ಮೇ.14 -18 : ಕೊಡಿಪ್ಪಾಡಿ ಹಣಿಯೂರುಗುತ್ತು ತರವಾಡು ಮನೆ ಗೃಹ ಪ್ರವೇಶ, ಧರ್ಮ ನೇಮೋತ್ಸವ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೇ.14 -18 : ಕೊಡಿಪ್ಪಾಡಿ ಹಣಿಯೂರುಗುತ್ತು ತರವಾಡು ಮನೆ ಗೃಹ ಪ್ರವೇಶ, ಧರ್ಮ ನೇಮೋತ್ಸವ

Share This
ಪುತ್ತೂರು : ಪುತ್ತೂರು ತಾಲೂಕಿನ ಕೊಡಿಪ್ಪಾಡಿಯ ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದ ಶ್ರೀ ಧೂಮಾವತಿ - ಬಂಟ, ವರ್ಣರ ಪಂಜುರ್ಲಿ, ಕಲ್ಲುರ್ಟಿ ಕೊರತಿ, ಜಾವತೆ, ಗುಳಿಗ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗೃಹ ಪ್ರವೇಶ ಹಾಗೂ ಶ್ರೀ ದೈವಗಳ ಧರ್ಮ ನೇಮೋತ್ಸವವು ದಿನಾಂಕ ಮೇ 14 ರಿಂದ 18ರ ವರೆಗೆ ವೇದಮೂರ್ತಿ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿದೆ.
ದಿನಾಂಕ ಮೇ. 14ರ ಶನಿವಾರ ಬೆಳಿಗ್ಗೆ 7:00ಗಂಟೆಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಸ್ಥಳ ಶುದ್ಧಿ ಮತ್ತು ದೈವಗಳ ಭಂಡಾರಗಳನ್ನು ನೂತನ ತರವಾಡು ಮನೆಗೆ ತರುವುದು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 3:00ಗಂಟೆಗೆ ಹೊರೆಕಾಣಿಕೆ ಮೆರವಣೆಗೆಯು ಕಬಕ ಮಹಾದೇವಿ ದೇವಸ್ಥಾನದಿಂದ ಹೊರಡಲಿದೆ.

ದಿನಾಂಕ ಮೇ. 15ರ ಆದಿತ್ಯವಾರ ಬೆಳಗ್ಗೆ 7:00 ಗಂಟೆಗೆ ಗಣಪತಿ ಹೋಮ, ನಾಗತಂಬಿಲ, ಚಂಡಿಕಾ ಹೋಮ, ಹರಿಸೇವೆ ನಡೆಯಲಿದೆ. ಬೆಳಗ್ಗೆ 09:52 ರಿಂದ 10:22ರ ವರೆಗೆ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ. ಸಂಜೆ 04:00 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆಶೀರ್ವಚನವನ್ನು ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿ ವಜ್ರದೇಹಿಮಠ, ಗುರುಪುರ ನೀಡಲಿದ್ದಾರೆ. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು, ಧಾರ್ಮಿಕ ಉಪನ್ಯಾಸವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶ್ರೀ ಮುಳಿಯ ಕೇಶವ ಭಟ್, ಮುಖ್ಯ ಅತಿಥಿಗಳಾಗಿ ಭಾಜಪಾದ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮೀನುಗಾರಿಕಾ ಬಂದರು ಒಳನಾಡು ಸಚಿವರಾದ ಎಸ್. ಅಂಗಾರ, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಲಕ್ಷ್ಮೀ ಜನಾರ್ಧನ ದೇವಸ್ಥಾನದ ಅಧ್ಯಕ್ಷರಾದ ಜನಾರ್ಧನ ಎರ್ಕಡಿತ್ತಾಯ, ಪರಿವಾರ ಬಂಟರ ಸಂಘದ ಸಂತೋಷ್ ಕುಮಾರ್ ವಹಿಸಲಿದ್ದಾರೆ. 

ಅಂದು ರಾತ್ರಿ 7:00ಗಂಟೆಗೆ ವರ್ಣರ ಪಂಜುರ್ಲಿ ಮತ್ತು ಜಾವತೆ ದೈವಗಳ ಭಂಡಾರ ತೆಗೆಯುವುದು ಹಾಗೂ ನೇಮೋತ್ಸವ ನಡೆಯುತ್ತದೆ ನಂತರ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ ಮೇ. 16ರ ಸೋಮವಾರ ಸಂಜೆ 4:00ಗಂಟೆಗೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ದೈವಗಳ ಬಂಡಾರ ತೆಗೆಯುವುದು ಮತ್ತು ನೇಮೋತ್ಸವ ನಡೆಯಲಿದೆ.

ದಿನಾಂಕ ಮೇ. 17ರ ಮಂಗಳವಾರ ಸಂಜೆ 6:00 ಗಂಟೆಗೆ ಶ್ರೀ ಧರ್ಮ ದೈವ ಧೂಮಾವತಿ ಬಂಟ ದೈವಗಳ ಭಂಡಾರ ತೆಗೆಯುವುದು ಹಾಗೂ ನೇಮೋತ್ಸವ, ಗುಳಿಗ ನೇಮೋತ್ಸವ ನಡೆಯಲಿದೆ.

ದಿನಾಂಕ ಮೇ. 18ರ ಬುಧವಾರ ದೈವಗಳಿಗೆ ಕುರಿತಂಬಿಲ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಭಾಗವಹಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನ ಹಾಗೂ ತರವಾಡು ಮನೆ ನಿರ್ಮಾಣಕ್ಕೆ ಬಾಲಕೃಷ್ಣ ನಾೈಕ್ ಹಣಿಯೂರು ಕುಟುಂಬದ ಯಜಮಾನರು, ರಾಧಾಕೃಷ್ಣ ನಾೈಕ್ ಮೈಸೂರು, ಶ್ರೀನಿವಾಸ ನಾೈಕ್ ಹಣಿಯೂರು, ಪುರುಷೋತ್ತಮ ನಾೈಕ್ ಹಣಿಯೂರು, ಅಶೋಕ ನಾೈಕ್ ಹಣಿಯೂರು ಇವರುಗಳು ಸ್ಥಳ ದಾನ ಮಾಡಿರುತ್ತಾರೆ.

ಈ ಪತ್ರಿಕಾಗೋಷ್ಠಿಯಲ್ಲಿ ಸತೀಶ್ ನಾೈಕ್ ಪರ್ಲಡ್ಕ, ಅಶೋಕ್ ನಾೈಕ್ ಹಣಿಯೂರು, ಶ್ರೀನಿವಾಸ್ ನಾೈಕ್ ಹಣಿಯೂರು, ಪುರುಷೋತ್ತಮ ನಾೈಕ್ ಹಣಿಯೂರು, ಕೀರ್ತಿನ್ ನಾೈಕ್ ಹಣಿಯೂರು, ಸುಕೇಶ್ ನಾೈಕ್ ಬೈರಂಗಡಿ ಉಪಸ್ಥಿತರಿದ್ದರು.

Pages