ಸುರತ್ಕಲ್ : ಜೆಸಿಐ ಸುರತ್ಕಲ್ 2022ನೇ ಸಾಲಿನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಸುರತ್ಕಲ್ ಅಭೀಷ್ ಮಾಲ್‌ನಲ್ಲಿರುವ ಚಾವಡಿ ಸಭಾಂಗಣದಲ್ಲಿ ಜರುಗಿತು.
ನೂತನ ಅಧ್ಯಕ್ಷೆ ರಾಜೇಶ್ವರಿ ಡಿ. ಶೆಟ್ಟಿ ಜೆಸಿಐ ಸುರತ್ಕಲ್ ಫಲಕದ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಎಂ. ಬಾಲಕೃಷ್ಣ ಶೆಟ್ಟಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುದಾಕರ ಎಸ್. ಪೂಂಜಾ, ಜೆ.ಸಿ ರವಿಚಂದ್ರ ಪಾಟಾಳಿ, ಜೆಸಿಐನ ನಿಕಟ ಪೂರ್ವ ಅಧ್ಯಕ್ಷ ಜೆಸಿ ರಾಕೇಶ್ ಹೊಸಬೆಟ್ಟು, ಕಾರ್ಯದರ್ಶಿ ಜೆಸಿ ನಿತೀಶ್ ಶೆಟ್ಟಿ, ಕೋಶಾಧಿಕಾರಿ ಜೆಸಿ ಶ್ರೀವತ್ಸ, ಮಹಿಳಾ ಜೆಸಿ ಸಂಘಟಕೆ ಜೆಸಿ ಜ್ಯೋತಿ ಜೆ. ಶೆಟ್ಟಿ, ಜೆಜೆಸಿ ಅಧ್ಯಕ್ಷ ಹಿತಾ ಉಮೇಶ್, ಪೂರ್ವಾಧ್ಯಕ್ಷರುಗಳಾದ ಸೀತಾರಾಮ ರೈ, ಯೊಗೀಶ್ ನಾಯಕ್, ಜಯೇಶ್, ಗೋವಿಂದ, ಎಂ.ಜಿ. ರಾಮಚಂದ್ರ ರಾವ್, ಪ್ರವೀಣ್ ಶೆಟ್ಟಿ, ಜಯರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಜೆಸಿಐಗೆ ಹಲವು ಮಂದಿ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು.