ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ಶ್ಲಾಘಯ: ಡಿಸಿಪಿ ಹರಿರಾಮ್ ಶಂಕರ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಮಾಜಮುಖಿ ಕಾರ್ಯ ಶ್ಲಾಘಯ: ಡಿಸಿಪಿ ಹರಿರಾಮ್ ಶಂಕರ್

Share This

ಮಂಗಳೂರು: ದೈವದ ಕೆಲಸ ಮಾಡುವವರು, ಪಾತ್ರಿಗಳನ್ನು ಯಾವಾಗಲೂ ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಅವರು ಕಷ್ಟ ಎಂದು ಹೇಳಿಕೊಳ್ಳುವ ಮೊದಲೇ ನಾವು ಗುರುತಿಸಿ ಅವರಿಗೆ ಬೇಕಾದ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕು ಎಂದು ಮಂಗಳೂರು ಕಮಿಷನರೇಟ್ ಡಿಸಿಪಿ ಹರಿರಾಮ್ ಶಂಕರ ತಿಳಿಸಿದರು.

ಕನಾರ್ಟಟಕ ತುಳು ಸಾಹಿತ್ಯ ಅಕಾಡೆಮಿಯ ಮನವಿಗೆ ಸ್ಪಂದಿಸಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಉರ್ವಾಸ್ಟೋರ್ ನಲ್ಲಿರುವ ಅಕಾಡೆಮಿಯ ತುಳು ಭವನದಲ್ಲಿ ನಲಿಕೆ ಹಾಗೂ ಇತ್ರ ಕಲಾವಿದರ ಕುಟುಂಬಗಳಿಗೆ ಆಹಾರ ಸಾಮಾಗ್ರಿಯ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.  ಪಟ್ಲ ಫೌಂಡೇಷನ್ ವತಿಯಿಂದ ಉತ್ತಮ ಕೆಲಸ ಆಗುತ್ತಿರುವುದನ್ನು ಗಮಸುತ್ತಾ ಬಂದಿದ್ದೇನೆ, ಪಟ್ಲ ಫೌಂಡೇಶನ್ ಟ್ರಸ್ಟ್ ಸಮಾಜಮುಖಿ ಕಾರ್ಯ  ಹೀಗೆಯೇ ಮುಂದುವರಿಯಲಿ  ಎಂದು ಶುಭ ಹಾರೈಸಿದರು.


ತುಳು ನಾಡು,ತುಳು ಭಾಷೆ ,ಸಂಸ್ಕೃತಿ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ ಹರಿರಾಂ ಶಂಕರ್ ಅವರು ತುಳು ಅರ್ಥವಾಗುತ್ತದೆ. ಮಾತನಾಡಲೂ ಬರುತ್ತದೆ. ಕೆಲವೇ ತಿಂಗಳಲ್ಲಿ ಪೂರ್ತಿಯಾಗಿ ಕಲಿಯುತ್ತೇನೆ. ನಮ್ಮ ವೃತ್ತಿಯಲ್ಲಿ ಆಯಾ ಪ್ರದೇಶದಲ್ಲಿ ಇರುವ ಉತ್ತಮ ಮೌಲ್ಯಯುತ ಸಂಸ್ಕಾರ, ಆಚಾರ ವಿಚಾರ ಕಲಿಯಲು ಆಸಕ್ತಿ ವಹಿಸಿದ್ದೇನೆ ಎಂದು ನುಡಿದರು.


ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ ಕಳೆದ ಬಾರಿ ಬಾರಿ ಕೋವಿಡ್ ಸಂದರ್ಭ ಅರ್ಹರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ವತಿಯಿಂದ ಕಲಾವಿದರಿಗೆ ನೆರವು ಡುವ ಕಾರ್ಯ ನಡೆಸುತ್ತಿದ್ದೇವೆ ಎಂದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಮಾತನಾಡಿ, ಪಟ್ಲ ಫೌಂಡೇಷನ್ ವತಿಯಿಂದ ಅಕಾಡೆಮಿಯಲ್ಲಿ ನಲಿಕೆ ಸಮಾಜ ಹಾಗೂ ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಣೆ ಕೈಗೊಂಡಿದ್ದು, ಸಮಾಜಮುಖೀ ಚಟುವಟಿಕೆ ನಡೆಸುತ್ತಿರುವ ಫೌಂಡೇಷನ್ ಸತೀಶ್ ಶೆಟ್ಟಿ ಪಟ್ಲ ಹಾಗೂ ಅವರ ಇಡೀ ತಂಡ ಅಭೀನಂದನಾರ್ಹರು ಎಂದರು. ಸಮಾಜದಲ್ಲಿ ಸ್ವಾರ್ಥ ಚಿಂತನೆ ಹೊಂದಿರದೆ ಇತರರಿಗಾಗಿ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡಾಗ ಸಮಾಜ ಸದಾ ನಮ್ಮನ್ನು ನೆನಪಿಸುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ  ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ  ಡಾ. ಮನು ರಾವ್, ಸಂಘಟನಾ ಕಾರ್ಯದರ್ಶಿ ಕದ್ರಿ ನವತ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಅಕಾಡೆಮಿ ಸದಸ್ಯರಾದ  ಟ್ಟೆ ಶಶಿಧರ ಶೆಟ್ಟಿ, ಚೇತಕ್ ಪೂಜಾರಿ, ಲೀಲಾಕ್ಷ ಕರ್ಕೇರ ಮತ್ತಿತರರು ಭಾಗವಹಿಸಿದ್ದರು. ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್ ಕಾರ್ಯಕ್ರಮ ರ್ವಹಿಸಿದರು.

Pages