ಮಂಗಳೂರು : ಸಾಮಾನ್ಯ ಮಕ್ಕಳಿಗೆ ವಿದ್ಯೆ ನೀಡುವುದಕ್ಕಿಂತಲೂ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಶಿಕ್ಷಣ ನೀಡುವುದು ವಿಭಿನ್ನವಾದ ಕೆಲಸ. ಅಂತಹ ಭಿನ್ನ ಚೇತನ ವಿಶೇಷ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನದ ಮೂಲಕ ಶಿಕ್ಷಣ ನೀಡಿ ನಿವೃತ್ತ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಬೆಳಕಾಗಿದ್ದಾರೆ.
ದಿವಂಗತ ಮೋಹಿನಿ
ಅಪ್ಪಾಜಿ ನ್ಯಾಕ್ ವಿಶೇಷ ಮಕ್ಕಳಿಗಾಗಿ ಸ್ಥಾಪಿಸಿದ ಮಂಗಳಾ ಜ್ಯೋತಿ ಸಮಗ್ರ ಶಾಲೆಯಲ್ಲಿ 1992ರಲ್ಲಿ
ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಬಿ.ಎ, ಬಿ.ಎಡ್ ಪದವೀಧರರಾಗಿರುವ ಅಶೋಕ್ ಶೆಟ್ಟಿ ಅವರು ವಿಶೇಷ
ಮಕ್ಕಳ ಸಮನ್ವಯ ಶಿಕ್ಷಣದಲ್ಲಿ ತರಬೇತಿ ಪಡೆದು ಮಲ್ಟಿ ಕೆಟಗರಿ ಟೀಚರ್ಸ್ ಟ್ರೈನಿಂಗ್’ನಲ್ಲಿ ವಿಶಿಷ್ಟ
ದರ್ಜೆಯಲ್ಲಿ ಉತ್ತಿಣರಾಗಿದ್ದರು. 1995ರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಜವಾಬ್ದಾರಿ ವಹಿಸಿದ್ದರು.
ಪ್ರಸ್ತುತ ಈ ಶಾಲೆಯನ್ನು ಧರ್ಮಸ್ಥಳ ಕ್ಷೇತ್ರವು ವಹಿಸಿಕೊಂಡಿದ್ದು SDM ಮಂಗಳಜ್ಯೋತಿ ಶಾಲೆಯ ಮೂಲಕ
ನೂರಾರು ಭಿನ್ನ ಸಾಮರ್ಥ್ಯದ ಮಕ್ಕಳ ಬಾಳಿಗೆ ಬೆಳಕಾಗಿದೆ.
ಓರ್ವ ಶಿಕ್ಷಕನಾಗಿ ತಾನು ಸೇವೆ ಸಲ್ಲಿಸುತ್ತಿದ್ದ
ಎಸ್ ಡಿ ಎಮ್ ಮಂಗಳ
ಜ್ಯೋತಿ ಸಮಗ್ರ ಪ್ರೌಢ ಶಾಲೆಯ
ವಿಶೇಷ ಮಕ್ಕಳಿಗೆ ಹಾಗೂ ಶಾಲಾಭಿವೃದ್ದಿಗೆ ತಮ್ಮ
ಸ್ನೇಹಿತರು, ಹಿತೈಷಿಗಳು, ದಾನಿಗಳು, ಸಂಘ, ಸಂಸ್ಥೆಗಳು, ರೋಟರಿ
ಮತ್ತು ಲಯನ್ಸ್ ಸಂಸ್ಥೆಗಳು, ಇಂಡಿಯನ್
ರೆಡ್ಕ್ರಾಸ್, ದ ಕ ಜಿಲ್ಲಾ
ಅಂಗವಿಕಲರ ಫೆಡರೇಷನ್, ಜನ ಪ್ರತಿನಿಧಿಗಳು, ಹಳೆಯ
ವಿದ್ಯಾರ್ಥಿಗಳಿಂದ ರೂ 1 ಕೋಟಿಗೂ ಅಧಿಕ
ಸಹಾಯ ಪಡೆದ ವಿಶಿಷ್ಟ, ಅಪರೂಪದಲ್ಲಿ
ಅಪರೂಪದ ಶಿಕ್ಷಕರಾಗಿ ಸಮುದಾಯದಲ್ಲಿ ಗುರುತಿಸಿಕೊಂಡ ನಿವೃತ್ತ ಮುಖ್ಯ ಶಿಕ್ಷಕ.
