ಶ್ರೀದೇವಿ ಯಕ್ಷಕಲಾ ನಿಲಯ ನಾಲಾಸೋಪಾರ - ವಿರಾರ್ ವಾರ್ಷಿಕೋತ್ಸವ ಹಾಗೂ ಶಶಿಧರ ಕೆ. ಶೆಟ್ಟಿ ದಂಪತಿಯ ವೈವಾಹಿಕ ಬೆಳ್ಳಿ ಹಬ್ಬ ಸಂಭ್ರಮ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶ್ರೀದೇವಿ ಯಕ್ಷಕಲಾ ನಿಲಯ ನಾಲಾಸೋಪಾರ - ವಿರಾರ್ ವಾರ್ಷಿಕೋತ್ಸವ ಹಾಗೂ ಶಶಿಧರ ಕೆ. ಶೆಟ್ಟಿ ದಂಪತಿಯ ವೈವಾಹಿಕ ಬೆಳ್ಳಿ ಹಬ್ಬ ಸಂಭ್ರಮ

Share This
ಬಂಟ್ಸ್ ನ್ಯೂಸ್, ಮುಂಬಯಿ: ಶ್ರೀದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ - ವಿರಾರ್ ಇದರ 5ನೇ ವಾರ್ಷಿಕೋತ್ಸವ ಸಮಾರಂಭವು ಫೆ. 20 ರಂದು ಹೋಟೆಲ್ ಉಡುಪಿ (ಗ್ರೌಂಡ್) ವಸಯಿ (ಪೂರ್ವ ) ಇಲ್ಲಿ ಶ್ರೀದೇವಿ ಯಕ್ಷ ಕಲಾ ನಿಲಯ ಇದರ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಮಾರಂಭದಲ್ಲಿ ವೈವಾಹಿಕ ಜೀವನದ 25 ವರ್ಷಗಳನ್ನು ಆಚರಿಸುತ್ತಿರುವ ಸ್ಥಳೀಯ ಸಮಾಜ ಸೇವಕ, ಸಂಘಟಕ ಹಾಗೂ ಕೊಡುಗೈ ದಾನಿಯೂ ಆದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಮತ್ತು ಶಶಿಕಲಾ ಶಶಿಧರ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು.

ಅಲ್ಲದೆ ಕಟೀಲು ಯಕ್ಷಕಲಾ ವೇದಿಕೆ ವಸಯಿ ಇದರ ಅಧ್ಯಕ್ಷರಾದ ದೇವೇಂದ್ರ ಬುನ್ನನ್ ದಂಪತಿ ಮತ್ತು ಜೀವಧಾನಿ ಯಕ್ಷ ಕಲಾ ವೇದಿಕೆ ವಸಯಿ ಇದರ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಕೊಡ್ಲಾಡಿ ಇವರನ್ನು ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳು ಸನ್ಮಾನಿಸಿದರು.

ಪಾಲ್ಗೊಂಡಿದ್ದ ಎಲ್ಲ ಅತಿಥಿಗಳನ್ನು ಹಾಗೂ ತುಳು ಕನ್ನಡಿಗರನ್ನು ಸ್ವಾಗತಿಸುತ್ತಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಶಿಧರ ಕೆ. ಶೆಟ್ಟಿಯವರು ವಸಯಿ ಪರಿಸರದ ಎಲ್ಲಾ ತುಳು ಕನ್ನಡಿಗರ ಸಹಕಾರ ಹಾಗೂ ಪ್ರೋತ್ಸಾಹದಿಂದ ಇಲ್ಲಿ ಮುಖ್ಯವಾಗಿ ಯುವ ಜನಾಂಗದ ಪ್ರತಿಭಾ ವಿಕಸನಕ್ಕಾಗಿ ಮೂರು ಸಂಸ್ಥೆಗಳು ಕಾರ್ಯನಿರತವಾಗಿದೆ. ಯಕ್ಷಗಾನ ಮಾತ್ರವಲ್ಲದೆ ನಾಡಿನ ಇತರ ಕಲೆ, ಬಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಇದಕ್ಕೆ ಪರಿಸರದ ತುಳು ಕನ್ನಡಿಗರು ತಮ್ಮ ಮಕ್ಕಳನ್ನು ಇನ್ನೂ ಅಧಿಕ ಸಂಖ್ಯೆಯಲ್ಲಿ ಕಳುಹಿಸುದರ ಮೂಲಕ ಇದರ ಪ್ರಯೋಜನವನ್ನು ಪಡೆಯಬೇಕು ಎಂದರು. 

