ಬಂಟ್ಸ್ ಮ್ಯೂಸ್, ಉಡುಪಿ: 2022ನೇ ವರ್ಷದ ಪ್ರಥಮ ಅಂಗಾರಕ ಸಂಕಷ್ಟ ಚತುರ್ಥಿಯು ಎ.19ರಂದು (ನಾಳೆ) ಬಂದಿದೆ.
ಮಂಗಳವಾರ ದಿನ ಬರುವ
ಸಂಕಷ್ಟ ಚತುರ್ಥಿಯು ಅತ್ಯಂತ ಮಹತ್ವಪೂರ್ಣವಾಗಿದ್ದು ಈ ದಿನ ವೃತ ಕೈಗೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ
ಎಂಬ ನಂಬಿಕೆಯಿದೆ. ಚತುರ್ಥಿ ತಿಥಿಯು ಎ.19ರ ಸಂಜೆ 4.30 ಪ್ರಾರಂಭವಾಗಿ ಎ.20ರ ಮಧ್ಯಾಹ್ನ 1.55ರ ವರೆಗೆ ಇರಲಿದೆ. ಎ.19ರ ರಾತ್ರಿ 9.30 ನಂತರ ಚಂದ್ರೋದಯವಾಗಲಿದೆ.
ಅಂಗಾರಕ ಸಂಕಷ್ಟ
ಚತುರ್ಥಿಯಂದು ವೃತ ಕೈಗೊಂಡರೆ ಇಡಿ ವರ್ಷ ವೃತ ಹಿಡಿದ ಫಲ ದೊರೆಯುವುದು ಎಂಬ ನಂಬಿಕೆಯಿದೆ. ಮುಂಜಾನೆ ಸ್ನಾನ
ಮಾಡಿ ಗಣೇಶನಿಗೆ ಗರಿಕೆಯನ್ನು ಪ್ರಾರ್ಥಿಸಿ ವೃತ ಕೈಗೊಳ್ಳಬಹುದು. ದಿನಪೂರ್ತಿ ಉಪವಾಸವಿದ್ದು ಗಣೇಶನ
ನಾಮಸ್ಮರಣೆ ಮಾಡಬೇಕು. ಸಂಜೆ ಸಮೀಪದ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯಿರಿ.
ರಾತ್ರಿ ಚಂದ್ರದರ್ಶನ ಮಾಡಿ ವೃತ ಮುಕ್ತಾಯಗೊಳಿಸಬಹುದು.