ಶಿಕ್ಷಕ ವೃತ್ತಿಯ
ಜೊತೆಗೆ ಅಶೋಕ್ ಶೆಟ್ಟಿ ಅವರು ಉತ್ತಮ ಲೇಖಕರು, ಬರಹಗಾರರಾಗಿದ್ದಾರೆ. ಇವರು 2009ರಲ್ಲಿ ಸಮಗ್ರ ಶಿಕ್ಷಣ,
2011ರಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳು, 2015ರಲ್ಲಿ ಅನಾವರಣ, ಎಬಿಲಿಟಿ ಬಿಯಾಂಡ ಡಿಸಾಬಿಲಿಟಿ, ಅಶೋ
ಕವನ ಸಂಕಲನ ಹೀಗೆ ಹಲವು ಪುಸ್ತಕಗಳನ್ನು ಬರೆದು ಸಮಾಜಕ್ಕೆ
ಅರ್ಪಿಸಿದ್ದಾರೆ. ಅಲ್ಲದೆ ಸಾಮಾಜಿಕ ವಿದ್ಯಾಮಾನಗಳ ಬಗೆಗೆ ಅನೇಕ ಲೇಖನಗಳನ್ನು ಬರೆಯುತ್ತಿದ್ದು ಪ್ರಮುಖ
ದಿನಪತ್ರಿಕೆಗಳು, ನ್ಯೂಸ್ ಪೊರ್ಟಲ್’ಗಳಲ್ಲಿ ಪ್ರಕಟಗೊಳ್ಳುತ್ತಿದೆ. ಇವರು ಉತ್ತಮ ಶಿಕ್ಷಣ ತಜ್ಞರಾಗಿ
ಸಂಪನ್ಮೂಲ ವ್ಯಕ್ತಿಯಾಗಿ ಹಲವು ವಾಹಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಇವರ ಸಾಧನೆಗೆ ಸರ್ಕಾರ,
ಅನೇಕ ಸಂಘಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಜಿಲ್ಲಾ ಉತ್ತಮ ಶಿಕ್ಷಕ,
ರಾಜ್ಯ ಪ್ರಶಸ್ತಿ, ಡಾ. ರಾಧಾಕೃಷ್ಣನ್ ಪ್ರಶಸ್ತಿ,
ದ್ರೋಣಾಚಾರ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ನೇಶನ್ ಬುಲ್ಡರ್ ಅವಾರ್ಡ್,
ಸಮನ್ವಯ ಶಿಕ್ಷಣ ಸಾಧಕ ಪ್ರಶಸ್ತಿ,
ಸಮಾಜ ರತ್ನ ಪ್ರಶಸ್ತಿ ಲಭಿಸಿದೆ. 2008ರಲ್ಲಿ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆಯಿಂದ ‘ರಾಜ್ಯ ವಿಶೇಷ ಶಿಕ್ಷಕ’ ಪ್ರಶಸ್ತಿಯನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಅವರಿಂದ ಪಡೆದಿದ್ದರು.
ಇಂತಹ ಅಪೂರ್ವ ಸಾಧಕರಾಗಿರುವ
ಸಂಪನ್ಮೂಲ ವ್ಯಕ್ತಿಯಾಗಿರುವ ಅಶೋಕ್ ಶೆಟ್ಟಿ ಅವರು ನಮ್ಮ ಬಂಟ ಸಮಾಜದ ಹೆಮ್ಮೆಯಾಗಿದ್ದು ಅವರು ಇನ್ನಷ್ಟು
ಮಂದಿಗೆ ಬೆಳಕಾಗಲಿ, ಅವರ ಸಾಧನೆಯೂ ಇತರರಿಗೆ ಸ್ಪೂರ್ತಿಯಾಗಲೀ, ಮಾರ್ಗದರ್ಶನವಾಗಲಿ ಎಂದು ಈ ಮೂಲಕ
ಹಾರೈಸುತ್ತೇವೆ.