ಮುಂಬೈಯ ಹಿರಿಯ ಛಾಯಾಗ್ರಾಹಕ ಪುರುಷೋತ್ತಮ ಶೆಟ್ಟಿ ನಿಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಂಬೈಯ ಹಿರಿಯ ಛಾಯಾಗ್ರಾಹಕ ಪುರುಷೋತ್ತಮ ಶೆಟ್ಟಿ ನಿಧನ

Share This

ಮುಂಬೈ : ಮುಂಬೈ ಮಹಾನಗರದಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ಅತ್ಯುತ್ತಮ ಛಾಯಾಗ್ರಾಹಕರೆಂದು ಹೆಸರು ಪಡೆದಿದ್ದ ಕೆ. ಪುರುಷೋತ್ತಮ ಶೆಟ್ಟಿ (59) ಆಗಸ್ಟ್ 2 ರಂದು ನಿಧನರಾದರು. ಕೆಲಕಾಲದ ಅನಾರೋಗ್ಯದಿಂದಾಗಿ ಹೂಟ್ಟೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕುಳಾಯಿ ಶೆಟ್ಟಿ ಐಸ್ ಕ್ರೀಮ್ ಬಳಿಯ ಕಮಲ ಕಂಪೌಂಡ್ ನಲ್ಲಿ ವಾಸವಾಗಿದ್ದರು.

ಮುಂಬಯಿಯ ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಪುರುಷೋತ್ತಮ ಶೆಟ್ಟಿ ಹಲವಾರು ಸಾರ್ಜನಿಕ ಸಮಾರಂಭಗಳು ಹಾಗೂ ಸಾಂದರ್ಭಿಕ ಘಟನೆಗಳನ್ನು ತಮ್ಮ ಕೆಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದು ಅವು ಸಾರ್ವಕಾಲಿಕ ದಾಖಲೆಗಳಾಗಿ ಉಳಿದಿವೆ. ಅವರು ಪತ್ನಿ, ಪುತ್ರ, ಅಣ್ಣ,ಇಬ್ಬರು ಸಹೋದರರು, ಓರ್ವ ಸಹೋದರಿ ಹಾಗೂ ಭಾವ ಮಂಗಳೂರಿನ ಹೋಟೆಲ್ ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Pages