ಹಿರಿಯರ ತ್ಯಾಗ, ಬಲಿದಾನ ಮರೆಯದೆ ಬಾಳಬೇಕು : ಸುರೇಶ್ ಶೆಟ್ಟಿ ಗುರ್ಮೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹಿರಿಯರ ತ್ಯಾಗ, ಬಲಿದಾನ ಮರೆಯದೆ ಬಾಳಬೇಕು : ಸುರೇಶ್ ಶೆಟ್ಟಿ ಗುರ್ಮೆ

Share This

ಬಂಟ್ಸ್ ನ್ಯೂಸ್, ಮಂಗಳೂರು: ಇಂದು ನಾವು ಹಿರಿಯರು ಹಾಕಿಕೊಟ್ಟ ಹಾದಿಯನ್ನು ಮರೆಯುತ್ತಿದ್ದೇವೆ. ಪೂರ್ವಿಕರು ನಮಗಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಂಡು ನಮ್ಮನ್ನು ತಿದ್ದಿಕೊಂಡು ಬಾಳಬೇಕಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಂಗ ಚಾವಡಿ ಸಾಹಿತ್ಯಿಕ-ಸಾಂಸ್ಕøತಿಕ ಸಂಘಟನೆಯ ಆಶ್ರಯದಲ್ಲಿ ಡಿ.23 ಬುಧವಾರ ಸಂಜೆ 4.30ಕ್ಕೆ ಉರ್ವಾಸ್ಟೋರ್ ತುಳುಭವನದ ಸಿರಿ ಚಾವಡಿಯಲ್ಲಿ ನಡೆದ ರಂಗಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತುಳುನಾಡಿಗೆ ತನ್ನದೆ ಆದ ಪರಂಪರೆಯಿದೆ. ಇಲ್ಲಿ ಒಂದೇ ತಾಯಿಯ ಮಕ್ಕಳಂತೆ ಜಾತಿ, ಮತ, ಧರ್ಮಭೇದವಿಲ್ಲದೆ ಬಾಳುತ್ತಿದ್ದೇವೆ. ಆದರೆ ಇಂದಿನ ಕೆಲ ವಿಚಾರಗಳು ನಮ್ಮ ಸಮಾಜದ ಒಗ್ಗಟ್ಟು, ಸಂಸ್ಕೃತಿ, ಸಂಸ್ಕಾರವನ್ನು ಹಾಳು ಮಾಡುತ್ತಿದ್ದು ಅದಕ್ಕೆ ಅವಕಾಶ ನೀಡಬಾರದೆಂದರು.


ಸಮಾರಂಭದಲ್ಲಿ 2020 ಸಾಲಿನ  ರಂಗಚಾವಡಿ ಗೌರವ ಪ್ರಶಸ್ತಿಯನ್ನು ಸಂಗೀತ ನಿರ್ದೇಶಕ ಮುರಳೀಧರ ಕಾಮತ್ ಕೊಂಚಾಡಿ ಅವರಿಗೆ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆ ಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಯಾದವ್ ಕೋಟ್ಯಾನ್ ಪೆರ್ಮುದೆ, ರಮಾನಾಥ ಶೆಟ್ಟಿ ಬೈಕಂಪಾಡಿ, ಸುರತ್ಕಲ್ ಮಾತಾ ಡೆವಲಪರ್ಸ್‍ನ ಆಡಳಿತ ನಿರ್ದೇಶಕ ಎನ್.ಸಂತೋಷ್ ಕುಮಾರ್ ಶೆಟ್ಟಿ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್.ಪೂಂಜ, ರಂಗಚಾವಡಿ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಇದ್ದರು. ರಾಗಧ್ವನಿ ಬಳಗ ಮಂಗಳೂರು ಇವರಿಂದ ಸಂಗೀತ ಗಾನಗಂಗೆ ನಡೆಯಿತು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.

Pages