CM ಬೊಮ್ಮಾಯಿ ಅವರಿಗೆ ಬಿ. ರವೀಂದ್ರ ಶೆಟ್ಟಿ ಅವರ ‘ನಮ್ಮ ಮಂಗಳೂರು’ ಪುಸ್ತಕ ಹಸ್ತಾಂತರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

CM ಬೊಮ್ಮಾಯಿ ಅವರಿಗೆ ಬಿ. ರವೀಂದ್ರ ಶೆಟ್ಟಿ ಅವರ ‘ನಮ್ಮ ಮಂಗಳೂರು’ ಪುಸ್ತಕ ಹಸ್ತಾಂತರ

Share This

ಮಂಗಳೂರು : ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ರಚಿಸಿದ ನಮ್ಮ ಮಂಗಳೂರು ಪುಸ್ತಕವನ್ನು  ಮಂಗಳೂರು ಗೌರವಾನ್ವಿತ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಕರ್ನಾಟಕ ದ ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಮಂಗಳೂರಿನಲ್ಲಿ ಹಸ್ತಾಂತರಿಸಿದರು.

ಈ ಪುಸ್ತಕದಲ್ಲಿ ಮಂಗಳೂರಿನ ಸಮಗ್ರ ಮಾಹಿತಿ ಒಳಗೊಂಡಿದೆ. ಪುಸ್ತಕದ ಬಗ್ಗೆ ಸಿಎಂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕ ದಲ್ಲಿ ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಬರೆದಿರುವ ‘ನಮ್ಮ ಮಂಗಳೂರು’ ಅತ್ಯಪೂರ್ವ ಮಾಹಿತಿಗಳಿರುವ ಅಪರೂಪದ ಕೃತಿ. ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪೂರ್ತಿ ಚಿತ್ರಣ. ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲಾ ಶ್ರದ್ಧಾ ಕೇಂದ್ರಗಳ ವಿವರಗಳು. ಶೈಕ್ಷಣಿಕ ಹಬ್ ಎಂಬ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಎಷ್ಟು ಶಾಲೆ, ಕಾಲೇಜು, ವೈದ್ಯಕೀಯ, ಎಂಜೀನಿಯರಿಂಗ್, ವೃತ್ತಿಪರ ಕಾಲೇಜುಗಳಿವೆ ಎಂಬುವುದರ ಡಿಟೈಲ್ಸ್ ನಮ್ಮ ಮಂಗಳೂರು ಗ್ರಂಥದಲ್ಲಿದೆ.


ಮಂಗಳೂರು ಸುತ್ತಮುತ್ತ ಎಷ್ಟು ಆಸ್ಪತ್ರೆಗಳಿವೆ, ಹೊಟೇಲ್‌ಗಳಿವೆ ಎಂಬುವುದರ ಚಿತ್ರಣ. ಮಂಗಳೂರು ಸುತ್ತಮುತ್ತ ಇರುವ ಕೆರೆ, ಮಾರುಕಟ್ಟೆ, ಮೈದಾನ, ಪಾರ್ಕ್, ಕ್ರೀಡಾಂಗಣ, ಸ್ಮಶಾನಗಳ ಮಾಹಿತಿಗಳು, ನಮ್ಮ ಸಂಸದರು, ಶಾಸಕರು, ಮೇಯರ್, ಉಪಮೇಯರ್, ಕಾರ್ಪೊರೇಟರ್‌ಗಳ ಸಚಿತ್ರ ವಿವರಗಳು. ಕಾರ್ಪೊರೇಶನ್‌ನಿಂದ ನಾಗರಿಕರಿಗೆ ಲಭಿಸುವ ಸೌಲಭ್ಯಗಳೇನು, ಅದನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಮಾರ್ಗದರ್ಶಿ ಮಾಹಿತಿಯಿದೆ.


ಮಂಗಳೂರಿನ ಅಪರೂಪದ ಫೋಟೋಗಳ ಸಂಗ್ರಹ. ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳುಗಳ ದೂರವಾಣಿ ಸಂಖ್ಯೆಗಳು. ಯಾವ ನಂಬರ್‌ನ ಬಸ್ ಎಲ್ಲಿ ಸಂಚರಿಸುತ್ತೆ ಎಂಬುದರ ಮಾಹಿತಿಗಳು. ಸಂಗ್ರಹಯೋಗ್ಯ ಅಪರೂಪದ ಕೃತಿ ನಮ್ಮ ಮಂಗಳೂರು.

Pages