ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Share This

ಒಗ್ಗಟ್ಟಿನಲ್ಲಿ ಸಂಭ್ರಮದೊಂದಿಗೆ ಬ್ರಹ್ಮಕಲಸ ವನ್ನು ನಡೆಸೋಣ: ರವೀಂದ್ರನಾಥ್ ಎಮ್ ಭಂಡಾರಿ


ಬಂಟ್ವಾಳ : ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.9ರಿಂದ 14ರವರೆಗೆ ನಡೆಯಲಿರುವ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಸಜಿಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ದೇವತಾ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ ಎಂದು ಶುಭ ಹಾರೈಸಿದರು. ವ್ಯವಸ್ಥಾಪನಾ ಸಮಿತಿಯ ಹಿರಿಯ ಸದಸ್ಯ ಬಾಬು ಪೂಜಾರಿ ಬಿಡುಗಡೆಗೊಳಿಸಿದರು. ಬಳಿಕ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮುಂಬಯಿ ಬಂಟರ ಸಂಘದ ಬಂಟರ ವಾಣಿಯ ಕಾರ್ಯಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಪುಣ್ಕೆಮಜಲು, ಉಪಸ್ಥಿತರಿದ್ದು ದೇವಸ್ಥಾನದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ದೇವಸ್ಥಾನ ಅಭಿವೃದ್ಧಿ ಗೊಂಡಂತೆ ಊರು ಅಭಿವೃದ್ಧಿಗೊಳ್ಳುತ್ತದೆ, ಎಂಥ ಕಠಿಣ ಪರಿಸ್ಥಿತಿ ಎದುರಾದರೂ ದೇವರಿಗೆ ಬ್ರಹ್ಮಕಲಸ ವನ್ನು ನಿಗದಿ ಯಾದ ದಿನದಲ್ಲಿ ಮಾಡೋಣ ಒಗ್ಗಟ್ಟಿನಿಂದ ಸಂಭ್ರಮದೊಂದಿಗೆ ಶ್ರೀದೇವರಿಗೆ ಬ್ರಹ್ಮ ಕಳಸವನ್ನು ನಡೆಸೋಣ ಎಂದು ನುಡಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಆಳ್ವ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಆರಾಧನಾ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಅರ್ಚಕ ಗಣಪತಿ ಎಂ. ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರವೀಣ್ ಭಂಡಾರಿ, ಹರೀಶ್ ಬಂಗೇರ, ಪುರುಷೋತ್ತಮ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಸುನೀತಾ ಚಂದ್ರಕುಮಾರ್ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಕೆ.ಟಿ, ಕಾರ್ಯದರ್ಶಿ ಸುರೇಶ್ ಬಂಗೇರ, ಜತೆ ಕಾರ್ಯದರ್ಶಿ ನಿತಿನ್ ಅರಸ, ಕೋಶಾಧಿಕಾರಿ ಜಿ.ರಾಮಕೃಷ್ಣ ಭಟ್, ಸದಸ್ಯರಾದ ಯತೀಶ್ ಶೆಟ್ಟಿ ಮಾಡಂತಾಡಿ, ಕಿಶನ್ ಪ್ರಸಾದ್ ಶೇಣವ, ರಾಮ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಭಟ್ ಮಿತ್ತೋಟ, ಗೌರವ ಸಲಹೆಗಾರರಾದ ಶಿವರಾಮ ಭಂಡಾರಿ ಬಿಜಂತಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಳ್ವ, ಉಪಾಧ್ಯಕ್ಷರಾದ ಅಶೋಕ್ ಪಕ್ಕಳ ವಾಮದಪದವು, ಭಕ್ತಕುಮಾರ್ ಶೆಟ್ಟಿ ದೋಟ, ಸ್ಮರಣ ಸಂಚಿಕೆ ಸಮಿತಿ ಸಹಸಂಪಾದಕಿ ರಮಾ ಎಸ್. ಭಂಡಾರಿ ಸಹಿತ ವಿವಿಧ ಸಮಿತಿಗಳ ಪ್ರಮುಖರು, ಪದಾಧಿಕಾರಿಗಳ ಸಹಿತ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.

Pages