ಬಂಟ್ಸ್ ನ್ಯೂಸ್, ಪುತ್ತೂರು : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಎರಡನೇ ರ್ಯಾಂಕನ್ನು ಹಸ್ತಾ ಶೆಟ್ಟಿ ಅವರು ಪಡೆದಿದ್ದು ಅವರ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಹಸ್ತಾ ಶೆಟ್ಟಿ ಅವರ ಸಾಧನೆಯು ಅವರ ಹುಟ್ಟೂರಿಗೆ, ನಮ್ಮ ಬಂಟ ಸಮಾಜಕ್ಕೆ ಹೆಮ್ಮೆ ತಂದಿದೆ. ಅವರು ಪುರಂದರ ಶೆಟ್ಟಿ ಮುಡಾಲ ಮತ್ತು ತಾಯಿ ವಾರಿಜಾಕ್ಷಿ ಪಿ ಶೆಟ್ಟಿಯವರ ಪುತ್ರಿ.
ಹಸ್ತಾ ಶೆಟ್ಟಿ ಅವರ ಮುಂದಿನ ಜೀವನವು ಉಜ್ವಲವಾಗಲಿ ಎಂದು ಈ ಮೂಲಕ ಅಭಿನಂದಿಸಿ ಹಾರೈಸುತ್ತೇವೆ.