ಬೆಂಗಳೂರು ಬಂಟರ ಸಂಘದ 'ಸಂಕಲ್ಪ ಯೋಜನೆ' ಮೂಲಕ ಆರ್ಥಿಕ ಸಂಕಷ್ಟದ ಪ್ರತಿಭಾನ್ವಿತ ಬಂಟ ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ, ವಸತಿ ಸೌಲಭ್ಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರು ಬಂಟರ ಸಂಘದ 'ಸಂಕಲ್ಪ ಯೋಜನೆ' ಮೂಲಕ ಆರ್ಥಿಕ ಸಂಕಷ್ಟದ ಪ್ರತಿಭಾನ್ವಿತ ಬಂಟ ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣ, ವಸತಿ ಸೌಲಭ್ಯ

Share This
ಬೆಂಗಳೂರು : ಬೆಂಗಳೂರು ಬಂಟರ ಸಂಘವು ಆರ್ಥಿಕ ಹಿಂದುಳಿದ ಪ್ರತಿಭಾವಂತ ಬಂಟ ವಿದ್ಯಾರ್ಥಿಗಳಿಗೆ ಆರ್.ಎನ್.ಎಸ್. ವಿದ್ಯಾನಿಕೇತನ –II ಸಂಸ್ಥೆಯಲ್ಲಿ ಉಚಿತ ಪಿಯುಸಿ ಶಿಕ್ಷಣ (ಸೈನ್ಸ್ ಮತ್ತು ಕಾಮರ್ಸ್) ಹಾಗೂ ವಸತಿ ಸೌಲಭ್ಯ ಪಡೆಯಲು ಸುವರ್ಣಾವಕಾಶವನ್ನು 'ಸಂಕಲ್ಪ ಯೋಜನೆ' ಮೂಲಕ ಮಾಡಿದೆ.
ಬೆಂಗಳೂರು ಬಂಟರ ಸಂಘ ನಿರಂತರವಾಗಿ ಉನ್ನತ ಮಟ್ಟದ ಶೈಕ್ಷಣಿಕ ಸೇವೆಯನ್ನು ನೀಡುತ್ತಾ ಬಂದಿದ್ದು, ವಿದ್ಯಾರ್ಥಿವೇತನ ಯೋಜನೆಯ ಮೂಲಕ ಗ್ರಾಮೀಣ ಹಾಗೂ ನಗರ ಭಾಗದ ಆರ್ಥಿಕವಾಗಿ ಹಿಂದುಳಿದ ವಿದಾರ್ಥಿಗಳ ವಿದ್ಯಾರ್ಜನೆಗೆ ನೆರವಾಗಿದೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ಬಂಟ ವಿದ್ಯಾರ್ಥಿಗಳಿಗೆ ಕನಿಷ್ಟ ಶುಲ್ಕ ಅಥವಾ ಉಚಿತವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ನಮ್ಮ ಸಾಮಾಜಿಕ ಬದ್ಧತೆಯನ್ನು ತೋರಿದ್ದೇವೆ. 2020 ರಲ್ಲಿ ಕೊರೋನಾ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರ ಭಾಗದ ಆರ್ಥಿಕವಾಗಿ ಹಿಂದುಳಿದ ಒಟ್ಟು 37 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಚಿತ ಪಿಯುಸಿ ಶಿಕ್ಷಣ ಹಾಗೂ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತ ವಸತಿಯನ್ನು ಕಲ್ಪಿಸಿದೆ. ಈ ಯೋಜನೆಯನ್ನು ಮುಂದುವರಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಬಂಟ ಸಮುದಾಯದ ಒಟ್ಟು 50 (ವಿಜ್ಞಾನ ವಿಭಾಗಕ್ಕೆ 30 ಹಾಗೂ ವಾಣಿಜ್ಯ ವಿಭಾಗಕ್ಕೆ 20 ವಿದ್ಯಾರ್ಥಿಗಳು) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನ-II ಸಂಸ್ಥೆಯಲ್ಲಿ ಉಚಿತ ಪಿಯುಸಿ ಶಿಕ್ಷಣ ಹಾಗೂ ವಸತಿ ಕಲ್ಪಿಸುವ ‘ಸಂಕಲ್ಪ ಯೋಜನೆ'ಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. 
 
ಕೋವಿಡ್ 19 ತುರ್ತು ಪರಿಸ್ಥಿತಿಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಮುದಾಯ ಬಾಂಧವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ನೂತನ ಯೋಜನೆಯೊಂದನ್ನು ನಮ್ಮ ಸಂಘವು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಬೆಂಗಳೂರಿನ ಹಾಗೂ ಕರಾವಳಿಯ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಬಂಟ ಸಮುದಾಯದ ಪದವಿಪೂರ್ವ ವಿದ್ಯಾಭ್ಯಾಸ (ಪಿಯುಸಿ) ಪಡೆಯಲಿಚ್ಛಿಸುವ ಅರ್ಹ ಫಲಾನುಭವಿಗಳಿಗೆ ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನ -II ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಹಾಗೂ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಅರ್ಜಿ ಸಲ್ಲಿಸಲು ನಿಯಮ/ ಮಾನದಂಡಗಳು 
* ಬೆಂಗಳೂರು ನಗರ, ಕರಾವಳಿ ಹಾಗೂ ರಾಜ್ಯದ ವಿವಿಧ ಭಾಗದ ಶಾಲೆಗಳಲ್ಲಿ 2021-22ನೇ ಸಾಲಿನಲ್ಲಿ 10ನೇ ತರಗತಿ ಶಿಕ್ಷಣ ಪೂರೈಸುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಅಭ್ಯರ್ಥಿಗಳು (ಸಂಘದ ಸದಸ್ಯರು ಹಾಗೂ ಸದಸ್ಯೇತರರು) ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-04-2022.

