ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ತುಳು ಎಂಎ ಸ್ನಾತಕೋತ್ತರ ಪರೀಕ್ಷೆಯಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಪಿ. ರೈ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ವಿಜಯಲಕ್ಷ್ಮಿ ರೈ ಅವರು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಕವಿ, ಉತ್ತಮ ಬರಹಗಾರರಾಗಿದ್ದಾರೆ.
ತುಳುನಾಡಿನ ಮಾತೃಭಾಷೆ ತುಳು ಭಾಷೆಯ ಎಂಎ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಮತಿ ವಿಜಯಲಕ್ಷ್ಮಿ ರೈ ಅವರಿಗೆ ಬಂಟ್ಸ್ ನ್ಯೂಸ್ ವತಿಯಿಂದ ಹಾರ್ದಿಕ ಅಭಿನಂದನೆಗಳು.