ಶಿಕ್ಷಣಕ್ಕೆ ನೆರವು ಪಡೆದ ವಿದ್ಯಾರ್ಥಿಗಳು ಮುಂದೆ ಸಂಘದ ಸೇವಾಕಾರ್ಯಕ್ಕೆ ಬೆಂಬಲವಾಗಬೇಕು: ಚಂದ್ರಹಾಸ ಕೆ. ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಿಕ್ಷಣಕ್ಕೆ ನೆರವು ಪಡೆದ ವಿದ್ಯಾರ್ಥಿಗಳು ಮುಂದೆ ಸಂಘದ ಸೇವಾಕಾರ್ಯಕ್ಕೆ ಬೆಂಬಲವಾಗಬೇಕು: ಚಂದ್ರಹಾಸ ಕೆ. ಶೆಟ್ಟಿ

Share This

ಬಂಟರ ಸಂಘ ಮುಂಬಯಿವಸಾಯಿದಾಹಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ

Bunts News, ವಸಾಯಿ : ಬಂಟರ ಸಂಘ ಮುಂಬಯಿ. ವಸಾಯಿ, ದಾಹಣು ಪ್ರಾದೇಶಿಕ ಸಮಿತಿಯ ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವನ್ನು ಜುಲೈ .11 ರಂದು ವಸಾಯಿ ಪೂರ್ವದ ರುದ್ರ ಶೇಲ್ಟರ್ ಹೋಟೇಲಿನ ಸಭಾಗೃಹದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ. ಕೆ. ಶೆಟ್ಟಿ ಕಳೆದ 25 ವರ್ಷಗಳಿಂದ ಬಂಟರ ಸಂಘದ ಶಿಕ್ಷಣ ಮತ್ತು ಕಲ್ಯಾಣ ಸಮಿತಿಯ ವತಿಯಿಂದ ನೀಡಲ್ಪಡುವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶೈಕ್ಷಣಿಕ ನೆರವು, ವಿಧವಾ ವೇತನ ಹಾಗೂ ವಿಕಲ ಚೇತನರಿಗೆ ಆರ್ಥಿಕ ಸಹಾಯ ಕಾಯಕ್ರಮವು ಯಶಸ್ವಿಯಾಗಿ  ನಡೆಯುತ್ತಾ ಬಂದಿದ್ದು ಇದಕ್ಕೆ ದಾನಿಗಳು ಸಹಕರಿಸಿ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯಸಂಘದ ಶಿಕ್ಷಣ ಸಂಸ್ಥೆಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಬಂಟ ಸಮಾಜದ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗಬಾರದು. ದತ್ತು ಸ್ವೀಕಾರ ಸ್ಕೀಂ ಪ್ರತೀ ವರ್ಷ ನಡೆಯಲಿದ್ದು ಅರ್ಹ ಮಕ್ಕಳು ಇದರ ಸದುಪಯೋಗವನ್ನು ಪಡೆಯಬೇಕು ಹಾಗು ಸಂಘವನ್ನು ಯಾವತ್ತು ಮರೆಯಬಾರದು ಎಂದು ಹೇಳುತ್ತಾ.ದಾನಿಗಳಿಂದ ಸಂಗ್ರಹಿಸಿದ ಹಣವು ಆರ್ಥಿಕವಾಗಿ ಮಕ್ಕಳ ಶಿಕ್ಷಣದ ನೆರವಿಗೆ ಅರ್ಥ ಪೂರ್ಣ ವಾಗಿ 25ವರುಷ ಗಳಿಂದ ವಿಸ್ತರಿಸುತ್ತಾ ಬಂದಿದೆ. ಇಂದು ಶಿಕ್ಷಣಕ್ಕೆ ನೆರವು ಪಡೆದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿ ಕೊಳ್ಳುವಂತೆ ಕರೆ ನೀಡಿದರು.