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ದೇವೇಂದ್ರ ಬುನ್ನನ್ ಅವರು ಇಂದು ಶಶಿಧರ ಕೆ. ಶೆಟ್ಟಿ ದಂಪತಿಯ ವೈವಾಹಿಕ ಜೀವನದ 25ನೇ ಸಂಭ್ರಮವನ್ನು ಆಚರಿಸಲಾಗುತ್ತಿದ್ದು ಈ ಮಧ್ಯೆ ನನ್ನನ್ನು ಸನ್ಮಾನಿಸಿ ಗೌರವಿಸಿದ್ದು ನಿಜಕ್ಕೂ ಸಂತೋಷವನ್ನುಂಟು ಮಾಡಿದೆ. ಈ ಸಣ್ಣ ಪರಿಸರದಲ್ಲಿ ಮೂರು ಯಕ್ಷಗಾನದ ಸಂಸ್ಥೆಗಳಿರುವುದು ಅಭಿಮಾನದ ಸಂಗತಿಯಾಗಿದೆ ಎನ್ನುತ್ತಾ ಕೃತಜ್ನತೆ ಸಲ್ಲಿಸಿದರು.

ಇನ್ನೋರ್ವ ಸನ್ಮಾನಿತರಾದ ಮಂಜುನಾಥ ಶೆಟ್ಟಿ ಕೊಡ್ಲಾಡಿಯವರು ಸನ್ಮಾನ ಸ್ವೀಕರಿಸಿ ಕೃತಜ್ನತೆ ಸಲ್ಲಿಸುತ್ತಾ ನನಗೆ ಸಿಕ್ಕಿದ ಈ ಸನ್ಮಾನವು ಜೀವಧಾನಿ ಯಕ್ಷ ಕಲಾ ವೇದಿಕೆ ವಸಯಿ ಇದಕ್ಕೆ ಸಲ್ಲುತ್ತದೆ. ಇದು ಜೀವಧಾನಿ ಯಕ್ಷ ಕಲಾ ವೇದಿಕೆಯ ಎಲ್ಲ ಸದಸ್ಯರಿಗೆ ಮಾಡಿದ ಸನ್ಮಾನವಾಗಿದೆ. ಶಶಿಧರ ಕೆ. ಶೆಟ್ಟಿ ದಂಪತಿಯ ದಾಂಪತ್ಯ ಜೀವನದ 25ನೇ ಸಂವತ್ಸರವನ್ನು ಪೂರೈಸಿದ ಈ ಸಂದರ್ಭದಲ್ಲಿ ಅವರಿಗೆ ಅಬಿನಂದನೆಗಳು ಹಾಗೂ ಶುಭ ಹಾರೈಕೆಗಳು ಎಂದರು. 

ವೇದಿಕೆಯಲ್ಲಿ ಸಮಾರಂಭದ ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಗೌರವ ಅತಿಥಿಗಳಾದ ಬಂಟರ ಸಂಘ ಮುಂಬಯಿ ಯ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಅಂಧೇರಿಯ ಶ್ರೀ ಅಯ್ಯಪ್ಪ ಭಕ್ತವೃಂದದ ಸಂಸ್ಥಪಕರಾದ ಚಂದ್ರಹಾಸ ಗುರುಸ್ವಾಮಿ, ಲೇಖಕಿ, ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ವಸಯಿ ವಿರಾರ್ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಉಮೇಶ್. ಡಿ. ನಾಯ್ಕ್ , ಶಶಿಧರ ಕೆ. ಶೆಟ್ಟಿ ಇನ್ನಂಜೆ, ಶಶಿಕಲಾ ಶಶಿಧರ ಶೆಟ್ಟಿ, ಶ್ರೀದೇವಿ ಯಕ್ಷಕಲಾ ನಿಲಯದ ಗೌರವ ಅಧ್ಯಕ್ಷರಾದ ಶ್ರೀನಿವಾಸ ನಾಯ್ಡು ಉಪಸ್ಥಿತರಿದ್ದರು.

ಶ್ರೀ ದೇವಿ ಯಕ್ಷ ಕಲಾ ನಿಲಯ ನಾಲಾಸೋಪಾರ ವಿರಾರ್ ಇದರ ಬಾಲ ಕಲಾವಿದರಾದ ಸೃಷ್ಟಿ ಶಶಿಧರ ಶೆಟ್ಟಿ, ಸಮೀಕ್ಷಾ ಸುಭಾಷ್ ಶೆಟ್ಟಿ, ಶ್ರದ್ದಾ ಶೆಟ್ಟಿ ಮತ್ತು ಕಿಶನ್ ಪೂಜಾರಿ ಇವರೆಲ್ಲರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಇದಲ್ಲದೆ ಯಕ್ಷಗಾನ, ಭರತನಾಟ್ಯ ತರಬೇತಿ ನೀಡುತ್ತಿರುವ ಎಲ್ಲಾ ಗುರುಗಳನ್ನು ಗೌರವಿಸಲಾಯಿತು. 

