ಬಂಟ್ವಾಳ: ಮಾಯಿಲ್ಕೋಡಿಗುತ್ತು ಕುಟುಂಬದ ಯಜಮಾನರಾದ ದಯಾನಂದ ಶೆಟ್ಟಿ ಮಾಯಿಲ್ಕೋಡಿಗುತ್ತು ಅವರಿಗೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ ಗಡಿ ಪ್ರದಾನ ಮಾಡಲಾಯಿತು.
ಹಿರಿಯರಾದ ಮಾಯಿಲ್ಕೋಡಿ ಗುತ್ತು ತ್ಯಾಂಪು ಶೆಟ್ಟಲ್ ಎಂಬವರು ಹಲವು ವರ್ಷಗಳ ಕಾಲ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವದ (ಎರಡನೆ) ಮಾಯಿಲ್ಕೋಡಿಗುತ್ತು ಮನೆಯ ಗಡಿ ಪ್ರದಾನರಾಗಿದ್ದರು. ಅವರು ಕಾಲವಾದ ನಂತರ ಗಡಿ ಪ್ರದಾನವಾಗಿರಲಿಲ್ಲ.
ಇತ್ತೀಚೆಗೆ ಮಾಯಿಲ್ಕೋಡಿಗುತ್ತು ಮನೆಯಲ್ಲಿ ನಡೆದ ಧರ್ಮ ನೇಮೊತ್ಸವದಲ್ಲಿ ಮಾಯಿಲ್ಕೋಡಿ ಗುತ್ತು ಕುಟುಂಬದ ಯಜಮಾನರಾದ ದಯಾನಂದ ಶೆಟ್ಟಿ ಮಾಯಿಲ್ಕೋಡಿಗುತ್ತು ಅವರಿಗೆ ಕಾಂಬೋಡಿಗುತ್ತು ಉಗ್ಗೆದಲ್ತಾಯ ದೈವದ ಗಡಿ ಪ್ರಧಾನರಾಗಿ ಗಂಧ ಬೂಲ್ಯ ನೀಡಲಾಯಿತು. ಇನ್ನು ಮುಂದೆ ಮಾಯಿಲ್ಕೋಡಿಗುತ್ತು ಮನೆಯಲ್ಲಿ ತನ್ನ ಸೇವೆಯನ್ನು ನಡೆಸಿಕೊಂಡು ಬರಲು ಶ್ರೀ ಉಗ್ಗೆದಲ್ತಾಯ ದೈವ ಅವರಿಗೆ ಅಭಯ ನೀಡಿತು.