ಮಂಗಳೂರು : ಐಡಿಏ ದಕ್ಷಿಣ ಕನ್ನಡ ಬ್ರಾಂಚ್ ವತಿಯಿಂದ 'ರೂಟ್ ಕೆನಾಲ್ ಚಿಕಿತ್ಸೆಯ ಯಶಸ್ಸು' ವಿಷಯದ ಬಗ್ಗೆ ಒಂದು ದಿನದ ದಂತ ವೈದ್ಯಕೀಯ ಕಾರ್ಯಾಗಾರವನ್ನು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್'ನಲ್ಲಿ ಮಾ.29 ರಂದು ನಡೆಯಿತು.
ಇದನ್ನು ಐಡಿಏ ದಕ್ಷಿಣ ಕನ್ನಡ ಬ್ರಾಂಚ್ ನ ಅಧ್ಯಕ್ಷರಾದ ಡಾ. ಪದ್ಮರಾಜ್ ಹೆಗ್ಡೆ ಯವರು ಉದ್ಘಾಟಿಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಕಾರ್ತಿಕ್ ಶೆಟ್ಟಿ, ಪ್ರೊಫೆಸರ್ ಅಂಡ್ ಹೆಡ್ ಎಂಕೋಡ್ಸ್ ಮಂಗಳೂರು ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಂತ ವೈದ್ಯಕೀಯದಲ್ಲಿ ರೂಟ್ ಕೆನಾಲ್ ಚಿಕಿತ್ಸೆಯ ಯಶಸ್ಸು ಹಾಗೂ ಇದರ ಪ್ರಯೋಜನಗಳ ಬಗ್ಗೆ ಮಾಹಿತಿ ಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಐಡಿಏ ದಕ್ಷಿಣ ಕನ್ನಡ ಬ್ರಾಂಚಿನ ಕಾರ್ಯದರ್ಶಿ ಡಾ. ಭರತ್ ಪ್ರಭು ಹಾಗೂ ಖಜಾಂಚಿ ಡಾ.ಪ್ರಸನ್ನ ಕುಮಾರ್ ರಾವ್ ರವರು ಉಪಸ್ಥಿತರಿದ್ದರು. ಡಾ. ರಚನಾ ಶೆನೊಯ್ ರವರು ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದಂತವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.