ತುಳು ಚಿತ್ರಗಳಿಗೆ ಮಲ್ಟಿ ಫ್ಲೆಕ್ಸ್ ಶೇರ್ ಹೆಚ್ಚಿಸಲು ಹೋರಾಟ ಅಗತ್ಯ : ಪ್ರಕಾಶ್ ಪಾಂಡೇಶ್ವರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ತುಳು ಚಿತ್ರಗಳಿಗೆ ಮಲ್ಟಿ ಫ್ಲೆಕ್ಸ್ ಶೇರ್ ಹೆಚ್ಚಿಸಲು ಹೋರಾಟ ಅಗತ್ಯ : ಪ್ರಕಾಶ್ ಪಾಂಡೇಶ್ವರ

Share This
ಸುರತ್ಕಲ್: ತುಳು ಚಿತ್ರಗಳಿಗೆ ಮಲ್ಟಿ ಫ್ಲೆಕ್ಸ್ ಗಳಲ್ಲಿ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಕನ್ನಡ ಅಥವಾ ಪರ ಭಾಷೆಯ ಸಿನಿಮಾಗಳಿಗೆ ಹೆಚ್ಚಿನ ಶೇರ್ ಸಿಗುತ್ತಿದ್ದು ಈ ಮಲತಾಯಿ ಧೋರಣೆ ವಿರುದ್ದ ತುಳುನಾಡಿನ ಚಿತ್ರ ನಿರ್ಮಾಪಕರು ಮಾತ್ರವಲ್ಲ ಸಮಸ್ತ ತುಳುವರೂ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ತುಳು ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಹೇಳಿದರು.
ಅವರು ನಗರದ ಉರ್ವ ಸ್ಟೋರ್ ನಲ್ಲಿನ ತುಳು ಸಾಹಿತ್ಯ ಭವನದಲ್ಲಿ ಜರುಗಿದ "ರಾಜ್ ಸೌಂಡ್ಸ್ ಆಂಡ್ ಲೈಟ್ಸ್" ಚಿತ್ರದ ವರ್ಲ್ಡ್ ಪ್ರೀಮಿಯರ್ ಶೋ ಕುರಿತ ಪತ್ರಿಕಾಗೋಷ್ಟಿಯಲ್ಲಿ ಮಾತಾಡುತ್ತಿದ್ದರು. ಮಲ್ಟಿ ಫ್ಲೆಕ್ಸ್ ಗಳಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ಮೊದಲ ವಾರಗಳ ಶೇರ್ 50% 47.5% ಹಾಗೂ 45% ಇದ್ದರೆ ತುಳು ಭಾಷಾ ಸಿನಿಮಾಗಳಿಗೆ ಶೇ. 50, 40, 30 ಶೇರ್ ನೀಡಲಾಗುತ್ತಿದೆ. ಇದು ತುಳು ಚಿತ್ರರಂಗಕ್ಕೆ ದೊಡ್ಡ ಹೊಡೆತವಾಗಿದ್ದು ಇದನ್ನು ಸರಿಪಡಿಸಲು ಹೋರಾಟ ನಡೆಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಯಾಕೆಂದರೆ ತುಳು ಚಿತ್ರಗಳಿಗೆ ಇಲ್ಲಿ ಸಾಕಷ್ಟು ಸಂಖ್ಯೆಯ ಥಿಯೇಟರ್ ಗಳಿಲ್ಲ. ಇರುವ ಥಿಯೇಟರ್ ಗಳನ್ನೂ ಮಾಲಕರು ನೀಡುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ. ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾ ವಿಶ್ವದ 11 ರಾಷ್ಟ್ರಗಳಲ್ಲಿ ಪ್ರೀಮಿಯರ್ ಆಗುತ್ತಿದ್ದು ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

ಬಳಿಕ ಮಾತಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು, ತುಳುನಾಡಿನಲ್ಲಿರುವ ಥಿಯೇಟರ್ ಗಳನ್ನು ತುಳು ಸಿನಿಮಾಗಳಿಗೆ ನೀಡದೆ ಇರುವುದು ವಿಪರ್ಯಾಸ. ಈ ಕುರಿತು ಮುಂದಿನ ದಿನಗಳಲ್ಲಿ ಸರಕಾರದ ಗಮನ ಸೆಳೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಬೇಕು. ಈ ಕುರಿತು ನಾವೆಲ್ಲರೂ ಒಗ್ಗಟ್ಟಾಗಿ ತುಳು ಭಾಷೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಡಾ. ದೇವರಾಜ್ ಕೆ, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ನಿರ್ಮಾಪಕ ಆನಂದ್ ಎನ್ ಕುಂಪಲ, ಭೋಜರಾಜ್ ವಾಮಂಜೂರ್, ಸಹ ನಿರ್ಮಾಪಕ ಬಿ.ಅಶೋಕ್ ಕುಮಾರ್, ನವನೀತ್ ಕದ್ರಿ, ಸೋಹನ್ ಪ್ರಸಾದ್, ಲೀಲಾಕ್ಷ ಕರ್ಕೇರ, ಶಿವಪ್ರಸಾದ್, ನಿರ್ದೇಶಕ ರಾಹುಲ್ ಅಮೀನ್, ಸಹ ನಿರ್ಮಾಪಕ ಅಜಯ್ ಬಳಿಗಾ, ಕ್ಯಾಟ್ಕಾ ಅಧ್ಯಕ್ಷ ಮೋಹನ್ ಕೊಪ್ಪಲ, ಸಹ ನಿರ್ಮಾಪಕ ನಿತಿನ್ ರಾಜ್ ಶೆಟ್ಟಿ, ನಟ ವಿಜೆ ವಿನೀತ್, ರೋಷನ್ ರೋನಾಲ್ಡೋ, ಚೈತ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಿಜೆ ವಿನೀತ್ ಕಾರ್ಯಕ್ರಮ ನಿರೂಪಿಸಿದರು.

Pages