಕ ಪ್ರವೃತ್ತಿ ಇತಿಹಾಸದಿಂದಲೇ ಬಂದಿದೆ, ತಾನು ಆರಂಭಿಸಿರುವ ಬಂಟ ಸಂಸ್ಥಾನ ಅನುವಂಶಿಕವಲ್ಲ. ಮೊದಲಿಗೆ ತಾನು ಹಿಂದೂ ಪೀಠ ಆರಂಭಿಸಿದ್ದು ಗುರು ಇಲ್ಲದ ಸಮಾಜಕ್ಕೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಬಂಟರಿಗೆ ಪೀಠ ಆರಂಭಿಸಿದ್ದೇನೆ ಎಂದು ಬಾರ್ಕೂರು ಮಹಾಸಂಸ್ಥಾನದ ಡಾ. ಶ್ರೀ ಸಂತೋಷ್ ಗುರೂಜಿ ಹೇಳಿದರು.
ಸುರತ್ಕಲ್ ಬಂಟರ ಭವನದಲ್ಲಿ ನಡೆದ ಬಾರ್ಕೂರು ಮಹಾಂಸ್ಥಾನ ಸುರತ್ಕಲ್‌ ಬೀಡು ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಬಂಟ ಸಮಾಜದಲ್ಲಿ ಐವರು ಶಾಸಕರು, ಒಬ್ಬ ಎಂಎಲ್ ಸಿ , ಒಬ್ಬ ಸಂಸದರು ಇದ್ದರೂ ಬಂಟರು ರಾಜಕೀಯ ನಾಯಕತ್ವ ಕೇಳಿಲ್ಲ. ಬಿಲ್ಲವ ಸಮಾಜಕ್ಕೆ ಇಬ್ಬರು ಸಚಿವರಿದ್ದು, ಬಜೆಟ್ ನಲ್ಲಿ ಎರಡು ವಿದ್ಯಾರ್ಥಿ ನಿಲಯ ನೀಡಲಾಗಿದೆ. ಬಂಟ ಸಮಾಜಕ್ಕೆ ದೇಶದ 75 ವರ್ಷದಲ್ಲಿ ಬಜೆಟ್ ನಲ್ಲಿ ಒಂದು ಕೋಟಿ ರೂ. ಕೂಡಾ ನೀಡಿಲ್ಲ. ಬಂಟರಲ್ಲಿಯೂ ಬಡವರಿದ್ದಾರೆ. ಬಂಟರ ಘನತೆ ವಿಶ್ವಕ್ಕೆ ತಿಳಿಸುವ ಕಾರ್ಯ ಅಗತ್ಯ ಎಂದವರು ತಿಳಿಸಿದರು.

ದೈವಾರಾಧನೆಯ ಪೂರ್ವಕಾಲದ ಪದ್ದತಿಯನ್ನು ನಾವು ಮರೆತಿದ್ದೇವೆ : ತುಳುನಾಡಿನ ದೈವರಾಧನೆಯ ಪೂರ್ವಕಾಲದ ಪದ್ದತಿ ಆಚರಣೆಯನ್ನು ನಾವು ಮರೆತಿರುವುದು ದುರದೃಷ್ಟಕರ ಸಂಗತಿ. ದೈವರಾಧನೆಯ ಅಚರಣೆ ಬಗ್ಗೆ ನಮ್ಮ ಹಿರಿಯರು ಕಟ್ಟುಪಾಡುಗಳನ್ನು ಹಾಕಿಕೊಟ್ಟಿರುತ್ತಾರೆ ಅದರೆ ಪ್ರಸ್ತುತ ಕಾಲಘಟ್ಟದಲ್ಲಿ ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮತ್ತು ವ್ಯಾಪಾರೀಕರಣಕ್ಕೆ ಮಾರು ಹೋಗಿ ದೈವರಾಧನೆಯಲ್ಲಿ ವೈಭವೀಕರಣ ಮಾಡುತ್ತಾ ಇದ್ದೇವೆ. ದೈವಗಳಿಗೆ ಬ್ರಹ್ಮಕಲಾಭಿಷೇಕ ಇಲ್ಲ ಕೇವಲ ದೇವರಿಗೆ ಮಾತ್ರ ಬ್ರಹ್ಮಕಲಾಭಿಷೇಕ ಅದರೆ ನಮಗೆ ಅದರ ಬಗ್ಗೆ ಅರಿವು ಇಲ್ಲದೆ ತಾವು ತಪ್ಪು ಕೆಲಸ ಮಾಡುತ್ತಾ ಇದ್ದೇವೆ ಇದು ಸರಿಯಲ್ಲ ದೈವರಾಧನೆಯಲ್ಲಿ ವೈಭವೀಕರಣಕ್ಕೆ ಖರ್ಚು ಮಾಡುವ ಹಣವನ್ನು ಬಡವರ ಅರ್ಥಿಕ ಹಿಂದುಳಿದವರ ಕಷ್ಟಗಳಿಗೆ ವಿನಿಯೋಗಿಸಿದರೆ ಅದರಿಂದ ದೈವವು ಸಂತೃಪ್ತಿ ಹೊಂದುತ್ತದೆ. ದೈವಗಳಿಗೆ ಮಂತ್ರ ಹೇಳುವ ಕ್ರಮ ಇಲ್ಲ, ಊರಿನ ಗಡಿ ಪ್ರಧಾನರು ಅಥವಾ ಹಿರಿಯರು ಪ್ರಾರ್ಥನೆ ಮಾಡಿದರೆ ಕೇವಲ ಗಿಡದಲ್ಲಿ ಬೆಳೆದ ಹೂಗಳನ್ನು