ಬಂಟ್ಸ್ ನ್ಯೂಸ್, ಕಿನ್ನಿಗೋಳಿ : ಮೂಲ್ಕಿ ಬಂಟರ ಸಂಫದ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಶ್ರೀಮತಿ ಶೀಲಾವತಿ ಶೆಟ್ಟಿ ಅವರಿಗೆ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶ್ರೀಮತಿ ಶೀಲಾವತಿ ಶೆಟ್ಟಿ ಅವರ ಕಷ್ಟ ಮನಗೊಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಓಂ ಶಕ್ತಿ ಮಹಿಳಾ ಮಂಡಳಿ, ಕಲ್ಯಾಣ್, ಹಾಗೂ ಬಂಟರ ಸಂಘ ಮೂಲ್ಕಿ ಇವರ ಸಹಯೋಗದಲ್ಲಿ ಮನೆ ನಿರ್ಮಿಸಿ ಅವರಿಗೆ ಹಸ್ತಾoತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಗೌರವಧ್ಯಕ್ಷರಾದ ಸಂತೋಷ್ ಕುಮಾರ್ ಹೆಗ್ಡೆ, ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ, ಕಾರ್ಯದರ್ಶಿ ಗಂಗಾಧರ ವಿ ಶೆಟ್ಟಿ, ಜೊತೆ ಕಾರ್ಯದರ್ಶಿ ಸಾಯಿನಾಥ್ ಶೆಟ್ಟಿ, ಓಂ ಶಕ್ತಿ ಮಹಿಳಾ ಮಂಡಳಿಯ ಶ್ರೀಮತಿ ಚಿತ್ರ ರವಿರಾಜ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.