ಬಂಟ್ಸ್ ನ್ಯೂಸ್, ಮಂಗಳೂರು : ಲಲಿತ ಕಲೆಗಳ ಸಂವರ್ಧನೆಗೆ ಸಮರ್ಪಿತವಾದ ರಾಷ್ಟ್ರೀಯ ಸಂಘಟನೆ ಸಂಸ್ಕಾರ ಭಾರತಿ ಮಂಗಳೂರು ಘಟಕ ದಿಂದ ಪ್ರತೀ ವರ್ಷದಂತೆ ಗುರು ಪೂರ್ಣಿಮೆಯ ದಿನದಂದು ಕಲಾ ಸಾಮಾಜಿಕ ಕ್ಷೇತ್ರದಲ್ಲಿ ಯಾವುದೇ ಪ್ರಚಾರ ಪಡೆಯದೇ ಎಲೆ ಮರೆಯ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ಅವರ ಮನೆಗೆ ತೆರಳಿ ಗೌರವಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ ಎಂದು ಅಂತರ್ರಾಷ್ಟೀಯ ಖ್ಯಾತಿಯ ಸಂಘಟಕ. ಮುಂಬೈ ಬಂಟರ ಸಂಘದ ಸಾಂಸ್ಕೃತಿಕ ಮತ್ತು ಸಾಹಿತ್ಯ ವಿಭಾಗದ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ನುಡಿದರು.
ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ, ಲ. ಕಿಶೋರ್ ಡಿ ಶೆಟ್ಟಿ, ಹಳೇಕೋಟೆ ಮಾರಿಗುಡಿ ದೇವಸ್ಥಾನದ ಮೊಕ್ತೇಸರ್ ತಾರನಾಥ್ ಶೆಟ್ಟಿ ಬೋಳಾರ್, ಮನಪ ಕಾರ್ಪೊರೇಟರ್ ಲೀಲಾ ಪ್ರಕಾಶ್, ಲೋಕೇಶ್ ಬೆಳ್ಳಜೆ ಕಾಟಿಪಳ್ಳ, ಸಂಘ ಚಾಲಕ ವಸಂತ್ ಮಂಗಳೂರು ಸಂಪರ್ಕ ಪ್ರಮುಖ್ ಜಯಪ್ರಕಾಶ್, ಎಸ್ ಡಿ ಎಂ ಆಸ್ಪತ್ರೆಯ ಮುಖ್ಯಸ್ಥರು ಡಾ.ಪ್ರತಿಭಾ ರೈ, ಡಾ. ಅರುಣ್ ಕುಮಾರ್ ಉಳ್ಳಾಲ್, ,ಪ್ರವೀಣ್ ಕುಂಪಲ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿ ಮಂಗಳೂರು ಅಧ್ಯಕ್ಷ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಾಧವ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸರ್, ನಾಗರಾಜ್ ಶೆಟ್ಟಿ, ಧನ್ ಪಾಲ್ ಶೆಟ್ಟಿಗಾರ್, ರಘುವೀರ್ ಗಟ್ಟಿ, ಗಣೇಶ್ ಕುಮಾರ್, ಕಿರಣ್, ಚೇತಕ್ ಪೂಜಾರಿ, ಸುಖಲತ ಸುವರ್ಣ, ಶ್ರೀಲತಾ ನಾಗರಾಜ್, ಪ್ರಭಾ ಕುಲಾಲ್, ಸುಜೀರ್ ವಿನೋದ್, ಚಂದ್ರಕಾಂತ್, ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರಿನ ಹರಿಪ್ರಸಾದ್ ರೈ, ಹರ್ಷಿ ತ್ ಕೊಟ್ಟಾರಿ, ರಮಾನಾಥ್ ಕೋಟೆಕಾರ್,ಜಗನ್ನಾಥ ಶೆಟ್ಟಿ ಸಹಕರಿಸಿದರು.