ಬಂಟ್ಸ್ ನ್ಯೂಸ್, ಮುಂಬೈ: ಮುಂಬಯಿಯಲ್ಲಿರುವ ಕನ್ನಡಿಗರ ಕಾರ್ಯಕ್ರಮಗಳು ಮತ್ತು ಅವರ ಸಾಧನೆಗಳು ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಬಾರಿಯ ಕರ್ನಾಟಕ ಸರಕಾರ ಹೊರನಾಡ ಕನ್ನಡಿಗ ಕೆ. ಡಿ ಶೆಟ್ಟಿ ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಮೂಲಕ ಮುಂಬೈ ಕನ್ನಡಿಗರ ಕನ್ನಡಾಂಬೆಯ ಸೇವೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ದೇವದಾಸ್ ಎಲ್ ಕುಲಾಲ್ ನುಡಿದರು.

ಅವರು ಡಿ.29ರಂದು ಸಿಬಿಡಿ ಬೇಲಾಪುರ ನಲ್ಲಿ ರುವ ಭವಾನಿ ಫೌಂಡೇಶನ್ ಕಾರ್ಯಾಲಯದಲ್ಲಿ ಫೌಂಡೇಶನ್ನ ಪ್ರವರ್ತಕ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆಡಿ ಶೆಟ್ಟಿ ಅವರನ್ನು ಕುಲಾಲ ಸಂಘದ ಪರವಾಗಿ ಗೌರವಿಸಿ ಮಾತನಾಡಿದರು. ಎಲ್ಲಾ ಸಮಾಜವನ್ನು ಗೌರವಿಸಿ ಆಸಕ್ತರ ಕುಟುಂಬಗಳಿಗೆ ಸ್ಪಂದಿಸುತ್ತ ಬಂದಿರುವ ಕೆ ಡಿ ಶೆಟ್ಟಿ ಮತ್ತು ಭವಾನಿ ಫೌಂಡೇಶನ್ ಸೇವಾ ಕಾರ್ಯಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ನಡೆಯಲಿ ದೇಶದ ಅತ್ಯುನ್ನತ ಗೌರವಗಳು ಭವಾನಿ ಫೌಂಡೇಶನ್ ಗೆ ಅರಸುತ್ತ ಬರಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಜ್ಯೋತಿ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲ್ಯಾನ್. ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು .ಕಾರ್ಯದರ್ಶಿ ಕರುಣಾಕರ ಬಿ ಸಾಲ್ಯಾನ್. ನವಿ ಮುಂಬೈ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎಲ್ ಆರ್ ಮೂಲ್ಯ .ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ಮೂಲ್ಯ ಉಪಸ್ಥಿತರಿದ್ದು ಕೆಡಿ ಶೆಟ್ಟಿಯವರಿಗೆ ಕುಲಾಲ ಸಂಘ ಮುಂಬಯಿ ವತಿಯಿಂದ ಸಾಲು ಫಲಪುಷ್ಪ ನೀಡಿ ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ಡಿ ಶೆಟ್ಟಿಯವರು ನಮ್ಮ ಬದುಕು ಸಾರ್ಥಕವಾಗಲು ಸಾಧ್ಯವಾದಷ್ಟು ಕಷ್ಟದಲ್ಲಿರುವ ಬಂಧುಗಳಿಗೆ ಸಹಕಾರ ಮಾಡಬೇಕು ಅದರಿಂದ ಪಡೆಯುವ ಸಂತಸ ಮತ್ತು ಆಶೀರ್ವಾದ ನಮ್ಮನ್ನು ಜೀವನದಲ್ಲಿ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಭವಾನಿ ಫೌಂಡೇಶನ್ನ ಸೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಆಸಕ್ತರಿಗೆ ತಲುಪುವಂತೆ ಕಾರ್ಯವನ್ನು ಮಾಡಲಿದ್ದೇವೆ ಎಂದು ನುಡಿದರು.