ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ವತಿಯಿಂದ 'ನಾರಿ ಉತ್ಸವ' - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ವತಿಯಿಂದ 'ನಾರಿ ಉತ್ಸವ'

Share This
ನವಿ ಮುಂಬೈಮಹಿಳೆಯರು ಸಮಾಜದ ಶಕ್ತಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಬಂಟ ಮಹಿಳೆಯರು ಸಂಘ-ಸಂಸ್ಥೆಗಳಲ್ಲಿ ತಮ್ಮ ಸೇವಾ ಕಾರ್ಯಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ ಬಂಟ್ಸ್ ಅಸೋಶಿಯೇಶನ್ ಪ್ರಗತಿಯಲ್ಲಿ ಮಹಿಳೆಯರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇನ್ನಷ್ಟು ಬೆಳವಣಿಗೆಗೆ ಮಹಿಳೆಯರು ಸಹಕಾರ ಬೇಕು ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಗೋಪಾಲ್ ಶೆಟ್ಟಿ ನುಡಿದರು.
ಅವರು ಮಾರ್ಚ್ 27ರಂದು ಮುಂಬೈಯ ಶ್ರೀನಗರದಲ್ಲಿರುವ ಬಂಟ್ಸ್ ಸೆಂಟರ್ ನಲ್ಲಿ ನಡೆದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಆಶ್ರಯದಲ್ಲಿ ನಡೆದ 'ನಾರಿ ಉತ್ಸವ' ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರನ್ನು ಸಮಾಜ ಬಂಧುಗಳನ್ನು ಸ್ವಾಗತಿಸಿ ತನ್ನ ಅಭಿಪ್ರಾಯವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನವಿ ಮುಂಬಯಿ ಐರೋಲಿಯ ನಗರ ಸೇವಕಿ ವಿನಯ ಶೆಟ್ಟಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಂಡು ಬಹಳ ಸಂಭ್ರಮಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಮಹಿಳೆಯರು ತುಂಬಾ ಸಂಕಷ್ಟ ದಲ್ಲಿ ಜೀವನ ನಡೆಸಿದ್ದಾರೆ ಅದು ಹಲವು ಕಾರಣಗಳಿರಬಹುದು, ಮನೆಯ ಕೆಲಸಗಳೊಂದಿಗೆ ಮಹಿಳೆಯರು ತಮ್ಮ ಪ್ರತಿಭೆಗಳನ್ನು ಅನಾವರಣ ಗೊಳಿಸಬೇಕು. ಪ್ರತಿ ಮಹಿಳೆಯರಲ್ಲೂ ಬೇರೆ ಬೇರೆ ರೀತಿಯ ಪ್ರತಿಭೆ ಗಳಿದೆ. ನನ್ನ ಸಾಮಾಜಿಕ ಸೇವಾ ಕಾರ್ಯಗಳಿಗೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ಸಹಕಾರಿಯಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಸತ್ತಾರ್ ರೆಸಿಡೆನ್ಸಿ ಹೋಟೆಲ್ ಮಾಲಕ ಶಿವರಾಮ್ ಶೆಟ್ಟಿ ಮತ್ತು ಪ್ರಮೋದ ಎಸ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಸೋಸಿಯೇಷನ್ ಅಧ್ಯಕ್ಷ ಮುರಳಿ ಕೆ ಶೆಟ್ಟಿ ಮಾತನಾಡಿ, ಮಹಿಳಾ ವಿಭಾಗ ಪ್ರಾರಂಭದಿಂದಲೂ ಉತ್ತಮ ಸೇವಾಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಮೂರು ವರ್ಷಗಳಿಂದ ಲತಾ ಶೆಟ್ಟಿಯವರು ಬೇರೆಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಾ ಸಮಾಜದ ಮಹಿಳೆಯರನ್ನು ಒಗ್ಗಟ್ಟು ಮಾಡುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ .ಕೊರೋನಾ ಸಂದರ್ಭದಲ್ಲಿ ಮಹಿಳಾ ವಿಭಾಗ ಸಕ್ರಿಯವಾಗಿ ಸೇವೆಯಲ್ಲಿ ತೊಡಗಿಕೊಂಡಿದ್ದರು .ಇಂದು ನಾರಿ ಉತ್ಸವದಿಂದ ಮಹಿಳೆಯರಿಗೆ ವಿವಿಧ ಪ್ರತಿಭೆಗೆ ಅವಕಾಶ ಅನಾವರಣಕ್ಕೆ ಅವಕಾಶ ಲಭಿಸಿದಂತಾಗಿದೆ ಎಂದು ನುಡಿದರು.

