ಬಂಟ್ಸ್ ನ್ಯೂಸ್, ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ವಿಶೇಷ ಮನವಿ ಮೇರೆಗೆ ಮುಂಬೈನ ಪ್ರಖ್ಯಾತ ಸಂಸ್ಥೆಯಾದ ರಾಕ್ಷಿ ಡೆವಲಪ್ಪರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಸಿಎಂ ಡಿ ಸನ್ಮಾನ್ಯ ರಾಜೇಶ್ ಎನ್ ಶೆಟ್ಟಿ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ನೇಮಕಗೊಂಡಿರುತ್ತಾರೆ.
ಶ್ರೀಯುತರು ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಪರಮ ಭಕ್ತರಾಗಿದ್ದು ಕಟೀಲಿನ ಬ್ರಹ್ಮಕಲಶದ ಸಂದರ್ಭದಲ್ಲಿ ತಮ್ಮ ಅಪೂರ್ವ ದೇಣಿಗೆ ನೀಡಿ ಸಹಕರಿಸಿದ್ದಾರೆ. ಹಾಗೆಯೇ ಸುರಗಿರಿ ದೇವಸ್ಥಾನದ ಪ್ರತಿಯೊಂದು ಅಭಿವೃದ್ಧಿಯಲ್ಲಿ ಮುಖ್ಯಪಾತ್ರವನ್ನು ವಹಿಸಿ ಊರಿನ ಧಾರ್ಮಿಕ ಮತ್ತು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಯಾವುದೇ ಪ್ರಚಾರ ಇಲ್ಲದೆ ತನ್ನನ್ನು ತಾನು ತೊಡಗಿಸಿ ಅಭಿವೃದ್ಧಿಯ ಹಾದಿಯಲ್ಲಿ ಅಪಾರ ಶ್ರದ್ಧೆಯಿಂದ ಯಾವುದೇ ಪ್ರಚಾರ ಬಯಸದೆ ತನ್ನ ತಾಯಿಯ ಹೆಸರಿನಲ್ಲಿ ಕೊಡುಗೆಯನ್ನು ನೀಡಿ ಸಹಕರಿಸಿದ್ದಾರೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಗೆ ಆರ್ಥಿಕವಾಗಿ ಹಿಂದುಳಿದ ಬಾಂಧವರಿಗೆ ಸಹಾಯ ಮಾಡುವ ವಿಚಾರದಲ್ಲಿ ಪ್ರತಿವರ್ಷ ತನ್ನ ಕೊಡುಗೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ರಾಜೇಶ್ ಎನ್ ಶೆಟ್ಟಿ, ಮಾತೃಶ್ರೀ ಶ್ರೀಮತಿ ಆಶಾಲತ ಶೆಟ್ಟಿ ಹಾಗೂ ರಾಜೇಶ್ ಎನ್ ಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ಮಯೂರ ಎನ್ ಶೆಟ್ಟಿ ಕುಟುಂಬಕ್ಕೆ ಶ್ರೀ ಕಟೀಲಿನ ತಾಯಿ ದುರ್ಗಾಪರಮೇಶ್ವರಿ ಅಮ್ಮನವರ ಆಶೀರ್ವಾದ ಸದಾ ಇರಲಿ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸಂಕಬೈಲ್ ಸತೀಶ್ ಅಡಪ್ಪ, ನಿರ್ದೇಶಕರು, ಮಹಾಪೋಷಕರು, ಪೋಷಕರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಹಾರ್ದಿಕವಾಗಿ ಹಾರೈಸುತ್ತದೆ.