ಮುಂಬೈ: ಹಿರಿಯ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಮಹಾನ್ ನಾಯಕ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಅವರು ಮಾಧ್ಯಮದೊಂದಿಗೆ ಮಾತನಾಡಿ ಆಸ್ಕರ್ ಫರ್ನಾಂಡಿಸ್ ಪ್ರಶ್ನಾತೀತ ರಾಜಕೀಯ ನಾಯಕನಾಗಿದ್ದು ಪಕ್ಷಭೇದವಿಲ್ಲದೆ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ತಮ್ಮ ಹಾಗೂ ಆಸ್ಕರ್ ನಡುವಿನ ಅವಿನಾಭಾವ ಸಂಬಂಧಗಳನ್ನು ಸ್ಮರಿಸಿಕೊಂಡ, ಕರಾವಳಿ ಭಾಗದ ಅಭಿವೃದ್ಧಿಗೆ ಆಸ್ಕರ್ ಕೊಡುಗೆ ಅಪಾರ, ಕಳೆದ ವರ್ಷ 2019ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಆಸ್ಕರ್ ದಂಪತಿಯನ್ನು ಸನ್ಮಾನಿಸಿರುವುದನ್ನು ನೆನಪಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಗಳಿಗೆ ಆಸ್ಕರ್ ಮತ್ತು ಅವರ ಪತ್ನಿ ಭಾಗಿಯಾಗುತ್ತಿದ್ದರು, ಆಸ್ಕರ್ ಓರ್ವ ಸ್ನೇಹಮಯಿ ಜೀವಿ, ರಾಜಕೀಯ ಅಜಾತಶತ್ರು ಎಂದು ಬಣ್ಣಿಸಿದ್ದಾರೆ.
ಆಸ್ಕರ್ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಕರ್ನಿರೆ ವಿಶ್ವನಾಥ ಶೆಟ್ಟಿ( ಉಪಾಧ್ಯಕ್ಷರು )ಇಂದ್ರಾಳಿ ಜಯಕರ ಶೆಟ್ಟಿ (ಕಾರ್ಯದರ್ಶಿ), ಉಳ್ತೂರು ಮೋಹನ್ ದಾಸ್ ಶೆಟ್ಟಿ( ಕೋಶಾಧಿಕಾರಿ )ಸಂಕಬೈಲ್ ಸತೀಶ್ ಅಡಪ್ಪ, (ಜೊತೆ ಕಾರ್ಯದರ್ಶಿ) ಮತ್ತು ನಿರ್ದೇಶಕರು, ಮಹಾ ಪೋಷಕರು, ಪೋಷಕರು, ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತಡಿಸಿದ್ದಾರೆ.