ಬಂಟ್ಸ್ ನ್ಯೂಸ್, ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಿವಾಸಿ ದಿನೇಶ್ ಶೆಟ್ಟಿ ಮತ್ತು ರಂಜಿತಾ ಶೆಟ್ಟಿ ದಂಪತಿಯ ಒಂದು ವರ್ಷ ಪ್ರಾಯದ ಎಳೆಯ ಮಗು ಶ್ರೀ ದೇವಿ ಎಲುಬು ಸಂಬಂಧಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯಿಂದ ಮಗು ಬದುಕಬಹುದು ಎಂಬ ಆಶ್ವಾಸನೆ ವೈದ್ಯರು ನೀಡಿದ್ದಾರೆ.
ಈಗಾಗಲೇ ಶೀದೇವಿ
ಚಿಕಿತ್ಸೆಗಾಗಿ ರೂ.2.50 ಲಕ್ಷದಷ್ಟು
ಹಣ ಖರ್ಚಾಗಿದ್ದು ವೈದ್ಯರ ಸಲಹೆಯಂತೆ ಮಗು ಬದುಕಿಸಲು ಹೆಚ್ಚಿನ ಚಿಕಿತ್ಸೆಗಾಗಿ ರೂ.40 ಲಕ್ಷ ಮೊತ್ತದ ಅವಶ್ಯಕತೆಯಿದೆ.
ಈಗಾಗಲೇ ಶ್ರೀದೇವಿ ಚಿಕಿತ್ಸೆಗಾಗಿ ಕೂಡಿಟ್ಟ ಎಲ್ಲಾ ಹಣವನ್ನು ಕಳೆದುಕೊಂಡಿರುವ ಹೆತ್ತವರು ಶ್ರೀದೇವಿ
ಬದುಕಿಸಲು ಚಿಕಿತ್ಸೆ ನೀಡಲು ಸಹೃದಯಿ ದಾನಿಗಳ ನೆರವನ್ನು ಬಯಸುತ್ತಿದ್ದಾರೆ.
ಹಾಗಾಗಿ ದಾನಿಗಳು
ತಮ್ಮಿಂದಾಗುವ ಸಹಾಯವನ್ನು ಮಾಡಿ ಶ್ರೀದೇವಿಯ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಲು ಸಹಕರಿಸಬೇಕಾಗಿ
ಬಂಟ್ಸ್ ಮ್ಯೂಸ್ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ. ದಾನಿಗಳು ಶ್ರೀದೇವಿ ತಂದೆ ದಿನೇಶ್ ಶೆಟ್ಟಿ
ಅವರ ಬ್ಯಾಂಕ್ ಖಾತೆಗೆ ಸಹಾಯಹಸ್ತವನ್ನು ಕಳುಹಿಸಬಹುದು. (Name:
Dinesh Shetty - Bank Name: Bank Of Baroda - A/c No: 42150100005115 –
IFSC Code: BARB0BANTWA - MICR: 575012007 ) ಗೂಗಲ್ ಪೇ ಮೂಲಕ
ಸಹಾಯಹಸ್ತ ನೀಡುವವರು ದಿನೇಶ್ ಶೆಟ್ಟಿ ಅವರ ಮೊಬೈಲ್ ಸಂಖ್ಯೆ 9611187645 ಕಳುಹಿಸಬಹುದು.
ಸಹಾಯಧನ ಸಂಗ್ರಹದ ಮಾಹಿತಿಗಾಗಿ ಬಂಟ್ಸ್ ನ್ಯೂಸ್ ವರದಿಗೆ
ಸ್ಪಂದಿಸಿ ಸಹಾಯಹಸ್ತ ನೀಡಿದವರು ತಮ್ಮ ಸಹಾಯಹಸ್ತದ ವಿವರವನ್ನು ಬಂಟ್ಸ್ ನ್ಯೂಸಿನ ವಾಟ್ಸಾಪ್
ಸಂಖ್ಯೆ 9743112517 ಕಳುಹಿಸಬೇಕಾಗಿ ಮನವಿ