ಮಜಿಬೈಲು : ಕರಿಬೈಲು ಶ್ರೀ ಮಹಾಮಲರಾಯ ದೈವಸ್ಥಾನ ಮಜಿಬೈಲು ಇಲ್ಲಿ ನವರಾತ್ರಿ ಪೂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಳೆ ಜರಗಲಿರುವುದು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ನ್ಯಾಯವಾದಿ ಯಂ.ದಾಮೋದರ ಶೆಟ್ಟಿಯವರ ಸೇವರೂಪವಾಗಿ ಅಕ್ಟೋಬರ್ 12 ರಂದು ಸಾಯಂಕಾಲ 6 ಗಂಟೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ಕಟೀಲು ಮೇಳದ ಪ್ರಸಿದ್ಧ ಭಾಗವತರು ಬೊಂದೆಲ್ ಸತೀಶ್ ಶೆಟ್ಟಿ, ಕೂಳೂರು ಶುಭಾನಂದ ಶೆಟ್ಟಿ, ಚೆಂಡೆ - ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್, ಕೋಳ್ಯೂರು ಭಾಸ್ಕರ, ಪಾತ್ರವರ್ಗದಲ್ಲಿ ಸಾಣೂರು ಮಹೇಶ್ ಕುಮಾರ್, ಯಂ.ದಾಮೋದರ ಶೆಟ್ಟಿ, ಗಣೇಶ್ ಕುಂಜತ್ತೂರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆಯವರು ಪಾಲ್ಗೊಳ್ಳಲಿದ್ದರೆಂದು ಪತ್ರಿಕೆ ಪ್ರಕಟನೆಯಲ್ಲಿ ಸಂಯೋಜಕರಾದ ಯಂ.ದಾಮೋದರ ಶೆಟ್ಟಿ ತಿಳಿಸಿದ್ದರೆ.