ಉಡುಪಿ : ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ಗತಕಾಲದಲ್ಲಿ ಕ್ಷೇತ್ರದಲ್ಲಿ ತಪೋನಿರತನಾಗಿದ್ದ ಕಪಿಲ ಮಹರ್ಷಿಗಳ ಬಿಂಬ ಪ್ರತಿಷ್ಠಾಪನೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ವೇದ ಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರು ಹಾಗೂ ಬನ್ನಂಜೆ ಶನಿ ಕ್ಷೇತ್ರದ ಶ್ರೀ ಶ್ರೀ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಕ್ತರ ಸಮಕ್ಷಮದಲ್ಲಿ ನೆರವೇರಿತ್ತು. ಬೆಳಿಗ್ಗೆ 9.30ಕ್ಕೆ ಒದಗಿದ ವೃಷಭ ಲಗ್ನ ಸುಮುಹೂರ್ತದಲ್ಲಿ ನೆರವೇರಿದ ಈ ಪ್ರತಿಷ್ಠಾ ಮಹೋತ್ಸವದಲ್ಲಿ ಬ್ರಹ್ಮಕುಂಭಾಭಿಷೇಕ ವನ್ನು ಕಾಣಿಯೂರು ಮಠದ ಶ್ರೀ ಶ್ರೀ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀ ಪಾದಂಗಳವರು ನೆರವೇರಿಸಿದರು.



ಕ್ಷೇತ್ರದ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್ ಸೈಟನ್ನು ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಆಯೋಜಿಸಿದ್ದ ಸಭಾಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹಾಗೂ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿ ಜಂಟಿಯಾಗಿ ಲೋಕಾರ್ಪಣೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಶ್ರೀಯುತ ಅರವಿಂದ ಹೆಬ್ಬಾರ್ ಮಾತನಾಡಿ ಈಗಾಗಲೇ ತನ್ನ ಕಾರಣಿಕದ ಅಸ್ತಿತ್ವದಿಂದ ಮನೆ ಮಾತಾಗಿರುವ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಮಹಿಮೆ ದೇಶ ವಿದೇಶದ ಭಕ್ತರಿಗೂ ತಲುಪುವಂತಾಗಲು ಈ ವೆಬ್ಸೈಟ್ ಸಹಕಾರಿಯಾಗಲಿದೆ ಎಂದರು .
ಮಣಿಪಾಲದ ಎಕ್ಸಲನ ಸರ್ಕ್ಯೂಟ್ಸ್ ಪ್ರೈವೇಟ್ ಲಿಮಿಟೆಡ್ನ ಕುಮಾರಿ ಮಾಧವಿ ಶೆಣೈ ರಂಜಿನಿ ಐತಾಳ್ ಮೆಲ್ರಾಯ್ ವಿಲ್ಸನ್ ಪಿಂಟೋ ಹಾಗೂ ಸುದರ್ಶನ್ ಬಿ ಕೆ ಇವರ ತಂಡದಿಂದ ಈ ವೆಬ್ ಸೈಟು ಕ್ಷೇತ್ರಕ್ಕೆ ಕಿರುಕಾಣಿಕೆಯಾಗಿ ಸಮರ್ಪಿಸಲ್ಪಟ್ಟಿತ್ತು.
ಇದರ ನೇತೃತ್ವ ವಹಿಸಿದ್ದ ಸುದರ್ಶನ್ ಬಿ ಕೆ ಇವರನ್ನು ಕ್ಷೇತ್ರದಿಂದ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.
ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು .ಶ್ರೀ ಮಣಿಪಾಲ ಟೆಕ್ನಾಲಜೀಸ್ ನ ನಾಗರಾಜಾಚಾರ್ಯ ಉದ್ಯಮಿ ಆನಂದ್ ಬೈರಿ ದೀಪಕ್ ಕುಮಾರ್ ಮೊಬೈಲ್ ಮತ್ತು ಶಾರದಾ ಗೋವಿಂದಭಟ್ ಕಿಲ್ಪಾಡಿ ಶ್ರೀಮತಿ ಉಷಾ ರಮಾನಂದ ಸ್ವಾತಿ ಆಚಾರ್ಯ ಜಗನ್ನಾಥ ಶೆಟ್ಟಿ ಮುಂಬೈ ಸ್ವಸ್ತಿಕ್ ಆಚಾರ್ಯ ಮೃಣಾಲ್ ಕೃಷ್ಣ ಉಪಸ್ಥಿತರಿದ್ದರು ಹಿರಿಯಡ್ಕದ ಶ್ರೀ ಮತ್ತು ಶ್ರೀಮತಿ ಉಷಾ ಪ್ರಶಾಂತ್ ಅರ್ಚಕ ಅನೀಶ್ ಆಚಾರ್ಯ ಉಪಸ್ಥಿತರಿದ್ದರು.
ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯಸೇವೆ ಸೃಷ್ಟಿ ಕಲಾ ಕುಟೀರದ ನೃತ್ಯಾರ್ಥಿಗಳೂ ಹಾಗೂ ಭ್ರಾಮರಿ ನೃತ್ಯಾಲಯದ ನೃತ್ಯ ರ್ಥಿಗಳಿಂದ ಸಮರ್ಪಿಸಲ್ಪಟ್ಟಿತು. ಕ್ಷೇತ್ರದ ಮಹಾಪ್ರಸಾದವಾದ ಅನ್ನಸಂತರ್ಪಣೆಯು ಬೆಳಿಗ್ಗೆ ಹಾಗೂ ಸಂಜೆ ಭಕ್ತರಿಗೆ ವಿತರಿಸಲ್ಪಟ್ಟಿತು.