ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಶ್ಣವ್ ರವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ಈ ಕೆಳಕಂಡ ವಿಷಯಗಳ ಕುರಿತು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಆಡಳಿತಾತ್ಮಕ ಬದಲಾವಣೆ: 1.ಮಂಗಳೂರು ತೋಕುರು ರೈಲ್ವೆ ಲೈನ್ ನ್ನು ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಬಗ್ಗೆ. 2. ಹಾಸನ ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪೆನಿಯನ್ನು ಸೌತ್ ವೆಸ್ಟರ್ನ್ ರೈಲ್ವೆಯೊಂದಿಗೆ ವೀಲೀನ.
ಮೂಲಭೂತ ಸೌಕರ್ಯಗಳ ಅಭಿವೃದ್ಧಿ: 1.ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಗುಣಮಟ್ಟದ ಹೊಸ ಕಟ್ಟಡ ನಿರ್ಮಿಸುವಂತೆ ಹಾಗೂ ಫ್ಲಾಟ್ ಫಾರ್ಮ್ 4 ಮತ್ತು 5 ರ ಕಾಮಗಾರಿಯನ್ನು ಚುರುಕುಗೊಳಿಸುವ ಬಗ್ಗೆ. 2. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳ ಅಳವಡಿಕೆ ಹಾಗೂ ರೈಲ್ವೆ ನಿಲ್ದಾಣದ ಮೂಲಭೂತ ಸೌಲಭ್ಯಗಳ ಮೇಲ್ದರ್ಜೆಗೇರಿಸುವ ಬಗ್ಗೆ. 3. ಪುತ್ತೂರು ವಿವೇಕಾನಂದ ಕಾಲೇಜು ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ. 4. ಕಬಕ ಪುತ್ತೂರು ಸ್ಟೇಷನ್ ಯಾರ್ಡ್ ನಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ. 5. ಮಂಗಳೂರು ಬೈಕಂಪಾಡಿಯ ಮೀನಕಳಿಯ ರೈಲ್ವೆ ಯಾರ್ಡ್ ನಲ್ಲಿ ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣ.
ಹೊಸ ರೈಲುಗಳಿಗೆ ಬೇಡಿಕೆ: 1. ಮಂಗಳೂರಿನಿಂದ ತಿರುಪತಿಗೆ ಹಾಸನ ಮೂಲಕ ಹೊಸ ರೈಲ್ವೆ ಸೇವೆ. 2. ಮಂಗಳೂರಿನಿಂದ ಚಿನ್ನೈ ಗೆ ಹಾಸನ ಮೂಲಕ ಹೊಸ ರೈಲ್ವೆ ಸೇವೆ. 3. ಗೇಜ್ ಪರಿವರ್ತನೆಗೆ ಮೊದಲು ಸಂಚರಿಸುತ್ತಿದ್ದ ಮಹಾಲಕ್ಷ್ಮೀ ಎಕ್ಸಪ್ರೆಸ್ ರೈಲನ್ನು ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಮೀರಜ್ ಗೆ ಮರು ಪ್ರಾರಂಭಿಸುವ ಬಗ್ಗೆ.
ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶೀಘ್ರದಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ.