ಹಿಂದುತ್ವ, ಸಂಸ್ಕೃತಿ, ತುಳುನಾಡಿನ ವೈಶಿಷ್ಟೆತೆಯನ್ನು ತಿಳಿಯಲು ತುಳು ಸಿನಿಮಾ ನೋಡಿ: ಕಲ್ಲಡ್ಕ ಪ್ರಭಾಕರ ಭಟ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿಂದುತ್ವ, ಸಂಸ್ಕೃತಿ, ತುಳುನಾಡಿನ ವೈಶಿಷ್ಟೆತೆಯನ್ನು ತಿಳಿಯಲು ತುಳು ಸಿನಿಮಾ ನೋಡಿ: ಕಲ್ಲಡ್ಕ ಪ್ರಭಾಕರ ಭಟ್

Share This

ವಿಕ್ರಾಂತ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

ಮಂಗಳೂರು: "ಹಿಂದುತ್ವ ರಾಷ್ಟ್ರೀಯತೆಯನ್ನು ಸಾರುವ ವಿಕ್ರಾಂತ್ ತುಳು ಸಿನಿಮಾ ಎರಡು ವರ್ಷಗಳ ಹಿಂದೆಯೇ ಬಿಡುಗಡೆಗೊಳ್ಳಬೇಕಿತ್ತು. ಆದರೆ ಕೊರೋನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ವಿಳಂಬವಾಯಿತು. ಹಿಂದುತ್ವ ಅಂದರೇನು ಎಂದು ತಿಳಿಯಲು ಹಿಂದೂ ಬಾಂಧವರು ಮಾತ್ರವಲ್ಲದೆ ಎಲ್ಲ ತುಳುವರು ಸಿನಿಮಾ ನೋಡುವ ಮೂಲಕ ಗೆಲ್ಲಿಸಬೇಕು" ಎಂದು ಅರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಶುಕ್ರವಾರ ಬೆಳಗ್ಗೆ ನಗರದ ಭಾರತ್ ಸಿನಿಮಾಸ್ ನಲ್ಲಿ ರಾಧಾ ನಿಸರ್ಗ ಕಂಬೈನ್ಸ್ ಲಾಂಛನದಲ್ಲಿ ರಾಜೇಂದ್ರ ಯಶು ಬೆದ್ರೋಡಿ ನಿರ್ಮಾಣದಲ್ಲಿ ನವೀನ್ ಮಾರ್ಲ ಕೊಡಂಗೆ ನಿರ್ದೇಶನದಲ್ಲಿ ತಯಾರಾದ ವಿಕ್ರಾಂತ್ ತುಳು ಸಿನಿಮಾ ಬಿಡುಗಡೆಗೊಳಿಸಿ ಮಾತಾಡುತ್ತಿದ್ದರು.ವಿಕ್ರಾಂತ್ ಸಿನಿಮಾದಲ್ಲಿ ರಾಷ್ಟ್ರೀಯತೆ, ಹಿಂದುತ್ವ, ನಮ್ಮತನ ಏನು ಎಂಬುದನ್ನು ತೋರಿಸಲಾಗಿದೆ. ನಮ್ಮ ಸಂಸ್ಕೃತಿ, ತುಳುನಾಡಿನ ವೈಶಿಷ್ಟೆತೆಯನ್ನು ಸಿನಿಮಾದಲ್ಲಿ ಬಿಂಬಿಸುವ ಪ್ರಯತ್ನವನ್ನು ನಿರ್ದೇಶಕ ನವೀನ್ ಮಾರ್ಲ ಕೊಡಂಗೆ ಮಾಡಿದ್ದಾರೆ ಎಂದರು.

ಬಳಿಕ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು, "ತುಳು ಸಿನಿಮಾಗಳಲ್ಲಿ ಉತ್ತಮ ಸಂದೇಶ, ಸಾಮಾಜಿಕ ಕಥಾಹಂದರವಿದ್ದರೆ ತುಳುವರು ಮೆಚ್ಚಿಕೊಳ್ಳುತ್ತಾರೆ. ವಿಕ್ರಾಂತ್ ಸಿನಿಮಾ ಕಥೆ ವಿಶೇಷವಾಗಿದ್ದು ನಿರ್ಮಾಪಕರು ಸಾಕಷ್ಟು ಶ್ರಮವಹಿಸಿ ಚಿತ್ರ ಮಾಡಿದ್ದಾರೆ. ತುಳುನಾಡಿನ ಭಾಷಾ ಸೊಗಡಿನ ಜೊತೆಗೆ ರಾಷ್ಟ್ರೀಯತೆಯ ಸಂದೇಶ ಚಿತ್ರದಲ್ಲಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಬೇಕು. ಈ ಸಿನಿಮಾ ಮುಂಬೈಗೆ ಬಂದಾಗ ಮುಂಬೈನಲ್ಲಿರುವ ತುಳುವರು ಸಿನಿಮಾಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದ್ದಾರೆ ಎಂದರು. 

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರ ನಿರ್ಮಾಪಕ ರಾಜೇಂದ್ರ ಯಶು ಬೆದ್ರೋಡಿ, ನಿರ್ದೇಶಕ ನವೀನ್ ಮಾರ್ಲ ಕೊಡಂಗೆ, ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಭರತ್ ಕುಮುಡೇಲ್, ನಟ ವಿನೋದ್ ಶೆಟ್ಟಿ ನಟಿ ಶೀತಲ್ ನಾಯಕ್, ರಮೇಶ್ ರೈ ಕುಕ್ಕುವಲ್ಲಿ, ಆರ್. ಧನರಾಜ್, ಕೊಡ್ಮಣ್ ಕಾಂತಪ್ಪ ಶೆಟ್ಟಿ, ಲೋಕನಾಥ ಶೆಟ್ಟಿ ಬಿ.ಸಿ.ರೋಡು, ಬಾಳ ಜಗನ್ನಾಥ ಶೆಟ್ಟಿ ಪೂರ್ಣಿಮಾ ಯತೀಶ್ ರೈ ಉಪಸ್ಥಿತರಿದ್ದರು. ಸಂದೀಪ್ ಶೆಟ್ಟಿ ರಾಯಿ ಕಾರ್ಯಕ್ರಮ ನಿರ್ವಹಿಸಿದರು.

ಸಂಘಟನೆಯ ಬಗ್ಗೆ ಮತ್ತು ಹಿಂದೂ ಸಮಾಜದ ಮೇಲೆ ಆಗುವ ಅನ್ಯಾಯದ ಬಗ್ಗೆ, ಪ್ರಸ್ತುತ ವಿದ್ಯಾಮಾನದ ಅರಿವು ಮೂಡಿಸುವ ಕಥೆಯನ್ನು ವಿಕ್ರಾಂತ್ ಸಿನಿಮಾ ಹೊಂದಿದೆ.ವಿಕ್ರಾಂತ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಬಿಗ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನೊಕ್ಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ.

Pages