ಆಷಾಢದಲ್ಲಿ ತುಳುನಾಡಿಗೆ ಬರುವನು ‘ಆಟಿ ಕಳಂಜ’..! - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಆಷಾಢದಲ್ಲಿ ತುಳುನಾಡಿಗೆ ಬರುವನು ‘ಆಟಿ ಕಳಂಜ’..!

Share This

ಬಂಟ್ಸ್ ನ್ಯೂಸ್, ಮಂಗಳೂರು: ದೇವರ ನಾಡೆಂದೇ ಪ್ರಖ್ಯಾತಿ ಪಡೆದಿರುವ ತುಳುನಾಡು ಹಲವು ಆಚಾರ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ತವರೂರು. ಇಂತಹ ಅನೇಕ ಸಂಪ್ರದಾಯವಿರುವ ತುಳುನಾಡಿನಲ್ಲಿ ಆಷಾಡ ಮಾಸದ ಸಂದರ್ಭದಲ್ಲಿ ಆಟಿ ಕಳಂಜನು ಮನೆ ಮನೆಗೆ ಬರುವುದು ಒಂದಾಗಿದ್ದು ಪ್ರಾಮುಖ್ಯತೆ ಪಡೆದಿದೆ.

ಆಟಿ ಕಳಂಜನೆಂದರೆ : ತುಳುನಾಡಿನಲ್ಲಿ ಆಷಾಡ ಮಾಸವನ್ನು ತುಳು ಭಾಷೆಯಲ್ಲಿ 'ಆಟಿ'ಎಂದು ಕರೆಯುತ್ತಾರೆ. ಈ ತಿಂಗಳಲ್ಲಿ ತುಳುನಾಡಿನ ಜನಪದ ಪ್ರಕಾರಗಳಲ್ಲಿ ಒಂದಾಗಿರುವ 'ಆಟಿ ಕಳೆಂಜ' ವೇಷಧಾರಿಯು ತುಳುನಾಡಿನ ಮನೆ ಮನೆಗೆ ಭೇಟಿ ಕೊಟ್ಟು ನೃತ್ಯ ಮಾಡುತ್ತಾನೆ. ಈ ಮೂಲಕ ಊರಿನ ಮಾರಿಯನ್ನು (ಸಂಕಷ್ಟ) ಹೊಡೆದೊಡಿಸುತ್ತಾನೆ ಎಂಬ ನಂಬಿಕೆಯು ತುಳುನಾಡಿನಲ್ಲಿದೆ. ಈ ನೃತ್ಯವು ಆಷಾಡಮಾಸದಲ್ಲಿ ನಡೆಸುವುದರಿಂದ ನೃತ್ಯಗಾರನಿಗೆ 'ಆಟಿ ಕಳಂಜ' ಎಂದು ಕರೆಯುತ್ತಾರೆ.

'ಕಳೆಂಜ' ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ದೂರ ಮಾಡುವ ಮಾಂತ್ರಿಕ ಎಂಬ ಅರ್ಥವಿದೆ. ಆಟಿ ಕಳಂಜ ವೇಷವನ್ನು ನಲಿಕೆ, ಪಾಣಾರ ಇನ್ನಿತರ ಜನಾಂಗದವರು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಈ ಸಂದರ್ಭ ಆಟಿ ಕಳಂಜ ವೇಷಧಾರಿಯು ಕೈಯಲ್ಲಿ ತಾಳೆಗರಿಯ ಕೊಡೆ ಹಿಡಿದಿರುತ್ತಾನೆ. ಆತನ ನೃತ್ಯಕ್ಕೆ ಪೂರಕವಾದ ಪಾಡ್ದನವವನ್ನು 'ತೆಂಬರೆ'ಯೆಂಬ ವಾದ್ಯದ ಸಹಾಯದಿಂದ ವ್ಯಕ್ತಿಯೋರ್ವನು ಹಾಡುತಿರುತ್ತಾನೆ. ಆಟಿ ಕಳೆಂಜನ ತನ್ನ ಸೊಂಟದ ಸುತ್ತಲೂ ತೆಂಗಿನ ಗರಿ, ಕಾಲಿಗೆ ಗಗ್ಗರ, ದೇಹ, ಮುಖಕ್ಕೆ ಬಣ್ಣ, ಹೂವಿನಿಂದ ಸಿಂಗರಿಸಿದ ಅಡಿಕೆ ಹಾಳೆ ಟೊಪ್ಪಿ ಧರಿಸಿತ್ತಾನೆ.


ಕಳಂಜ ಹುಟ್ಟಿದ್ದು : ಕಳಂಜನು ಶಿವನ ಬಲ ಕಾಲಿನ ಉಂಗುಷ್ಟದಲ್ಲಿ ಜನಿಸಿದನೆಂದು ಹೇಳಾಲಗುತ್ತದೆ. ಕಳಂಜನನ್ನು ಶಿವನು ಆಷಾಡ ಮಾಸದಲ್ಲಿ ಊರಿಗೆ ಬುರುವ ಮಾರಿಯನ್ನು ಓಡಿಸಲು ಭೂಮಿಗೆ ಕಳುಹಿಸಿದನೆಂದು ಹೇಳಾಗುತ್ತಿದೆ. ಇನ್ನೊಂದು ಕತೆಯಲ್ಲಿ ಗಂಧ ಬೂಳ್ಯ ಹಾಕುವ ಸಮಯದಲ್ಲಿ ಕಳಂಜಿಕಾಯಿ ಗಾತ್ರದ ಕಸವೊಂದು ಗಂಧದಲ್ಲಿ ಕಂಡ ನಾಗಬ್ರಹ್ಮರು ಬಿಸಾಡಿದಾಗ ಕಳಂಜ ಜನ್ಮಕ್ಕೆ ತಾಳುತ್ತಾನೆ ಎನ್ನಲಾಗಿದೆ. ಹಾಗಾಗಿ ಕಳಂಜನನ್ನು ನಾಗಬ್ರಹ್ಮರ ಮಾನಸ ಪುತ್ರನೆಂದು ಹೇಳಾಗುತ್ತಿದೆ.


ತುಳುನಾಡಿನಲ್ಲಿ ಆಟಿ ತಿಂಗಳು ಎಂಬುದು ಬರಗಾಲದ ತಿಂಗಳೆಂಬ ನಂಬಿಕೆಯಿದೆ. ಈ ತಿಂಗಳಲ್ಲಿ ಎಡೆಬಿಡದೆ ಮಳೆ ಸುರಿಯುವುದರಿಂದ ಜನರು ಸಂಕಷ್ಟ ಎದುರಿಸುತ್ತಾರೆ. ಅಲ್ಲದೇ ಯಾವುದೇ ರೀತಿಯ ಕೃಷಿ ಸಂಬಂಧಿತ ಕೆಲಸ ಮಾಡಲಾಗದೇ ಕಷ್ಟ ಪಡುತ್ತಾರೆ.  ಈ ತಿಂಗಳಿನಲ್ಲಿ ಊರಿಗೆ ಮಾರಿ ಅತಿಕ್ರಮಿಸುವ ನಂಬಿಕೆಯಿದ್ದು ಮಾರಿಯನ್ನು ಓಡಿಸುವ ದೃಷ್ಠಿಯಿಂದ ಆಟಿ ಕಳಂಜನ್ನು ಕುಣಿಸುತ್ತಾರೆ.

Pages