ಮುಂಬಯಿ : ಮಾರ್ಚ್ 15ರಂದು ಬಂಟರ ಸಂಘ ಮುಂಬಯಿ ಅಂದೇರಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದರು ಮುಂಬೈಯ ಮಹಾನಗರಪಾಲಿಕೆಯ ಸಾಂತಕ್ರೂಜ್ (ಇ), ನಡೆಸುತ್ತಿರುವ 'SUPPORT' ಶಾಲೆಗೆ ಭೇಟಿ ನೀಡಿ ರೂ. 20,000 ಧನಸಹಾಯ ಹಾಗೂ ನಿತ್ಯ ಬಳಕೆಯ ವಸ್ತುಗಳಾದ ಸೋಪ್, ಕೋಲ್ಗೇಟ್, ಡಿಟರ್ಜೆಂಟ್, ಎಣ್ಣೆ ಮತ್ತು ಚಾಕೊಲೇಟ್‌ಗಳು ಹಾಗೂ ಇನ್ನಿತರ ವಸ್ತುಗಳನ್ನು ಸಂಸ್ಥೆಗೆ ಹಸ್ತಾಂತರಿಸಿದರು.
ಸಪೋರ್ಟ್ ಶಾಲೆಯು ಬೀದಿ ಬದಿಯ ಮಕ್ಕಳು ಮತ್ತು ಯುವಕರು ಹಾಗೂ ಭಿಕ್ಷಾಟನೆ ಮಾಡುವ ಬೀದಿ ಬದಿಯ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮತ್ತು ಮಾದಕ ವ್ಯಸನಿಗಳು (ಇನ್ಸ್ಪೈರಿಂಗ್ ಎಂಪವರ್ರಿಂಗ್ ರಿಹ್ಯಾಬಿಲಿಟೇಟಿಂಗ್) ಚಟವನ್ನು ಬಿಡಿಸುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಸಂದರ್ಭ ಅಂದೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ರವೀಂದ್ರ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಜ್ರ ಪೂಂಜಾ, ಸಂಚಾಲಕಿ ವನಿತಾ ನೊಂಡ, ಕೋಶಾಧಿಕಾರಿ ಶೋಭಾ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅನಿತಾ ಶೆಟ್ಟಿ ಉಪಸ್ಥಿತರಿದ್ದರು.