ಬಂಟ್ಸ್ ನ್ಯೂಸ್, ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡುವರೇ ಎಂಬ ಬಗ್ಗೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಭಾರೀ ಚರ್ಚೆ ಇಂದು ಅವರು ರಾಜೀನಾಮೆ ನೀಡುವ ಮೂಲಕ ಅಂತ್ಯಗೊಂಡಿದ್ದು ಇದೀಗ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಈಗಾಗಲೇ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೂಲಕ ಉತ್ತಮ ರೀತಿಯಲ್ಲಿ ಪಕ್ಷ ಸಂಘಟಿಸಿ ಕಾರ್ಯ ನಿರ್ವಹಿಸುತ್ತಿರುವ
ನಳಿನ್ ಕುಮಾರ್ ಕಟೀಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಕೇಂದ್ರದಲ್ಲೂ ಸಂಸದ ನಳಿನ್ ಕುಮಾರ್ ಕಟೀಲ್
ಅವರ ಬಗೆಗೆ ಉತ್ತಮ ಅಭಿಪ್ರಾಯವಿದ್ದು ಮುಂದಿನ ಸಿಎಂ ಸ್ಥಾನ ಕಟೀಲ್ ಅವರಿಗೆ ಒಲಿದರೂ ಆಶ್ಚರ್ಯವಿಲ್ಲ.
ಯಡಿಯೂರಪ್ಪರ ರಾಜೀನಾಮೆ
ಬೆನ್ನಿಗೆ ತಮ್ಮ ಮನೆ ದೇವರ ಹಾಗೂ ತಾಯಿ ಆರ್ಶಿವಾದ ಪಡೆದು ದೆಹಲಿಗೆ ಸಂಸದ ನಳಿನ್ ಕುಮಾರ್ ಕಟೀಲ್
ತೆರಳಿದ್ದು ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಕಾದು ನೋಡ ಬೇಕಾಗಿದೆ.