ಹಿರಿಯ ರಂಗನಟ ಸೀತಾರಾಮ ಶೆಟ್ಟಿ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿರಿಯ ರಂಗನಟ ಸೀತಾರಾಮ ಶೆಟ್ಟಿ ನಿಧನ

Share This
ಮಂಗಳೂರು: ತುಳು ನಾಟಕ ರಂಗದ ಹಿರಿಯ ಕಲಾವಿದದ, ದಿ. ಕೆ. ಎನ್. ಟೈಲರ್ ರವರ ನಾಟಕ,ಚಲನ ಚಿತ್ರ ರಂಗದ ಒಡನಾಡಿ ಆಗಿದ್ದ ಜೆ. ಸೀತಾರಾಮ ಶೆಟ್ಟಿ (83) ಅವರು ಪಚ್ಚನಾಡಿಯ ಸ್ವಗೃಹದಲ್ಲಿ ನಿಧನರಾದರು.
ಸುಮಾರು 65 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕಲಾಸೇವೆಯಲ್ಲಿ ತೊಡಗಿರುವ ಅವರು ಕೆ. ಎನ್. ಟೇಲರ್ ರವರ ಗಣೇಶ ನಾಟಕ ಸಭಾದಲ್ಲಿ 48 ವರ್ಷಗಳ ಕಾಲ ಸಕ್ರಿಯರಾಗಿದ್ದರು. 

ತನ್ನ 80ರ ಹರೆಯದಲ್ಲೂ ಪುರಭವನದಲ್ಲಿ ನಡೆದ ಸೀತಾರಾಮ 80ರ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಸನ್ಮಾನಿಸಲ್ಪಟ್ಟು, ತಾನು ನಟಿಸಿದ ನಾಟಕದ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿರುವುದೇ ಅವರ ಕಲಾ ಜೀವನದ ಕೊನೆಯ ಅಭಿನಯವಾಗಿರುತ್ತದೆ. 

ಅವರು ಪತ್ನಿ, ನಾಲ್ವರು ಪುತ್ರಿಯರನ್ನು, ಅಗಲಿರುತ್ತಾರೆ. ಅವರ ನಿಧನಕ್ಕೆ ತುಳು ನಾಟಕ ಕಲಾವಿದರ ಒಕ್ಕೂಟ, ಕಲಾಸಂಗಮ ಮಂಗಳೂರು, ಚಾ ಪರ್ಕ ಕಲಾವಿದರ ತಂಡ, ಲಕುಮಿ ನಾಟಕ ತಂಡ ಸಂತಾಪ ಸೂಚಿಸಿದೆ.

Pages