ಇತರರ ಕಷ್ಟವನ್ನು ತನ್ನದೆಂದು ಭಾವಿಸಿ ಸಹಾಯ ಮಾಡುವ ಗುಣವಿರಬೇಕು : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಇತರರ ಕಷ್ಟವನ್ನು ತನ್ನದೆಂದು ಭಾವಿಸಿ ಸಹಾಯ ಮಾಡುವ ಗುಣವಿರಬೇಕು : ಐಕಳ ಹರೀಶ್ ಶೆಟ್ಟಿ

Share This

ಮಂಗಳೂರು: ನೆರೆಮನೆಯವರ ಅಥವಾ ಇತರರ ಕಷ್ಟಗಳನ್ನು ನೋಡಿ ಏನಾದರೂ ಸಹಾಯ ಮಾಡಲು ಪ್ರಯತ್ನಿಸಬೇಕು. ನೋಡಿಯೂ ನೋಡದಂತೆ ನನಗೇಕೆ ಬೇಕು ಬೇಡದ ಕೆಲಸವೆಂದು ಸುಮ್ಮನಿರಬಾರದು. ಇತರರ ಕಷ್ಟವನ್ನು ತನ್ನದೇ ಕಷ್ಟವೆಂದು ಸ್ವೀಕರಿಸಿ ಸಾಧ್ಯವಾದ ಸಹಾಯವನ್ನು ಮಾಡಲು ಪ್ರಯತ್ನಿಸಬೇಕು. ಅದುವೇ ಬದುಕಿನ ಸಾರ್ಥಕತೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಬಾಳೆಪುಣಿ ಸಮೀಪದ ಯರ್ಮಾಜೆ  ಎಂಬಲ್ಲಿ ಆಘಾತಗೊಂಡ ದೇಹದ ಒಂದು ಪಾರ್ಶ್ವದ ಬಲವನ್ನು ಕಳೆದುಕೊಂಡು ಮಲಗಿದ್ದಲ್ಲಿಯೇ ಕಳೆದ ಎರಡೂವರೆ ವರ್ಷಗಳಿಂದ ಕಷ್ಟ ಪಡುತ್ತಿರುವ ಜಯಶಂಕರ  ನೊಂಡ ಅವರ ಅಶಕ್ತತೆ ಯನ್ನು ಮನಗಂಡು ಸಹಾಯ ಹಸ್ತ ಒದಗಿಸಿ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಅವರ ಮನೆಯನ್ನು ಸಂಪೂರ್ಣಗೊಳಿಸಿ ಒಕ್ಕೂಟದ ವತಿಯಿಂದ ನಿರ್ಮಾಣ ಮಾಡಿದ ಮನೆಯನ್ನು ಸುಮತಿ ನೊಂಡ ಮತ್ತು  ಜಯಶಂಕರ ನೋಂಡ ರವರಿಗೆ ಹಸ್ತಾಂತರಿಸಿದರು.


ನಂತರ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಜಯಶಂಕರ ನೋಂಡರಿಗೆ ಜಾಗತಿಕ ಬಂಟರ ಸಂಘದ  ಮೂಲಕ  ಆರೋಗ್ಯ ನೆರವು ನೀಡಿ  ಚಿಕಿತ್ಸೆಗಾಗಿ ಪ್ರತಿ ತಿಂಗಳು 5,000/ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸದ  ಬಗ್ಗೆಯೂ ಸಹಕರಿಸುವುದಾಗಿ ತಿಳಿಸಿದರು. ಸಂದರ್ಭದಲ್ಲಿ ನೋ0ಡಾ ದಂಪತಿಗಳು ಇಂತಹ ಸ್ಥಿತಿಯಲ್ಲಿ ಅದೆಷ್ಟು ದೂರದಿಂದ ಬಂದು ನಮ್ಮನ್ನು ಕೇಳುವವರು ಇದ್ದಾರಲ್ಲ ಎಂಬ ಆನಂದದಿಂದ ಕೃತಜ್ಞತೆಯನ್ನು ಸಲ್ಲಿಸಿದಾಗ ಎಲ್ಲರ ಹೃದಯ ತುಂಬಿ ಬಂದ ದೃಶ್ಯವು ಶ್ರೀ ಐಕಳ ಹರೀಶ್ ಶೆಟ್ಟಿಯವರ ಮತ್ತು ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ಮನ ತುಂಬಿ ಬಂದು  ಹೃದಯ ಗದ್ಗಿತ ವಾಯಿತು ಒಂದು ಕ್ಷಣ ಮಾತುಗಳು ಮೌನ ವಾದವು.