*ಪ್ರವೇಶ ಪರೀಕ್ಷೆಗಳು ದಿನಾಂಕ 17.04.2022, ಭಾನುವಾರದಂದು ಈ ಕೆಳಗಿನ ಸಂಘಗಳ ವ್ಯಾಪ್ತಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಏಕಕಾಲದಲ್ಲಿ ನಡೆಸಲಾಗುವುದು. ಬೆಂಗಳೂರು, ಮಂಗಳೂರು, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ/ಬೆಳ್ಮಣ್, ಮೂಡುಬಿದಿರೆ, ಬೆಳ್ತಂಗಡಿ, ಗುರುಪುರ, ಕಾಸರಗೋಡು, ಪುತ್ತೂರು, ಸುಳ್ಯ, ಬಂಟ್ವಾಳ, ಪಡುಬಿದ್ರಿ, ಕೊಪ್ಪ, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಚಿಕ್ಕಮಗಳೂರು, ಬಾಳೆಹೊನ್ನೂರು, ಭದ್ರಾವತಿ, ತುಮಕೂರು, ಸಕಲೇಶಪುರ, ಮಡಿಕೇರಿ, ಹುಬ್ಬಳ್ಳಿ, ಬೆಳಗಾಂ ಇತ್ಯಾದಿ.

* ವಿದ್ಯಾರ್ಥಿ ಹಾಗೂ ತಂದೆ/ತಾಯಿ/ ಪೋಷಕರ ವಿಳಾಸ ಧೃಢೀಕರಣದ ಪ್ರತಿ (ಆಧಾರ್‍ಕಾರ್ಡ್) ಕಡ್ಡಾಯ.

* ಪೋಷಕರು ಬಿಪಿಎಲ್/ ಅಂತ್ಯೋದಯ ಪಡಿತರಚೀಟಿ ಹೊಂದಿದ್ದು, ಅದರಲ್ಲಿ ಅಭ್ಯರ್ಥಿಯ ಹೆಸರು ಕಡ್ಡಾಯವಾಗಿ ಇರತಕ್ಕದ್ದು.

* 2021-22 ನೇ ಸಾಲಿನಲ್ಲಿ 10ನೇ ತರಗತಿ ಶಿಕ್ಷಣ ಪಡೆಯುತ್ತಿರುವ/ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಕೋರ್ಸ್‍ಗೆ (ಕಾಮರ್ಸ್ ಮತ್ತು ಸೈನ್ಸ್) ಅರ್ಜಿ ಸಲ್ಲಿಸಬಹುದು.

* ಕ್ರೀಡೆ, ಕಲೆ ಅಥವಾ ಇನ್ಯಾವುದೇ ಕ್ಷೇತ್ರಗಳಲ್ಲಿ ರಾಜ್ಯ/ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.

* ಸ್ಥಳೀಯ ಸಂಘಗಳ ಸಹಯೋಗದೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ಮನೆಗೆ ಭೇಟಿ ನೀಡಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಿ, ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮವಾಗಿ ಮೌಖಿಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಸಹಯೋಗ ನೀಡುವ ಪ್ರತೀ ಸಂಘಗಳಿಗೂ ಪ್ರಾತಿನಿಧ್ಯ ನೀಡಲಾಗುವುದು. ಷರತ್ತುಗಳು ಅನ್ವಯ.

* ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಂಟರ ಸಂಘ ಆರ್.ಎನ್.ಎಸ್. ವಿದ್ಯಾನಿಕೇತನ-II ಸಂಸ್ಥೆಯಲ್ಲಿ (ಯಲಚಗುಪ್ಪೆ ಗ್ರಾಮ, ತಾವರೆಕೆರೆ ಹೋಬಳಿ, ಬೆಂಗಳೂರು ದಕ್ಷಿಣ ತಾಲೂಕು) ಉಚಿತ ಪಿಯುಸಿ ಶಿಕ್ಷಣ (ಸೈನ್ಸ್ ಮತ್ತು ಕಾಮರ್ಸ್) ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. (ಅರ್ಹ ಸೈನ್ಸ್ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಲಭ್ಯವಿದೆ).
 
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು 
* ವಿದ್ಯಾರ್ಥಿ ಹಾಗೂ ತಂದೆ/ತಾಯಿ/ ಪೋಷಕರ ರೇಷನ್‍ ಕಾರ್ಡ್ ಪ್ರತಿ (ಬಿಪಿಎಲ್/ ಅಂತ್ಯೋದಯ) ಮತ್ತು ವಿಳಾಸ ಧೃಢೀಕರಣದ ಪ್ರತಿ (ಆಧಾರ್‍ಕಾರ್ಡ್).

* ಬೆಂಗಳೂರು ಬಂಟರ ಸಂಘದ ಸದಸ್ಯತ್ವದ ಗುರುತಿನ ಚೀಟಿಯ ಪ್ರತಿ (ಸದಸ್ಯರಾಗಿದ್ದಲ್ಲಿ).

* ಕಳೆದ ಶೈಕ್ಷಣಿಕ ಸಾಲಿನ ಅಂಕಪಟ್ಟಿಯ ಧೃಢೀಕೃತ ಪ್ರತಿ. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ (ಬಿಪಿಎಲ್/ ಅಂತ್ಯೋದಯ ಕಾರ್ಡ್, ವಿಳಾಸ ಧೃಢೀಕರಣ) ಸಂಘದ ಕಛೇರಿಯಲ್ಲಿ ಖುದ್ದಾಗಿ/ಪೋಸ್ಟ್ ಮೂಲಕ ದಿನಾಂಕ 15-04-2022ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Pages