ಇಟ್ಟು ಭಕ್ತಿಯಿಂದ ದೈವವನ್ನು ಪ್ರಾರ್ಥಿಸಿದರೆ ಖಂಡಿತ ನಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ ದೈವಗಳ ಗಡಿಪ್ರಧಾನರು ನರ್ತನ ಮಾಡುವವರು, ಪರಿಚಾರಕರು ಸತ್ಯ, ಪ್ರಾಮಾಣಿಕ ನಿಷ್ಠೆಯಿಂದ ಇರಬೇಕು. ತುಳುನಾಡಿನ ಮೂಲ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಅಳಿದು ಹೋದ ಬೀಡುಗಳನ್ನು ಪುನ: ವಿವಿಧ ಭಾಗಗಳಲ್ಲಿ ರಚನೆ ಮಾಡಲಾಗುತ್ತಿದೆ ಎಂದು ವಿದ್ಯಾವಾಚಸ್ಪತಿ ಶ್ರೀ ಸಂತೋಷ್ ಗುರೂಜಿ ಹೇಳಿದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಮಹಾಸಂಸ್ಥಾನದ ಮಹಾಪೋಷಕ ಕರುಣಾಕರ್ ಶೆಟ್ಟಿ ಮಧ್ಯಗುತ್ತು. ಉದ್ಯಮಿ ಮನೋಹರ್ ಶೆಟ್ಟಿ ಉಡುಪಿ, ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಬಜಪೆ ಬಂಟರ ಸಂಘ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ, ಎಕ್ಕಾರು ಬಂಟರ ಸಂಘ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಗುರುಪುರ ಬಂಟರ ಮಾತೃ ಸಂಘ ಅಧ್ಯಕ್ಷ ಸಂತೋಷ್ ಶೆಟ್ಟಿ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಸುರೇಶ್ ಶೆಟ್ಟಿ ಕಕ್ಕೆಮಜಲು, ಕಾವೂರು ಬಂಟರ ಸಂಘ ಅಧ್ಯಕ್ಷ ಆನಂದ ಶೆಟ್ಟಿ, ಜೆಪ್ಪು ಬಂಟರ ಸಂಘ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಜಪ್ಪಿನಮೊಗರು ಬಂಟರ ಸಂಘ ಅಧ್ಯಕ್ಷ ಸತ್ಯ ಪ್ರಸಾದ್ ಶೆಟ್ಟಿ. ಕಂಕನಾಡಿ ಬಂಟರ ಸಂಘ ಅಧ್ಯಕ್ಷ ನಾಗೇಶ್ ಶೆಟ್ಟಿ, ಕೋಡಿಕಲ್ ಬಂಟರ ಸಂಘ ಅಧ್ಯಕ್ಷ ,ಮಹಾಬಲ ಚೌಟ, ಆಶೋಕ ನಗರ ಬಂಟರ ಸಂಘ ಅಧ್ಯಕ್ಷ ಸದಾಶಿವ ಶೆಟ್ಟಿ, ನೀರ್ ಮಾರ್ಗ ಬಂಟರ ಸಂಘ ಅಧ್ಯಕ್ಷ ಗೋಕುಲ್ ದಾಸ್ ಶೆಟ್ಟಿ, ಬಿಜೈ ಬಂಟರ ಸಂಘ ಅಧ್ಯಕ್ಷ ಕೃಷ್ಣಮೂರ್ತಿ ರೈ, ಬಜಾಲ್ ಬಂಟರ ಸಂಘ ಅಧ್ಯಕ್ಷ ಯಶೋಧರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಸುರತ್ಕಲ್ ಬೀಡು ಸಮಿತಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕಿರಣ್ ಪ್ರಸಾದ್ ರೈ ಸ್ವಾಗತಿಸಿದರು. ಉಪಾಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ವಂದಿಸಿದರು. ರಾಜೇಶ್ವರಿ ಡಿ. ಶೆಟ್ಟಿ ನಿರೂಪಿಸಿದರು.

Pages