ಮಂಗಳೂರು: ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಮಂಗಳೂರು ಇದರ 2021-22 ನೇ ಸಾಲಿನ ಅಧ್ಯಕ್ಷರಾಗಿ ಅಡ್ಯಾರ್ ಗುತ್ತು ಜಯಶೀಲ ಅಡ್ಯಂತಾಯ ಆಯ್ಕೆ ಗೊಂಡಿದ್ದಾರೆ. ಉಪಾಧ್ಯಕ್ಷ ರಾಗಿ ಗಣೇಶ್ ಎನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕೃಷ್ಣ ಪುತ್ರನ್, ಜತೆ ಕಾರ್ಯದರ್ಶಿಯಾಗಿ ರಾಜ್ ಕುಮಾರ್ ಹಾಗೂ ಕೋಶಾಧಿಕಾರಿಯಾಗಿ ಸತ್ಯರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯ ಕಾರಿ ಸಮಿತಿಗೆ 50 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಜಯಶೀಲ ಅಡ್ಯಂತಾಯ ಅವರು ಅಡ್ಯಾರ್ ಗುತ್ತು ಪಕ್ಷಿಕೃಷ್ಣ ದೇವಸ್ಥಾನದ ಕೋಶಾಧಿಕಾರಿಯೂ ಆಗಿದ್ದರು. ಕುಡ್ಲ ಅರ್ಥ್ ಮೂವರ್ ಎಸೋಸಿಯೇಶನ್ನ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಅಡ್ಯಾರ್ ಗ್ರಾಮ ಪಂಚಾಯತ್ನ ಮಾಜಿ ಸದಸ್ಯರಾಗಿದ್ದರು. ಅಲ್ಲದೆ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ದ.ಕ. ಬಸ್ ಮಾಲಕರ ಸಂಘದ ಉಪಾಧ್ಯಕ್ಷರಾಗಿ, ಬಂಟರ ಮಾತೃಸಂಘದ ಮಂಗಳೂರು ತಾಲೂಕು ಕಾರ್ಯಕಾರಿ ಸಮಿ ತಿಯ ಸದಸ್ಯರಾಗಿ ಇದ್ದಾರೆ. ಮಂಗ ಳೂರು ಎಪಿಎಂಸಿ ಸದಸ್ಯ ರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಅನೇಕ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ದುಡಿಯುತ್ತಿದ್ದಾರೆ.