ವೈವಾಹಿಕ ಜೀವನದ 25 ರ ಸಂಭ್ರಮದಲ್ಲಿರುವ ಶಶಿಧರ ಕೆ. ಶೆಟ್ಟಿ ಇನ್ನಂಜೆ ಮತ್ತು ಶಶಿಕಲಾ ಶಶಿಧರ ಶೆಟ್ಟಿ ಯವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಾತ್ರವಲ್ಲದೆ ಸ್ಥಳೀಯ ಹಾಗೂ ಮುಂಬಯಿ ಮಹಾನಗರದ ಅನೇಕ ಜಾತೀಯ ಸಂಘಟನೆಗಳು ಹಾಗೂ ಅನೇಕ ಗಣ್ಯರು ಪುಷ್ಪ ಗುಚ್ಚ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಅವರ ಸುಪುತ್ರಿ ಸೃಷ್ಟಿ ಶಶಿಧರ ಶೆಟ್ಟಿ ಈ ಸಂದರ್ಭದಲ್ಲಿ ಒಂದು ವಿಶೇಷ ಉಡುಗೊರೆಯನ್ನು ನೀಡಿ ಅಬಿನಂದಿಸಿದರು. 

ಶಶಿಧರ ಶೆಟ್ಟಿಯವರ ಸಾಧನೆಯ ಬಗ್ಗೆ ಸಾಕ್ಸ್ಯ ಚಿತ್ರವನ್ನು ಪ್ರದರ್ಶಿಸಲಾಯಿತು. ಸಭಾಕಾರ್ಯಕ್ಕೆ 24 ದೀಪ ಬೆಳಗಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಮತ್ತು ಶಶಿಧರ ಶೆಟ್ಟಿಯವರ ಮಾತೃಶ್ರೀಯವರು ಉದ್ಘಾಟಿಸಿದರು. 

ಲೀಲಾವತಿ ಆಳ್ವ ಅವರ ಮಾರ್ಗದರ್ಶನದಲ್ಲಿ ಮಕ್ಕಳ ಭಜನೆ ನಂತರ ಸಂಸ್ಥೆಯ ಬಾಲ ಕಲಾವಿದರಿಂದ "ಶ್ರೀದೇವಿ ಲಲಿತತೋಪಖ್ಯಾನ" ಕನ್ನಡ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಸ್ಮಿತಾ ನಾಯರ್ ಅವರ ನೇತೃತ್ವದಲ್ಲಿ ಭರತ ನಾಟ್ಯ ಮಕ್ಕಳಿಂದ ನಾಟ್ಯ ವೈಭವ ಹಾಗೂ ಹಿರಿಯರಿಂದ ಮತ್ತು ಶಶಿಧರ ಶೆಟ್ಟಿ ದಂಪತಿಯ ಪರಿವಾರದ ಮಕ್ಕಳಿಂದ ನೃತ್ಯ ಪ್ರದರ್ಶನವಿತ್ತು.

ಕಾರ್ಯಕ್ರಮವನ್ನು ಶ್ರೀದೇವಿ ಯಕ್ಷ ಕಲಾ ನಿಲಯ ದ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಮತ್ತು ವಿಜಯ ಪಿ. ಶೆಟ್ಟಿ ನಿರೂಪಿಸಿದರು ಪ್ರವೀಣ್ ಶೆಟ್ಟಿ ಕಣಂಜಾರು ದನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕೋಶಾಧಿಕಾರಿ ಲ. ಕೃಷ್ಣಯ್ಯ ಹೆಗ್ಡೆ, ಜಗನ್ನಾಥ್ ಡಿ. ಶೆಟ್ಟಿ, ಸುಪ್ರಿತಾ ಶೆಟ್ಟಿ, ಬಾಬಾ ಅರಸ್, ಸುಭಾಷ್ ಜೆ ಶೆಟ್ಟಿ, ಪರಿಸರದ ತುಳು ಕನ್ನಡ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಮಹಿಳೆಯರು ಹಾಗೂ ಬಾಲ ಕಲಾವಿದರುಗಳ ಪಾಲಕರು ಸಹಕರಿಸಿದರು.

Pages