ಮುಂಬೈ : ಪುಣೆ ಬಂಟರ ಸಂಘದ ನೂತನ ಸಭಾಭವನದ ರೂವಾರಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕರು, ಮಹಾನ್ ದಾನಿಗಳು ಆದ ಓಣಿ ಮಜಲು ಶ್ರೀ ಜಗನ್ನಾಥ ಶೆಟ್ಟಿ ಅವರ 90ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆ ಪುಣೆ ಬಂಟರ ಸಂಘದ ವತಿಯಿಂದ ನಡೆಯಿತು.
ಪುಣೆ ಬಂಟರ ಸಂಘದ ವತಿಯಿಂದ ಅವರ ಹುಟ್ಟುಹಬ್ಬವನ್ನು ಗೌರವದಿಂದ ಮತ್ತು ಪ್ರೀತಿಯಿಂದ ಬಂಟ ಬಾಂಧವರು ಆಚರಿಸುತ್ತಿರುವ ಈ ಶುಭ ವೇಳೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಸರ್ವ ಸದಸ್ಯರು ಅಭಿಮಾನದಿಂದ ಹಿರಿಯರಿಗೆ ಶುಭಾಶಯವನ್ನು ಕೋರುತ್ತಾ ಶ್ರೀಯುತರು ನೂರುಕಾಲ ಬಾಳಲಿ ಎಂದು ಹಾರೈಸುತ್ತೇವೆ.
ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ ಇನ್ನಾ, ಮತ್ತು ಪದಾಧಿಕಾರಿಗಳಾದ ಶ್ರೀ ಕುಶಲ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಲತ ಸತೀಶ್ ಶೆಟ್ಟಿ, ಶ್ರೀಮತಿ ಪುಷ್ಪ ಕುಶಲ ಹೆಗ್ಡೆ, ಶ್ರೀಮತಿ ದಿವ್ಯ ಸಂತೋಷ್ ಶೆಟ್ಟಿ, ಶ್ರೀ ಸತೀಶ್ ಶೆಟ್ಟಿ, ಶ್ರೀ ಅಜಿತ್ ಹೆಗ್ಡೆ, ಶ್ರೀ ವಿಶ್ವನಾಥ ಶೆಟ್ಟಿ, ಶ್ರೀಮತಿ ಸುಚಿತಾ ಶೆಟ್ಟಿ, ಶ್ರೀಮತಿ ಶಮ್ಮಿ ಶೆಟ್ಟಿ ಮತ್ತು ಇತರ ಬಂಟ ಬಾಂಧವರು ಉಪಸ್ಥಿತರಿದ್ದರು.