ಕುಂದಾಪುರ : ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ ಹೆಗ್ಡೆ ಆಯ್ಕೆಯಾಗಿದ್ದಾರೆ.
ಮುಂದಿನ 2 ವರ್ಷಗಳ ಸಂಘದ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಎ.25ರಂದು ನಡೆಯಿತು.
ಪ್ರತಿಷ್ಠಿತ ಕುಂದಾಪುರ ಬಾರ್ ಅಸೋಸಿಯೇಶನ್ (ರಿ), ಕುಂದಾಪುರ (ವಕೀಲರ ಸಂಘ) ಇದರ 2022-24ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸತತ 2ನೇ ಬಾರಿ ಆಯ್ಕೆಯಾದ ಬನ್ನಾಡಿ ಸೋಮನಾಥ ಹೆಗ್ಡೆ ಅವರಿಗೆ 'ಬಂಟ್ಸ್ ನ್ಯೂಸ್' ವತಿಯಿಂದ ಪ್ರೀತಿಯ ಅಭಿನಂದನೆಗಳು.