ದಾನಿಗಳು ನಮ್ಮ ಪಾಲಿನ ದೇವರು, ಅವರ ದಾನ ಸಮಾಜದ ಕಲ್ಯಾಣಕ್ಕೆ ಬಳಕೆಯಾಗುತ್ತಿದೆ : ಐಕಳ ಹರೀಶ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದಾನಿಗಳು ನಮ್ಮ ಪಾಲಿನ ದೇವರು, ಅವರ ದಾನ ಸಮಾಜದ ಕಲ್ಯಾಣಕ್ಕೆ ಬಳಕೆಯಾಗುತ್ತಿದೆ : ಐಕಳ ಹರೀಶ್ ಶೆಟ್ಟಿ

Share This

ಜಾಗತಿಕ ಬಂಟರ ಸಂಘಗಳ ಒಕ್ಕೂಟ : ಉಡುಪಿಯಲ್ಲಿ ಸಮಾಜ ಕಲ್ಯಾಣ ಸಹಾಯ ವಿತರಣೆ

Bunts News, ಮುಂಬೈ/ಉಡುಪಿ: ದಾನಿಗಳು ನಮ್ಮ ಪಾಲಿನ ದೇವರು, ಸಮಾಜದ ಉತ್ತಮ ಕೆಲಸಕ್ಕೆ ದಾನಿಗಳು ಸಹಕರಿಸುತ್ತಿದ್ದು ಅವರ ದಾನವು ಸಮಾಜದ ಕಲ್ಯಾಣಕ್ಕೆ ಬಳಕೆಯಾಗುತ್ತಿದೆ. ಸಮಾಜದ ಅಭಿವೃದ್ದಿಗೆ ನಾವೆಲ್ಲರೂ ಸಂಘಟಿತರಾಗಿ ಹೋರಾಟ  ಮಾಡಬೇಕಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.

Federations-of-Bunts aikala
Federations-of-Bunts
Federations-of-Bunts

ಅವರು ನ. 29ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಸಹಾಯಹಸ್ತ ವಿತರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಮ್ಮ ಸಮಾಜದಲ್ಲಿ ಬಲಿಷ್ಟ ನಾಯಕರಿದ್ದಾರೆ. ರಾಜಕೀಯದಲ್ಲಿ ನಮ್ಮವರು ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ನಮ್ಮ ಸಮಾಜಕ್ಕೆ ಅವರ ಸಹಾಯ ಸಹಕಾರ ಸಾಲದು. ಸಮಾಜದಲ್ಲಿ ಅಭಿಮಾನವಿಟ್ಟು ಕೆಲಸ ಮಾಡುವ ಯಾವುದೇ ವ್ಯಕ್ತಿಯನ್ನು ನಾವೂ ಬೆಂಬಲಿಸಬೇಕು. ಬೇರೆ ಸಮಾಜವನ್ನು ಪ್ರೀತಿಸುವವರು ಬಂಟ ಸಮಾಜದವರು. ಇಂದಿನ ಒಟ್ಟು ಯೋಜನಯಲ್ಲಿ ಶೇ.25ರಷ್ಟು ಇತರ ಸಮಾಜಕ್ಕೂ ಸಹಾಯ ನೀಡಲಾಗಿದೆ ಎಂದರು.


