'ಬೋಡಾ ಶೀರ’ ಚಿತ್ರೀಕರಣ ಮುಕ್ತಾಯ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

'ಬೋಡಾ ಶೀರ’ ಚಿತ್ರೀಕರಣ ಮುಕ್ತಾಯ

Share This
ಮಂಗಳೂರು: ದುಬೊಯ್ಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ಸ್ಪಾರ್ಕಲ್ ಪ್ರೊಡಕ್ಷನ್ಸ್ ರವರ ಸಹಯೋಗದಲ್ಲಿ ಹಾಸ್ಯಭರಿತ ತುಳು ಚಲನಚಿತ್ರ ನಿರ್ಮಾಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಸಿನಿಮಾದ ನಿರ್ದೇಶಕ ಡಿಕ್ಸನ್ ಜೆ.ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಚಿತ್ರಕ್ಕೆ ಬೋಡಾ ಶೀರ ಎಂಬ ಶೀರ್ಷಿಕೆ ಇಡಲಾಗಿದ್ದು ಸುಪ್ರಸಿದ್ಧ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಅನಾವರಣಗೊಳಿದ್ದರು. ಅವರ ಹುಟ್ಟೂರು ಅಲೆವೂರಿನ ತನ್ನ ಕುಟುಂಬದ ನಾಗ ಸನ್ನಿಧಿಯಲ್ಲಿ ಜರುಗಿದ ಷಷ್ಠಿ ಪೂಜೆಯ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ಅವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಾ ಹಾರೈಸಿದರು. ಚಿತ್ರದ ಶೀರ್ಷಿಕೆಯು ಈ ಮೊದಲೇ ನಿರ್ಧಾರವಾಗಿದ್ದರೂ ಕೂಡ ಚಿತ್ರೀಕರಣವು ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಇದೀಗ ಅಧಿಕೃತವಾಗಿ ಘೋಷಿಸಲು ಚಿತ್ರ ತಂಡ ನಿರ್ಧರಿಸಿದೆ ಎಂದು ತಿಳಿಸಿದರು.

ಕೌಟುಂಬಿಕ ಹಾಸ್ಯಭರಿತ ಮನೋರಂಜನೆಯ ಚಿತ್ರ ಇದಾಗಿದ್ದು, ಡಿಕ್ಸನ್ ಜೆ ಡಿ ಡಿಕ್ಸನ್ ಸಿನಿಮಾ ನಿರ್ದೇಶಿಸಿದ್ದಾರೆ. ತುಳು ಚಲನಚಿತ್ರ ರಂಗದ ಹಾಸ್ಯ ದಿಗ್ಗಜರಾದ ಅರವಿಂದ ಬೋಳಾರ್ ಭೋಜರಾಜ ವಾಮಂಜೂರು ಮುಂತಾದವರು ನಟಿಸಿದ್ದು ನಾಯಕ ನಟರಾಗಿ ಗಾಡ್ವಿನ್ ಸ್ಪಾರ್ಕಲ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರೊಲಾಂಡ ಅಲೀಷಿಯಾ ಮಚಾದೋ ಜೊತೆಯಾಗಿದ್ದಾರೆ. ಪ್ಯಾಟ್ಸನ್ ಪಿರೇರಾ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ವಿಲಿಯಂ ಪಿಂಟೋ ಪದರೆಂಗಿ ರವರ ಸಂಭಾಷಣೆ ಇದ್ದು ಸ್ಪಾರ್ಕಲ್ ಪ್ರೊಡಕ್ಷನ್ಸ್ ತಂತ್ರಜ್ಞರು ಹಾಗೂ ರಚಿನ್ ಶೆಟ್ಟಿ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ.

ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದ ಕಾರ್ಯಗಳು ನಡೆಯುತ್ತಿವೆ. ಪತ್ರಿಕಾಗೋಷ್ಠಿಯಲ್ಲಿ ಗಾಡ್ವಿನ್ ಸ್ಪಾರ್ಕಲ್, ರೊಲಾಂಡ ಅಲೀಷಿಯಾ ಮಚಾದೋ, ಪ್ಯಾಟ್ನನ್ ಪಿರೇರಾ, ಶ್ವೇತಾ ಸುವರ್ಣ ಉಪಸ್ಥಿತರಿದ್ದರು.

ಬೋಡಾ ಶೀರಾ ಸಿನಿಮಾವನ್ನು ಆಗಸ್ಟ್ ತಿಂಗಳಿನಲ್ಲಿ ತೆರೆಕಾಣಲಿದೆ. ಈ ಸಿನಿಮಾಕ್ಕೆ ಖ್ಯಾತ ಚಲನ ಚಿತ್ರಾ ನಿರ್ದೇಶಕರಾದ ಡಾ. ರಿಚರ್ಡ್ ಕ್ಯಾಸ್ಟಲಿನೋ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಸಹಕಾರ ನೀಡಿದ್ದಾರೆ. ಎಂದು ಡಿಕ್ಸನ್ ತಿಳಿಸಿದರು.

ಮಂಗಳೂರು ಮತ್ತು ಮುಕ್ತ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ ರೋನ್ಸ್ ಲಂಡನ್, ರೊಲಾಂಡ್ ಆಲೀಷಿಯನ್ ಮಚಾದೋ, ಗಾಡ್ವಗಿನ್ ಸ್ಪಾರ್ಕಲ್, ಶ್ವೇತಾ ಸುವರ್ಣ, ಇಬ್ರಾಹಿಂ ಶಶಿಕಲ್ ಇಸ್ಮಾಯಿಲ್, ಅಬೂಬಕರ್ ಆಶಿಕ್, ಮೈಚಿ ಬೆವನ್ ಗಿಬ್ಬನ್, ಮೇಘಾಲ್ ಡಿಂಪಾಲ್ ಮೆಲ್ವಿನ್ ರಾಯ್ ಡಿ, ಸೋಜ. ಇರ್ಷನ್ ಆಲಿ, ವೆಲ್ವಿನ್ ಆವಿಲ್ ಡಿ ಸೋಜ, ಜಾಪನ್ ಎಲ್ಟನ್ ಡಿ ಸೋಜ ಪ್ರತೀಶ್ ಪ್ರಸಾದ್ ಕಾಪು, ಅಬಿತಾ ಮಚಾದೋ, ಆದಿತ್ಯ ರಾಜ್ ಮೊದಲಾದವರಿದ್ದಾರೆ.

Pages