ಮುಂಬಯಿ : ರಸ್ತೆ ಅಪಘಾತ, ಡೆಂಗ್ಯೂ, ಕೋರೋನಾ ಮುಂತಾದ ರೋಗಿಗಳಿಗೆ ರಕ್ತದ ಅಗತ್ಯವಿದ್ದು ಇಂತಹ ರಕ್ತದಾನ ಶಿಬಿರಗಳಿಂದ ಅದು ಸಾಧ್ಯ ಅಂತಹ ಉತ್ತಮ ಕಾರ್ಯವನ್ನು ಕೆ ಡಿ ಶೆಟ್ಟಿಯವರ ಸ್ಥಾಪಿಸಿರುವ ಭವಾನಿ ಫೌಂಡೇಶನ್ ಮಾಡುತ್ತಿರುವುದು ಅಬಿನಂದನೀಯ ಎಂದು ಖ್ಯಾತ ಮೂಳೆ ತಜ್ನ, ಮೀರಾ - ಭಾಯಂದರ್ ದೀಪಕ್ ಹಾಸ್ಪಿಟಲ್ ನ ಡಾ. ಭಾಸ್ಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಮುಂಬೈ
ನಗರದ ಪ್ರಸಿದ್ಧ ಸಮಾಜಸೇವೆ ಸಂಘಟನೆ ಭವಾನಿ ಫೌಂಡೇಶನ್
ವತಿಯಿಂದ ನವಿಮುಂಬಯಿಯ ಸಿಬಿಡಿ ಬೇಳಾಪುರ ವಿ
ಟೈಮ್ಸ್ ಸ್ಟಾರ್ ಸೆಕ್ಟರ್ 15 ಇಲ್ಲಿ
ಮುನಿಸಿಪಲ್ ಬ್ಲಟ್ ಬ್ಯಾಂಕಿನ ಸಹಯೋಗದೊಂದಿಗೆ
ಫೌಂಡೇಶನ್ನ ಕಾರ್ಯಾಲಯದಲ್ಲಿ ನಡೆದ ರಕ್ತದಾನ ಶಿಬಿರದ ಗೌರವ
ಅತಿಥಿಯಾಗಿ ಆಗಮಿಸಿ ಮಾತನಾಡಿ, ಬಡತನದ
ರೇಖೆಗಿಂತ ಕೆಳಗಿರುವ ಜನರ ರಕ್ಷಣೆಗೆ ರಕ್ತದ
ಅಗತ್ಯವಿದ್ದಲ್ಲಿ ಅವರಿಗೆ ರಕ್ತ ಖರೀದಿಸಲು
ಅಸಾದ್ಯವಾಗುತ್ತಿದ್ದು, ಅಂತಹ
ಬಡ ಜನರಿಗೆ ಉಪಯೋಗಕ್ಕೆ ಮಾಡುತ್ತಿರುವ
ರಕ್ತದಾನ ಎಲ್ಲಕ್ಕಿಂತಲೂ ಶ್ರೇಷ್ಠ . ರಕ್ತದಾನ ಮಾಡುವುದಕ್ಕೆ ನಮ್ಮಲ್ಲಿ
ಭಯ ಇರಬಾರದು ಎಂದರು.
ಭವಾನಿ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಕುಸುಮೋದರ ಡಿ ಶೆಟ್ಟಿ ಚೆಲ್ಲಡ್ಕ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಫೌಂಡೇಶನ್ ನ ಅಧ್ಯಕ್ಷ ಜೀಕ್ಷಿತ್ ಕೆ. ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸುತ್ತಾ ಕೋವಿಡ್ ಕಾಲದ ಮದ್ಯೆ ಇದು ನಮಗೆ ಒಂದು ಉತ್ತಮ ಅವಕಾಶ ದೊರಕಿದ್ದು ಈ ಸಂದರ್ಭದಲ್ಲಿ ಶಿಭಿರದ ಅಗತ್ಯವಿದ್ದು ನಮ್ಮ ಸೇವಾ ಕಾರ್ಯಗಳು ಅಸಕ್ತ ಕುಟುಂಬಗಳಿಗೆ. ವಿದ್ಯಾರ್ಥಿಗಳಿಗೆ. ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಭವಾನಿ ಫೌಂಡೇಶನ್ ನ ಎಲ್ಲಾ ಕಾರ್ಯಕರ್ತರಿಗೆ ಅಬಾರಿಯಾಗಿರುವೆನು ಎಂದರು.
ಭವಾನಿ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಕುಸುಮೋದರ
ಡಿ ಶೆಟ್ಟಿ ಚೆಲ್ಲಡ್ಕ ಅವರು
ಮಾತನಾಡಿ, ಕೋರೋನ ನಮ್ಮೆಲ್ಲರನ್ನು
ನಾಲ್ಕೆದು ವರ್ಷ ಹಿಂದಕ್ಕೆ ತಳ್ಳಿದೆ.