ಮಹತ್ಕಾರ್ಯದಲ್ಲಿ ಬಂಟರ ಸಂಘ ಸಾಲೆತ್ತೂರು ಇದರ ಪದಾಧಿಕಾರಿಗಳ ಜನಮೆಚ್ಚುವ ಕಾರ್ಯವೈಖರಿ ಗಳನ್ನು ಗುರುತಿಸಿ ಅವರನ್ನು ಅಭಿನಂದಿಸಿದರು. ಸಂದರ್ಭದಲ್ಲಿ  ಅಗರಿ ಉದಯಕುಮಾರ್ ರೈ ಇಂಜಿನಿಯರ್  ಅಕ್ಷಯ್ ಕುಮಾರ್ ರೈ ಬದಿ ಯಾರು  ಸೀತಾರಾಮ ಶೆಟ್ಟಿ ಮುಂಬೈ  ಸುರೇಶ್ ಶೆಟ್ಟಿ ಒಡಿಯೂರು  ಇವರುಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ರಾದ  ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡಿ   ನಮ್ಮ ಸಮುದಾಯದ ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸುವುದು ಜಾಗತಿಕ ಸಂಘದ ಧ್ಯೇಯವಾಗಿದೆ..ಇದನ್ನು ಐಕಳ ಹರೀಶ್ ಶೆಟ್ಟಿಯವರು ಸಮರ್ಥವಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು.


ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಸುಭಾಶ್ಚಂದ್ರ ಶೆಟ್ಟಿ,ಕುಳಾಲು ಹಾಗೂ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಮಾಜಿ  ಅಧ್ಯಕ್ಷರಾದ  ರವೀಶ್ ಶೆಟ್ಟಿ  ಕರ್ಕಳ, ಗಣೇಶ್ ಶೆಟ್ಟಿ ಬಾರೆಬೆಟ್ಟು   ಐಕಳ ಹರೀಶ್ ಶೆಟ್ಟಿಯವರ  ಜನಪರ ಕಾರ್ಯಕ್ರಮಕ್ಕೆ  ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಸಾಲೆತ್ತೂರು ವಲಯ ಬಂಟರ ಸಂಘದ ಕಾರ್ಯದರ್ಶಿಯವರಾದ  ಶಶಿಧರ್ ರೈ ಕುಳಾಲುಒಕ್ಕೂಟದ ಸದಸ್ಯ ಸುರೇಶ್  ಶೆಟ್ಟಿ ಸೂರಿಂಜೆ, ರವಿ ಶೆಟ್ಟಿ ಜತ್ತಬೆಟ್ಟು, ಮಹಿಳಾ ಘಟಕದ ಅಧ್ಯಕ್ಷರಾದ  ವಿಜಯಾ ಬಿ. ಶೆಟ್ಟಿ ಸಾಲೆತ್ತೂರು , ಜಯಶಂಕರ ನೋಂಡ ರವರು  ಉಪಸ್ಥಿತರಿದ್ದರು.


ಸಾಲೆತ್ತೂರು ವಲಯದ ಬಂಟರ ಸಂಘದ ಅಧ್ಯಕ್ಷರಾದ  ದೇವಪ್ಪ ಶೇಖ ಪೀಲ್ಯಡ್ಕರವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಶಿಧರ್ ರೈ, ಕುಳಾಲು ವಂದನಾರ್ಪಣೆಯನ್ನು ಸಲ್ಲಿಸಿದರು. ಜಾಗತಿಕ ಬಂಟರ ಸಂಘಗಳ ಮಾಜಿ ಕೋಶಾಧಿಕಾರಿಗಳಾದ  ಬಾಲಕೃಷ್ಣ ರೈ ಕೊಲ್ಲಾಡಿಯವರು ಕಾರ್ಯಕ್ರಮ ನಿರೂಪಿಸಿದರು.

Pages