ಬಂಟ್ಸ್ ನ್ಯೂಸ್, ಉಡುಪಿ : ಸನ್ಮಾನ ಸಮಿತಿ ಮತ್ತು ಗ್ರಾಮಸ್ಥರು ಮೊಳಹಳ್ಳಿ, ಕುಂದಾಪುರ ತಾಲೂಕು ಇವರ ವತಿಯಿಂದ ಲೈಪ್'ಲೈನ್ ಫೀಡ್ಸ್ (ಇಂಡಿಯಾ) ಪ್ರೈ. ಲಿ. ಇದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಕೈಲ್ಕೆರೆ ಕಿಶೋರ್ ಕುಮಾರ್ ಶೆಟ್ಟಿ ಹಾಗೂ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಅವರಿಗೆ ಹುಟ್ಟೂರ ಸನ್ಮಾನವು ಎ.10ರಂದು ಮೊಳಹಳ್ಳಿಯ ಮಲ್ನಾಡ್ ಟೈಲ್ಸ್ ಆವರಣದಲ್ಲಿ ನಡೆಯಲಿದೆ.
ಸಮಾರಂಭವು ನಿಟ್ಟೆ ವಿಶ್ವವಿದ್ಯಾಲಯದ ಸಹಕಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ಫೌಂಡೇಶನ್ (ರಿ) ಇದರ ಡಾ. ಎಂ. ಮೋಹನ್ ಆಳ್ವ ಅವರು ಯಶಸ್ವಿ ಉದ್ಯಮಿದ್ವಯರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.
ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮೊಳಹಳ್ಳಿ ಎಂ. ಎಂ. ಹೆಗ್ಡೆ ಚಾರಿಟೇಬಲ್ ಫೌಂಡೇಶನ್ (ರಿ) ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಂದಿರಾ ಯು. ಶೆಟ್ಟಿ ಅವರ ಗೌರವ ಉಪಸ್ಥಿತಿ ಇರಲಿದೆ.