ರಕ್ತದಾನ ಮಾಡಲು ಆಗಮಿಸಿದ ನೀವೆಲ್ಲರೂ
ನಮ್ಮ ಭವಾನಿ ಪರಿವಾರದವರು. ನಿಮ್ಮೆಲ್ಲರ
ಸಹಕಾರದಿಂದ ಹಾಗೂ ವೇದಿಕೆಯಲ್ಲಿರುವ ಎಲ್ಲಾ
ಗಣ್ಯರ ಸಹಕಾರದಿಂದ ಇಂದು ರಕ್ತದಾನ ಶಿಬಿರವ
ಯಶಸ್ವಿಯಾಗಿ ನಡೆಯಲು ನನ್ನ ತಾಯಿ ಭವಾನಿ ಅಮ್ಮನ
ಆಶೀರ್ವಾದ ಆಶೀರ್ವಾದ ಕಾರಣ ಎಂದು ನಂಬಿದ್ದೇನೆ
. ಫೌಂಡೇಶನ್
ನ ವೃದ್ಧಾಶ್ರಮ . ವೈದ್ಯಕೀಯ
ಕಾಲೇಜ್ .ಆಸ್ಪತ್ರೆ ನಿರ್ಮಾಣದ ಯೋಜನೆ ಶೀಘ್ರಗತಿಯಲ್ಲಿ ನಡೆಯುತ್ತಿದೆ
ಎಂದರು.
ಜ಼ೀ 24
ತಾಸ್ ನ ಸಂಪಾದಕ ಹಾಗೂ
ಬಿಸಿನೆಸ್ ಹೆಡ್ ಪತ್ರಕರ್ತ ನಿಲೇಶ್
ಖರೆ ಈ ಸಂದರ್ಭದಲ್ಲಿ ವೇದಿಕೆಯಲ್ಲಿ
ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಯಾಗಿ ಆಗಮಿಸಿದ ಪತ್ರಕರ್ತರು, ರಾಜಕೀಯ
ದುರೀಣರು ಹಾಗೂ ಸ್ಥಳೀಯರು ರಕ್ತದಾನ
ನೀಡಿದರು. ಅತಿಥಿಗಳನ್ನು ಕುಸುಮೋದರ ಡಿ ಶೆಟ್ಟಿ, ಜೀಕ್ಷಿತ್
ಕೆ ಶೆಟ್ಟಿ, ಉಪಾಧ್ಯಕ್ಷ ದಿನೇಶ್
ಶೆಟ್ಟಿ, ಕೋಶಧಿಕಾರಿ ಕರ್ನೂರು ಮೋಹನ್ ರೈ,
ಟ್ರಸ್ಟಿಗಳಾದ ಸರಿತ ಕೆ ಶೆಟ್ಟಿ.
ಧರ್ಮಪಾಲ ದೇವಾಡಿಗ ನವೀನ್ ಶೆಟ್ಟಿ
. ಗೌರವಿಸಿದರು.
ರಕ್ತದಾನ ಶಿಬಿರದಲ್ಲಿ ಶ್ರೀ ಗಣಪತಿ ಅಯ್ಯಪ್ಪ ದುರ್ಗಾಪರಮೇಶ್ವರಿ ದೇವಸ್ಥಾನ ನೇರೂನ್ ಇದರ ಅಧ್ಯಕ್ಷ ಸಂಜೀವ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ಉಪ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ, ಸ್ಥಳೀಯ ಹೋಟೇಲು ಉದ್ಯಮಿ ಜಗದೀಶ್ ಶೆಟ್ಟಿ ನಂದಿಕೂರು .ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ರಾಜಕೀಯ ಮುಖಂಡರು ಸಮಾಜ ಸೇವಕರು ಉಪಸ್ಥಿತರಿದ್ದರು.
ರಾಜಲಕ್ಷಿ ಕಾರ್ಯಕ್ರಮವನ್ನು ನಿರೂಪಿಸಿದರು. ಆರತಿ ಶೆಟ್ಟಿ ಸಹಕರಿಸಿದರು. ದಿನೇಶ್ ಶೆಟ್ಟಿ ಧನ್ಯವಾದ ನೀಡಿದರು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಭವಾನಿ ಪೌಂಡೇಶನಿನ ಹಿತೈಷಿಗಳು ಮತ್ತು ಭವಾನಿ ಶಿಪ್ಪಿಂಗ್ ಕಂಪೆನಿಯ ಕಾರ್ಮಿಕರು ಹಾಗೂ ಸ್ಥಳೀಯ ತುಳು ಕನ್ನಡಿಗರು ಸುಮಾರು ಇನ್ನೂರಕ್ಕೂ ಮಿಕ್ಕಿ ಜನ ರಕ್ತದಾನ ನೀಡಿದರು.