ಬೆಳ್ತಂಗಡಿ : ಕಣಿಯೂರು ಗ್ರಾಮದ ಹಿರಿಯ ವ್ಯಾಪಾರಿ ಶೀನ ಶೆಟ್ಟಿ ಕಣಿಯೂರು (69 ವರ್ಷ) ಅವರು ಎ.23ರ ಶನಿವಾರ ಮಧ್ಯಾಹ್ನ 3 ಗಂಟೆಗೆ ನಿಧನ ಹೊಂದಿದರು.
ಶೀನ ಶೆಟ್ಟಿ ಅವರು ಸುಮಾರು 50 ವರ್ಷಗಳಿಂದ ಕಣಿಯೂರಿನಲ್ಲಿ ಹೋಟೆಲ್ ಬೀಡಿ ಬ್ರಾಂಚ್ ಹಾಗೂ ದಿನಸಿ ಉದ್ಯಮಗಳನ್ನು ನಡೆಸುತ್ತಿದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮನ್ನು ತೆರೆಮರೆಯಲ್ಲಿ ತೊಡಗಿಸಿಕೊಂಡಿದ್ದರು. ಶ್ರೀ ಮಹಾವಿಷ್ಣು ಭಜನಾ ಮಂದಿರ ಇದರ ಮಾಜಿ ಅಧ್ಯಕ್ಷರಾಗಿ ಮಂದಿರದ ಅಭಿವೃದ್ಧಿಗೆ ಶ್ರಮಿಸಿದ್ದರು. ಸರಳ ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯಿಂದ ಜನಾನುರಾಗಿಯಾಗಿದ್ದ ಅವರು ಕೊಡುಗೈ ದಾನಿಯಾಗಿ ಊರಿನ ಹಲವಾರು ಬಡ ಕುಟುಂಬಗಳಿಗೆ ಬೆನ್ನೆಲುಬಾಗಿದ್ದರು. ಸುಮಾರು 8 ವರ್ಷಗಳಿಂದ ಕಣಿಯೂರು ತೊರೆದು ತಮ್ಮ ವಿಶ್ರಾಂತ ಜೀವನವನ್ನು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ತಮ್ಮ ಸ್ವಗ್ರಹದಲ್ಲಿ ನಡೆಸುತ್ತಿದ್ದರು.
ಅವರು ಪತ್ನಿ ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಅರುಣಾ ಶೆಟ್ಟಿ ಮಗಳು ಪ್ರಮೀಳಾ .ಡಿ. ಶೆಟ್ಟಿ ಅಳಿಯ ಉದ್ಯಮಿ, ಧಾರ್ಮಿಕ ಮುಂದಾಳು ದುರ್ಗಾದಾಸ್ ಶೆಟ್ಟಿ ಕರಿಂಕಿಜೆ, ಮಗ ಪ್ರಶಾಂತ್ ಶೆಟ್ಟಿ ಸೊಸೆ ಕೃತಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.