ಹರೀಶ್ ಶೆಟ್ಟಿ ಅವರ ಮೃತದೇಹದಲ್ಲಿದ್ದ ವಜ್ರದ ರಿಂಗ್ ಎಗರಿಸಿದ ಖಾಸಗಿ ಆಸ್ಪತ್ರೆ ಭದ್ರತಾ ಸಿಬ್ಬಂದಿಗಳು..? - BUNTS NEWS WORLD

 

ಹರೀಶ್ ಶೆಟ್ಟಿ ಅವರ ಮೃತದೇಹದಲ್ಲಿದ್ದ ವಜ್ರದ ರಿಂಗ್ ಎಗರಿಸಿದ ಖಾಸಗಿ ಆಸ್ಪತ್ರೆ ಭದ್ರತಾ ಸಿಬ್ಬಂದಿಗಳು..?

Share This

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಬಳ್ಳಾಲ್ ಬಾಗ್’ನ ಹರೀಶ್ ಶೆಟ್ಟಿ ಅವರ ಮೃತದೇಹದಿಂದ ವಜ್ರದ ರಿಂಗ್ ನಾಪತ್ತೆಯಾಗಿದೆ.

ಹರೀಶ್ ಶೆಟ್ಟಿ ಅವರು ಹೃದಯಘಾತವಾಗಿ ಗುರುವಾರ ನಿಧನರಾಗಿದ್ದು ಅವರ ಮೃತದೇಹವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಈ ಸಂದರ್ಭ ಅವರ ಚಿನ್ನದ ಸರವನ್ನು ತೆಗೆದಿದ್ದು, ಕಿವಿಯಲ್ಲಿರುವ ವಜ್ರದ ರಿಂಗ್ ತೆಗೆಯಲು ಸಾಧ್ಯವಾಗದ ಕಾರಣ ಅಂತ್ಯಕ್ರಿಯೆ ಸಂದರ್ಭ ತೆಗೆಯುವುದಾಗಿ ಅಲ್ಲಿನ ಭದ್ರತಾ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದ್ದರು.


ಮರುದಿನ ಶವಗಾರದಿಂದ ಮತೃದೇಹ ಪಡೆಯುವ ಸಂದರ್ಭ ಕಿವಿಯಲ್ಲಿನ ರಿಂಗ್ ನಾಪತ್ತೆಯಾಗಿದೆ ಎನ್ನಲಾಗಿದೆ.      

Pages