ಮಂಡೆಡಿ ಕುಂಜಾರಬೆಟ್ಟುನಲ್ಲಿ ಶಶಿಧರ್ ಶೆಟ್ಟಿ ಇನ್ನಂಜೆ ಕುಟುಂಬಸ್ಥರಿಂದ ಮೈಸಂದಾಯ ಧೂಮಾವತಿ-ಬಂಟ, ವರ್ತೆ-ಪಂಜುರ್ಲಿ ಹಾಗೂ ಪರಿವಾರ ದೈವಗಳ ಹರಕೆಯ ನೇಮೋತ್ಸವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮಂಡೆಡಿ ಕುಂಜಾರಬೆಟ್ಟುನಲ್ಲಿ ಶಶಿಧರ್ ಶೆಟ್ಟಿ ಇನ್ನಂಜೆ ಕುಟುಂಬಸ್ಥರಿಂದ ಮೈಸಂದಾಯ ಧೂಮಾವತಿ-ಬಂಟ, ವರ್ತೆ-ಪಂಜುರ್ಲಿ ಹಾಗೂ ಪರಿವಾರ ದೈವಗಳ ಹರಕೆಯ ನೇಮೋತ್ಸವ

Share This
ಕಾಪು : ಮುಂಬೈಯ ನಲಸಾಪುರದ ಹೊಟೇಲ್ ಉದ್ಯಮಿ ತುಳುಕೂಟ ಫೌಂಡೇಶನ್ ಫೌಂಡೇಶನ್ ಅಧ್ಯಕ್ಷ ಶಶಿಧರ್ ಶೆಟ್ಟಿ ಇನ್ನಂಜೆ ಅವರ ಕುಟುಂಬದ ಕುಂಜಾರಬೆಟ್ಟು ದ್ವಾರಕ ಮನೆಯಲ್ಲಿ ರಾಜನ್ ದೈವ ಮೈಸಂದಾಯ ಧೂಮಾವತಿ-ಬಂಟ, ವರ್ತೆ-ಪಂಜುರ್ಲಿ ಹಾಗೂ ಪರಿವಾರ ದೈವಗಳ ಹರಕೆಯ ನೇಮೋತ್ಸವ ಹಾಗೂ ಅನ್ನದಾನ ಸಂತರ್ಪಣೆಯು ಇತ್ತೀಚೆಗೆ ನಡೆಯಿತು.
ಈ ನೇಮೋತ್ಸವಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಾಯಿ ಪ್ಯಾಲೇಸ್ ಗ್ರೂಪಿನ ರವಿ ಶೆಟ್ಟಿ ಮನೋಹರ್ ಶೆಟ್ಟಿ, ಕಾಪು ಕ್ಷೇತ್ರದ ಬಿಜೆಪಿಯ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ, ಮುಂಬೈ ಬಂಟರ ಸಂಘದ ಪ್ರಾದೇಶಿಕ ಸಮಿತಿಗಳ ಪಕ್ಷಿಮ ವಲಯದ ಸಮನ್ವಯ ಗುಣಪಾಲ ಶೆಟ್ಟಿ ಐಕಳ, ಮುಲುಂಡ್ ಬಂಡ್ಸ್ ಅಧ್ಯಕ್ಷ ವಸಂತ್ ಶೆಟ್ಟಿ ಪಲಿಮಾರು, ಜನತಾದಳ ಪಕ್ಷದ ಕಾಪು ಕ್ಷೇತ್ರದ ಮುಖಂಡ ಯೋಗೀಶ್ ವಿ ಶೆಟ್ಟಿ ಕಾಪು ಹಾಗೂ ವಿವಿಧ ಸಮಾಜ ಸೇವಕರು, ಉದ್ಯಮಿಗಳು ತುಳು ಸಿನಿಮಾ ನಟರು ಆಗಮಿಸಿ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ವಿಶೇಷ ಆಮಂತ್ರಿತರಿಗೆ ಮಂಡೆಡಿ ಕುಂಜಾರಬೆಟ್ಟು ಕುಟುಂಬಸ್ಥರು ಹಾಗೂ ಶಶಿಧರ. ಕೆ. ಶೆಟ್ಟಿ ಇನ್ನಂಜೆ ಅವರು ಶಾಲು ಹೊದಿಸಿ ಗೌರವಿಸಿದರು. 

Pages