ಮಹಿಳೆಯರಿಗಾಗಿ ವಿಶೇಷ ಉಪನ್ಯಾಸವನ್ನು ನೀಡಿದ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪ ಮುಖ್ಯಸ್ಥೆ ಡಾಕ್ಟರ್ ಪೂರ್ಣಿಮಾ ಶೆಟ್ಟಿ ನೀಡಿದರು. ಚರ್ಮ ರೋಗದ ಬಗ್ಗೆ ಚರ್ಮರೋಗ ತಜ್ಞ ಡಾಕ್ಟರ್ ಸೌಮ್ಯ ವಿ ಹೆಗ್ದೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಪತ್ರಕರ್ತ ದಯಾಸಾಗರ್ ಚೌಟ ನಿರೂಪಿಸಿದರು. ಅತಿಥಿ ಗಣ್ಯರನ್ನು ಶ್ರೀಮತಿ ಕೃಷಿನೀ ಮುರುಳಿ ಶೆಟ್ಟಿ, ತೇಜಕ್ಷಿ ಶೆಟ್ಟಿ ಪ್ರಿಯ ಶೆಟ್ಟಿ ಪರಿಚಯಿಸಿದರು. ಸನ್ಮಾನಿತರ ಪರಿಚಯವನ್ನು ಉಷಾ ಶೆಟ್ಟಿ ವಾಚಿಸಿದರು. ಸುಮತಿ ಆರ್ ಶೆಟ್ಟಿ ಪ್ರಾರ್ಥನೆ ಮಾಡಿದರು.

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಮಾಜಿ ಕಾರ್ಯಾಧ್ಯಕ್ಷೆ ಲತಾ ಪ್ರಭಾಕರ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉಪಾಧ್ಯಕ್ಷರಾಗಿರುವ ಸಿಎ ಸುರೇಂದ್ರ ಶೆಟ್ಟಿ, ಗೌರವ ಕೋಶಧಿಕಾರಿ ಸಿಎ ವಿಶ್ವನಾಥ್, ಶೆಟ್ಟಿ ಜೊತೆ ಕಾರ್ಯದರ್ಶಿ ಶಂಕರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ಯಾಮ್ ಸುಂದರ್ ಶೆಟ್ಟಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಲತಾ ಆರ್ ಶೆಟ್ಟಿ, ಕಾರ್ಯದರ್ಶಿ ತೇಜಕ್ಷಿ ಶೆಟ್ಟಿ, ಕೋಶಾಧಿಕಾರಿ ಶಾಂತಾ ಶೆಟ್ಟಿ, ಜೊತೆ ಕಾರ್ಯದರ್ಶಿ ಉಷಾ ಶೆಟ್ಟಿ, ಜೊತೆ ಕೋಶಧಿಕಾರಿ ಲಲಿತ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶಶಿಕಾಂತ ರೈ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ವಿವಿಧ ನೃತ್ಯಗಳು. ಫೇಶನ್ ಶೋ, ಮತ್ತಿತರ ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ಮತ್ತು ನೃತ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿಶೇಷವಾದ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಯಶಸ್ವಿಯಲ್ಲಿ ಲತಾ ಗೋಪಾಲ್ ಶೆಟ್ಟಿ ಅವರ ಸುಪುತ್ರಿ ನಿವೇದಿತಾ ಶೆಟ್ಟಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ನ ಮಾಜಿ ಅಧ್ಯಕ್ಷರುಗಳು ಪದಾಧಿಕಾರಿಗಳು ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷರುಗಳು ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

Pages