ಮೇ.20 : ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೇ.20 : ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

Share This
ಮಂಗಳೂರು: ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವ ತುಳು ಸಿನಿಮಾ ಪ್ರೀಮಿಯರ್ ಶೋ ಬಹಳ ಯಶಸ್ವಿಯಾಗಿ ಪೂರೈಸಿದ ವೈಭವ್ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕಲ್ ಬ್ಯಾನರ್ ನಡಿಯಲ್ಲಿ ತಯಾರಾದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಮೇ 20 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.
ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್ ನ ಬಿಗ್ ಸಿನಿಮಾಸ್, ಪಿವಿಆರ್ ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನಾ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್ ನಲ್ಲಿ ನಟರಾಜ್, ಸಿನಿಗ್ಯಾಲಕ್ಸಿ, ಕೊಪ್ಪದಲ್ಲಿ ಜೆಎಂಜೆ, ಕಾಸರಗೋಡ್ ನಲ್ಲಿ ಕೃಷ್ಣಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ, ಪ್ಲಾನೆಟ್, ರಾಧಿಕಾ ಮೊದಲಾದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಸಿನಿಮಾದ ನಿರ್ಮಾಕರಾದ ಆನಂದ ಎನ್ ಕುಂಪಲ ಮತ್ತು ನಿರ್ದೇಶಕ ರಾಹುಲ್ ಅಮೀನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

11 ಹೊರ ದೇಶಗಳಲ್ಲಿ ಮತ್ತು ದೇಶದ 6 ಕಡೆಗಳಲ್ಲಿ ಪ್ರೀಮಿಯರ್ ಶೋ ಯಶಸ್ವಿಯಾಗಿ ಪ್ರದರ್ಶನ‌ ಕಂಡಿತು. ಕಳೆದ ಮೂರು ದಿನಗಳಲ್ಲಿ ಸುಮಾರು ಐದು ಸಾವಿರ ವಿದೇಶದಲ್ಲಿರುವ ತುಳುವರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳುವಿನಲ್ಲಿ ದೊಡ್ಡ ಬಜೆಟ್ ನ ಸಿನಿಮಾ ಆಗಿದೆ. ಈ ಸಿನಿಮಾಕ್ಕಾಗಿ ಒಂದೂವರೆ ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಾಗಿದೆ. 'ಒಂದು ಮೊಟ್ಟೆಯ ಕಥೆ' ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಪ್ರಿಕ್ಸ್ ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್ ಸಹಭಾಗಿತ್ವದಲ್ಲಿ 'ರಾಜ್ ಸೌಂಡ್ಸ್ ಆಂಡ್ ಲೈಟ್ಸ್' ತುಳು ಚಿತ್ರ ನಿರ್ಮಾಣಗೊಂಡಿದೆ.

ಈ ಚಿತ್ರವು ಸಂಪೂರ್ಣ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿದ್ದು, ಚಿತ್ರದ ಟೀಸರ್ ಕೆಲವೇ ದಿನಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ತುಳು ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿ ಸಂಚಲನ ಮೂಡಿಸಿದೆ. ಅದ್ದೂರಿಯಾಗಿ ಮೂಡಿಬಂದ ಚಿತ್ರದ ಗೀತೆಯು ಕರಾವಳಿಯಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತುಳು ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಚಿತ್ರದಲ್ಲಿ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಕಥಾ ಹಂದರವನ್ನು ಹೊಂದಿದ್ದು, ನೈಜತೆಗೆ ಒತ್ತುಕೊಟ್ಟು ಸುಂದರವಾಗಿ ಸೆರೆಹಿಡಿಯಲಾಗಿದೆ. ಕೌಟುಂಬಿಕ ಮನೋರಂಜನೆಯ ಜತೆಗೆ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಈ ಚಿತ್ರವನ್ನು ಯುವನಟ ರಾಹುಲ್ ಅಮೀನ್ ನಿರ್ದೇಶಿಸಿದ್ದು, ಆನಂದ್ ಎನ್ ಕುಂಪಲ ನಿರ್ಮಾಪಕರಾಗಿದ್ದಾರೆ.

ಈ ಸಿನೆಮಾದ ಕಥೆಯನ್ನು ವಿನೀತ್ ಕುಮಾರ್ ಹಾಗೂ ಸಂಭಾಷನೆಯನ್ನು ಗಿರಿಗಿಟ್ ಚಿತ್ರ ಖ್ಯಾತಿಯ ಪ್ರಸನ್ನ ಶೆಟ್ಪಿ ಬೈಲೂರು ಬರೆದಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಡ್ಡಾಯಿ ಚಿತ್ರ ಖ್ಯಾತಿಯ ಕ್ಯಾಮರಾಮೆನ್ ವಿಷ್ಣುಪ್ರಸಾದ್ ಅವರು ಚಿತ್ರೀಕರಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಸೃಜನ್ ಕುಮಾರ್ ತೋನ್ಸೆ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕಥೆಯನ್ನು ವಿನೀತ್ ಕುಮಾರ್ ಹಾಗೂ ರಾಹುಲ್ ಅಮೀನ್ ಬರೆದಿದ್ದಾರೆ.

ನಾಯಕರಾಗಿ ವಿನೀತ್ ಕುಮಾರ್, ನಾಯಕಿಯಾಗಿ (ಹೊಸ ಪರಿಚಯ) ಯಶ ಶಿವಕುಮಾರ್ ಹಾಗೂ ನಾಯಕಿ ಕರಿಷ್ಮಾ ಅಮೀನ್ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ಸತೀಶ್ ಬಂದಲೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮರ್ವಿನ್ ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ (ಚಿಂಪು) ಹಾಗೂ ಇನ್ನಿತರ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿ ಅಶೋಕ್ ಕುಮಾರ್, ಸುಹಾನ್ ಪ್ರಸಾದ್ ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗ, ಸೀತಾರಾಮ ಶೆಟ್ಟಿ ಇವರು ಸಹ ನಿರ್ಮಾಪಕರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಭೋಜರಾಜ ವಾಮಂಜೂರು, ವಿನೀತ್ ಕುಮಾರ್, ಚೈತ್ರಾ ಶೆಟ್ಟಿ, ಸುಹಾನ್ ಪ್ರಸಾದ್, ರಾಹುಲ್ ಅಮೀನ್, ಆನಂದ ಎನ್ ಕುಂಪಲ, ವಿಪಿನ್ ಪವನ್ ಕುಮಾರ್ , ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಜೀತೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Pages