ಅರವತ್ತು ಸಂವತ್ಸರ ಪೂರೈಸಿದ ಐಕಳ ಹರೀಶ್ ಶೆಟ್ಟಿ ಅವರಿಗೆ ಅಭಿನಂದನೆಗಳ ಮಹಾಪೂರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಅರವತ್ತು ಸಂವತ್ಸರ ಪೂರೈಸಿದ ಐಕಳ ಹರೀಶ್ ಶೆಟ್ಟಿ ಅವರಿಗೆ ಅಭಿನಂದನೆಗಳ ಮಹಾಪೂರ

Share This

ಸಂಘಟಕನಾಗಿ ಬೆಳೆಯಲು ಜನರ ಆಶೀರ್ವಾದವೇ ಕಾರಣ : ಐಕಳ ಹರೀಶ್ ಶೆಟ್ಟಿ

ಮುಂಬೈ : ಬಂಟರ ಸಮಾಜದ ಏಳಿಗೆಗಾಗಿ ಸುದೀರ್ಘ ಕಾಲದಿಂದ ಸೇವಾ ನಿರತರಾಗಿರುವ ಬಂಟ ಸಮಾಜವನ್ನು ವಿಶ್ವದಲ್ಲೆಡೆ ಗುರುತಿಸಿದ ಸಾಧನೆಯ ಸಾಧಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ 60ನೇ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿ ಅವರ 55ನೇ ಜನ್ಮದಿನ ಆಚರಣೆಯ ಪ್ರಯುಕ್ತ ಏಪ್ರಿಲ್ 19ರಂದು ತಮ್ಮ ಬಂಧುಗಳ ಆಶೀರ್ವಾದ, ಹಿತೈಷಿಗಳ ಶುಭಾಶಯಗಳೊಂದಿಗೆ ತಮ್ಮ ನಿವಾಸದಲ್ಲಿ ಸರಳ ರೀತಿಯಲ್ಲಿ ಕೇಕ್ ಕತ್ತರಿಸಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು, ಜನುಮ ದಿನ ಸಂಭ್ರಮದಿಂದ ಆಚರಿಸಿಕೊಂಡ ಬಂದವನಲ್ಲ, ಆದರೆ ಹಿತೈಷಿಗಳೆಲ್ಲರ ಸಂತೋಷಕ್ಕಾಗಿ ಹುಟ್ಟುಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿ ಕೊಂಡಿದ್ದೇನೆ. ಬಾಲ್ಯದಲ್ಲಿ ಸಮಾಜಸೇವೆ ಮಾಡುವ ಆಸಕ್ತಿಯಿಂದ ಮುಂಬೈ ನಗರದಲ್ಲಿ ಹಂತಹಂತವಾಗಿ ಸಮಾಜದ ಋಣ ಸಂದಾಯದ ಸೇವೆ ಮಾಡಿದ್ದೇನೆ. ಜಾಗತಿಕ ಬಂಟರ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಮಾಡುತ್ತಿರುವ ಸಮಾಜಸೇವೆ ನನಗೆ ಆತ್ಮತೃಪ್ತಿಯನ್ನು ತಂದಿದೆ. ಸಮಾಜದಲ್ಲಿ ಅಪಾರ ಸಂಖ್ಯೆಯಲ್ಲಿ ಕಡು ಬಡತನದ ಕುಟುಂಬಗಳಿವೆ. ಅವರೆಲ್ಲರಿಗೂ ಸಹಕಾರ ಸಹಾಯ ಹಸ್ತ ನೀಡುವುದರಲ್ಲಿ ನಾನು ಸಂತೋಷಪಟ್ಟಿದ್ದೇನೆ. ನಾನು ಏನು ಸಾಧನೆ ಮಾಡಿದ್ದೇನೆ ಅದು ನನ್ನ ಪರಿವಾರದ ಮತ್ತು ಹಿತೈಷಿಗಳ ಅಭಿಮಾನಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದರು.

ಸಮಾಜದ ಬಂಧುಗಳಿಗೆ ಸಹಕಾರ ನೀಡಲು ದಾನಿಗಳು ಸಹಕಾರ ನೀಡಿದ್ದಾರೆ. ಆದ್ದರಿಂದ ಬಡತನದ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಮುಂದೆ ಬಡ ಕುಟುಂಬಗಳ ಆಶ್ರಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಅದಕ್ಕೆಲ್ಲ ಸಮಾಜ ಬಾಂಧವರ ಸಹಕಾರ ಅಗತ್ಯ ಎಂದು ತಿಳಿಸಿದರು.

ಹರೀಶ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ ಅವರನ್ನು ಅವರ ಬಾಲ್ಯದ ಗೆಳೆಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಕೋ. ಸೊಸೈಟಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ, ಶಾಲು ಹೊದಿಸಿ ಹೂಗುಚ್ಛ ನೀಡಿ ನೀಡಿದರು. ಬಳಿಕ ಕೇಕ್ ಕತ್ತರಿಸಿ ಶುಭ ಹಾರೈಸಿದರು.

ಏಪ್ರಿಲ್ 19ರ ಮುಂಜಾನೆ ವಸಯದಲ್ಲಿರುವ ಹರೀಶ್ ಶೆಟ್ಟಿಯವರ ಮಾಲಕತ್ವದ ಕಿಂಗ್ಸ್ ರೆಸೋರ್ಟ್ ನಲ್ಲಿ 60ನೇ ವರ್ಷದ ಆಚರಣೆಯ ಪ್ರಯುಕ್ತ ಕೇಕನ್ನು ಕತ್ತರಿಸಲಾಯಿತು. ಈ ಸಂದರ್ಭದಲ್ಲಿ ತುಳು ಕೂಟ ಫೌಂಡೇಶನ್ ನಲಾಸೋಪಾರ ಇದರ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಕೋಶಾಧಿಕಾರಿ ಜಗನ್ನಾಥ್ ಡಿ ಶೆಟ್ಟಿ ಪಲ್ಲಿ, ಬಂಟರ ಸಂಘ ಮುಂಬಯಿ, ವಸಯಿ-ಡಹಾಣು ಪ್ರಾದೇಶಿಕ ಸಮಿತಿಯ, ಉಪ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕಣಂಜಾರ್, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ ನೀರೆ, ಮತ್ತು ವಿಜಯ ಶೆಟ್ಟಿ ಕುತ್ತೆತ್ತೂರು ಸುಭಾಷ್ ಶೆಟ್ಟಿ ನಿರ್ಮಲ್ ಉಪಸ್ಥಿತರಿದ್ದರು. 

ಪೂರ್ವಾಹ್ನ ದಾದರ್'ನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಐಕಳ ಹರೀಶ್ ಶೆಟ್ಟಿ ದಂಪತಿ ತೆರಳಿ ಸಿದ್ಧಿವಿನಾಯಕನ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ದಂಪತಿಗಳಿಗೆ ವಿಶೇಷವಾಗಿ ಪ್ರಾರ್ಥಿಸಿ ಪ್ರಸಾದ ನೀಡಿ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿಗಳಾದ ಭಾಸ್ಕರ ಶೆಟ್ಟಿ ಮತ್ತು ರಾಜೇಂದ್ರ ದೇಶಮುಖ ಅರ್ಚಕರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಉಪ ಕಾರ್ಯಧ್ಯಕ್ಷ ಹಾಲಾಡಿ ಆದರ್ಶ ಶೆಟ್ಟಿ ಉಪಸ್ಥಿತರಿದ್ದರು.

Pages