ಜಾಗತಿಕ ಬಂಟರ ಸಂಘಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿಯವರು ಮಾತನಾಡಿ, 2018ರಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಒಂದು ಹೊಸ ರೂಪ ಬಂತು. ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ಅಧ್ಯಕ್ಷರಾದ ನಂತರದ ದಿನಗಳಲ್ಲಿ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿವೆ. ಇದೇ ವೇದಿಕೆಯಲ್ಲಿ ಸುಮಾರು 60 ಜನ ಗಣ್ಯರ ಉಪಸ್ಥಿತಿಯಲ್ಲಿ ವಿಶ್ವ ಬಂಟರ ಸಮ್ಮೇಳನವೂ ನಡೆದಿದೆ. ಬಡವರಿಗೆ ನೂರಾರು ಮನೆ ನಿರ್ಮಾಣ. ವೈದ್ಯಕೀಯ ನೆರವು, ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು, ವಿದ್ಯಾಭ್ಯಾಸಕ್ಕೆ ನೆರವು ಹಾಗೂ ಇನ್ನಿತರ ಸಹಾಯಹಸ್ತಗಳಿಗೆ ಕೋಟ್ಯಂತರ ರೂಪಾಯಿಯ ನೆರವನ್ನು ಸಮಾಜ ಬಾಂಧವರಿಗೆ ಮಾತ್ರವಲ್ಲದೆ ಇತರ ಸಮಾಜದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೂ ಆರ್ಥಿಕ ಸಹಾಯ ನೀಡಲಾಗಿದೆ. ಎರಡು ದಿನಗಳ ಸಮಾಜ ಕಲ್ಯಾಣ ಸಹಾಯ ಹಸ್ತ ವಿತರಣೆ ಕಾರ್ಯಕ್ರಮದಲ್ಲಿ ಸುಮಾರು 1.50 ಕೋಟಿಯ ಸಹಾಯವನ್ನು ನೀಡಲಾಗುವುದು ಎಂದರು.


ಕಾರ್ಯಕ್ರಮದ ಗೌರವ ಅತಿಥಿ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರು ಮಾತನಾಡಿ, ಇಂದು ದಾಖಲೆ ಪ್ರಮಾಣದ ಸೇವೆಗೆ ಚಾಲನೆ ನೀಡಲಾಗಿದೆ. ಉಭಯ ಜಿಲ್ಲೆಗಳಲ್ಲಿ ಉತ್ತಮ ಕಾರ್ಯಕ್ರಮ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಯಾವಾಗಲೂ ಅದ್ದೂರಿಯ ಕಾರ್ಯಕ್ರಮಗಳು ನಡೆಯುತ್ತಿದೆ. ಅವರ ಮನಸ್ಸೂ ದೊಡ್ಡದು. ಇಂತಹ ಕಾರ್ಯಕ್ರಮಗಳೂ ಇತರ ಸಮಾಜಕ್ಕೆ ಮಾದರಿ ಕಾರ್ಯಕ್ರಮ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕುಸುಮೋದರ ಶೆಟ್ಟಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗಿದ್ದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸನ್ಮಾನ ಪತ್ರವನ್ನು ವಾಚಿಸಿದರುಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದದಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅಭಿನಂದನೆಗಳು. ಕೋವಿಡ್ ನಿಂದಾಗಿ ಎಲ್ಲರೂ ಸಮಸ್ಯೆಯನ್ನು ಎದುರಿಸುತ್ತಿದ್ದು ತಮ್ಮಿಂದಲೂ ಬಡವರಾಗಿರುವವರಿಗೆ ಒಕ್ಕೂಟದ ಮೂಲಕ ಸಹಕರಿಸುವ ಕೆಲಸವನ್ನು ಮಾಡಲಾಗಿದೆ. ಜಾತ್ಯಾತೀತ ಸಮಾಜ ಬಂಟರ ಸಮಾಜ. ಬಡವರಿಗೆ ಸಹಕರಿಸುವ ಕೆಲಸ ಇಂದು ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಮಾತನಾಡಿ, ನಾವೇನಾದರೂ ನೀಡಿದ್ದರೆ ಸಂಘಟನೆ ಮೂಲಕ ನಮ್ಮ ಸಮಾಜಕ್ಕೆ ನೀಡಿದ್ದೇವೆ. ಅಸಾಧ್ಯವಾದದನ್ನು ಸಾಧ್ಯವಾಗಿಸುವ ವ್ಯಕ್ತಿ ಐಕಳ ಹರೀಶ್ ಶೆಟ್ಟಿ ಅವರಿಗೆದೆ. ಸಂಘಟನೆಯು ಸಮಾಜ ಸೇವೆಯು ರಾಜಕೀಯ ಶಕ್ತಿಯ ಮೂಲಕವೂ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಗೌರವ ಅಥಿತಿಯಾಗಿ ಆಗಮಿಸಿದ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಮುಂಡ್ಕೂರುಯವರು ಮಾತನಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಇದು ಎರಡನೇ ಮೆಘಾ ಸಮಾಜ ಕಲ್ಯಾಣ ಸಹಾಯ ವಿತರಣೆ. ಇಂದಿನ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಏನೂ ಇಲ್ಲದಿದ್ದರೂ ಇತರರಿಂದ ಸಹಾಯದ ಮೂಲಕ ಜನ ಸೇವೆ ಮಾಡುತ್ತಿದ್ದು ಇಂತಹ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.


ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಒಕ್ಕೂಟದ ಪದಾಧಿಕಾರಿಗಳು, ನಿರ್ದೇಶಕರುಗಳು, ಮಹಾಪೋಷಕರು, ಕಾರ್ಯಕಾರಿ ಸಮಿತಿ ಹಾಗೂ ದಾನಿಗಳ ಸಹಕಾರದೊಂದಿಗೆ ಕಾರ್ಯಕ್ರಮಗಳು ನಡೆಯಿತು.


ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮವನ್ನು ಅರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಆರ್ಥಿಕವಾಗಿ ಅಸಹಾಯಕರಾಗಿರುವ ಸಮಾಜ ಬಾಂಧವರಿಗೆ ಆರ್ಥಿಕ ಸಹಾಯ, ವಸತಿ ನಿರ್ಮಾಣ, ಕೋರೋನಾ ಪೀಡಿತರಿಗೆ ಹಾಗೂ ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, SSLC, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಇತ್ಯಾದಿ ಸಹಾಯವನ್ನು ನೀಡಲು 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೃಹತ್ ಸಮಾಜ ಕಲ್ಯಾಣ ಸಹಾಯ ವಿತರಣೆ ನಡೆಯಿತು.


ವೇದಿಕೆಯಲ್ಲಿ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಶ್ ಶೆಟ್ಟಿ, ಕೃಷ್ಣ ಶೆಟ್ಟಿ , ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ಸರಿತಾ  ಕುಸುಮೋದರ ಶೆಟ್ಟಿ, ಸುಧಾಕರ ಹೆಗ್ಡೆ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಬಂಟರ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ನೈಜೀರಿಯಾದ ಜಿ... ಇಂಟರ್ ಗ್ಲೋಬಲ್ ಸಿ.ಎಂ. ಡಿ. ಅಜಿತ್ ಚೌಟ, ಓಮನ್ ಅಭೀರ್ ಗ್ರೂಫ್ ಆಪ್ ಕಂಪನೀಸ್ ಸಿ.ಎಂ.ಡಿ. ಶಶಿಧರ್ ಶೆಟ್ಟಿ ಓಮನ್,  ಶಕುಂತಳ ಸದಾನಂದ ಶೆಟ್ಟಿ , ರತ್ನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದಾನಿಗಳನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಗೌರವಿಸಿದರು. ಕಾರ್ಯಕ್ರಮವನ್ನು ಅಶೋಕ್ ಪಕ್ಕಳ ನಿರ್ವಹಿಸಿದರು, ದಾನಿಗಳ ಹೆಸರನ್ನು ಕಾರ್ನೂರು ಮೋಹನ್ ರೈ ವಾಚಿಸಿದರು. ಒಕ್ಕೂಟದ ಜೊತೆ ಕಾರ್ಯದರ್ಶಿ ಸತೀಷ್ ಅಡಪ ಸಂಕಬೈಲ್ ವಂದಿಸಿದರು. (ವರದಿ: ಈಶ್ವರ ಎಂ. ಐಲ್ ಚಿತ್ರ: ದಿನೇಶ್ ಕುಲಾಲ್)

Pages