ಬಂಟರ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಂತಾರಾಮ  ಶೆಟ್ಟಿ ಯವರು ಮಾತನಾಡುತ್ತ ವಿದ್ಯಾರ್ಥಿಗಳು ಸಂಘದ ಪ್ರಯೋಜನವನ್ನು ಪಡೆಯುತ್ತ ಸಂಘದಲ್ಲಿ ಕ್ರಿಯಾಶೀಲರಾಗಿ ಬದುಕಲ್ಲಿ ಉತ್ತಮ ಬದಲಾವಣೆಯನ್ನು ತರಬೇಕು ಸಂಘದ ಶಿಕ್ಷಣ ಸಂಸ್ಥೆಯ ಪ್ರಯೋಜನವನ್ನು ಪಡೆಯಬೇಕೆಂದರು.


ಪ್ರಾದೇಶಿಕ ಸಮಿತಿಯ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷೆ. ಜಯಾ ಅಶೋಕ್ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸುತ ತಮ್ಮ ಪ್ರಾಸ್ತವಿಕ ಭಾಷಣ ಮಾಡಿದರು. ಸಂಧರ್ಭದಲ್ಲಿ ವಿವಿಧ ಪ್ರಾದೇಶಿಕ ಸಮಿತಿಯ ಪ್ರಮುಖರನ್ನು ಹಾಗೂ ದಾನಿ, ಮಹಾದಾನಿಯರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ ಶೆಟ್ಟಿ, ಕೋಶಾಧಿಕಾರಿ ಸಿ ಹರೀಶ್ ಶೆಟ್ಟಿ   . ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ ಬಂಟರ ಸಂಘದ ಪಕ್ಷಿಮ ವಿಭಾಗದ ಸಮನ್ವಕರಾದ ಶಶಿಧರ. ಕೆ. ಶೆಟ್ಟಿ, ಬಂಟರ ಸಂಘದ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಧ್ಯಕ್ಷ ಶಾಂತಾರಾಮ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ.ಉಮಾ ಕೃಷ್ಣ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಪಾಂಡು ಶೆಟ್ಟಿಪ್ರಾದೇಶಿಕ ಸಮಿತಿಯ ಸಂಚಾಲಕರು ಜಯಂತ್. ಆರ್. ಪಕ್ಕಳಉಪಕಾರ್ಯಾಧ್ಯಕ್ಷ ಗಳಾದ ಪ್ರವೀಣ್ ಶೆಟ್ಟಿ ಕಣಂಜಾರ್, ಮಂಜುನಾಥ ಶೆಟ್ಟಿ ಕೊಡ್ಲಾಡಿ, ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ, ಕೋಶಾಧಿಕಾರಿ ವಿಜಯ ಎಂ ಶೆಟ್ಟಿಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಉಷಾ ಶ್ರೀಧರ್ ಶೆಟ್ಟಿಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ವಿಭಾಗದ ಕಾರ್ಯಧ್ಯಕ್ಷೆ ಜಯಾ ಅಶೋಕ್ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಧ್ಯಕ್ಷ ಸುಪ್ರೀತ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.


ಆರಂಭದಲ್ಲಿ ಲೀಲಾವತಿ ಶೆಟ್ಟಿ ಅವರಿಂದ ಪ್ರಾರ್ಥನೆ ನಡೆಯಿತು. ಸಮಾಜದ ಮಕ್ಕಳಿಗೆ ಆರ್ಥಿಕ ನೆರವು, ವಿಧವೆಯರಿಗೆ ಮತ್ತು ವಿಕಲಚೇತನರಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು. ವಿಜಯ್ ಶೆಟ್ಟಿ ಕುತ್ತೆತ್ತೂರು ಹಾಗೂ ಪ್ರವೀಣ್ ಶೆಟ್ಟಿ ಕಣಂಜಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಬಂಟರ ಸಂಘದ ವಿವಿಧ ಸಮಿತಿಗಳ, ಉಪಸಮಿತಿಗಳ ಹಾಗೂ ಎಲ್ಲಾ ಲಲಲಲಲ ನನ್ನನ್ನು ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ ಧನ್ಯವಾದಗೈದರು.

Pages