ಬಂಟ್ಸ್ ನ್ಯೂಸ್, ಮುಂಬೈ: ಭವಾನಿ ಫೌಂಡೇಶನ್ ಟ್ರಸ್ಸ್ ಮೂಲಕ ನೂರಾರು ಜನರ ಬದುಕಿಗೆ ಬೆಳಕಾಗುತ್ತಿರುವ ಸಮಾಜ ಸೇವಕ ಬಂಟ್ವಾಳ ಕೇಪು ಗ್ರಾಮದ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ ಅವರು ಹೊರನಾಡು ಕನ್ನಡಿಗನಾಗಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚೆಲ್ಲಡ್ಕಗುತ್ತು ದೇರಣ್ಣ ಶೆಟ್ಟಿ ಹಾಗೂ ಭವಾನಿ ದೇರಣ್ಣ
ಶೆಟ್ಟಿ ಅವರ ಪುತ್ರರಾಗಿರುವ ಕುಸುಮೋದರ ಶೆಟ್ಟಿ ಅವರು 2007ರಲ್ಲಿ ತಾಯಿ ಹೆಸರಲ್ಲಿ ಭವಾನಿ ಶಿಪ್ಪಿಂಗ್
ಕಂಪೆನಿ ಆರಂಭಿಸುವ ಮೂಲಕ ಉದ್ಯಮರಂಗಕ್ಕೆ ಪಾದಾರ್ಪಣೆ ಮಾಡಿದರು. ಪ್ರಸ್ತುತ ಇವರ ಉದ್ಯಮವು ದೇಶದ್ಯಾಂತ
ವಿಸ್ತರಣೆಯಾಗಿದ್ದು ನೂರಾರು ಜನರಿಗೆ ಉದ್ಯೋಗ ನೀಡಿದೆ.
ಉದ್ಯಮದ ಜತೆಗೆ ಭವಾನಿ ಫೌಂಡೇಶನ್ ಟ್ರಸ್ಟ್ ರಚಿಸಿ,
ಆ ಮೂಲಕ ಆರ್ಥಿಕ ಸಂಕಷ್ಠದಲ್ಲಿರುವವರಿಗೆ ಸಹಾಯಹಸ್ತ, ಶಿಕ್ಷಣಕ್ಕೆ ಸಹಾಯ, ನಿರುದ್ಯೋಗಿಗಳಿಗೆ ಉದ್ಯೋಗ,
ರಕ್ತದಾನ ಶಿಬಿರ, ಬಡ ವಧುವಿನ ವಿವಾಹಕ್ಕೆ ಸಹಾಯಹಸ್ತ ಹೀಗೆ ಹಲವು ರೀತಿಯಲ್ಲಿ ತಮ್ಮ ಕೈಯಲ್ಲಾಗುವ
ಸಹಾಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 7ರಂದು ನಡೆಯಲಿದ್ದು ಪ್ರಶಸ್ತಿ ಪುರಸ್ಕೃತರಿಗೆ 1 ಲಕ್ಷ ರೂ. ನಗದು ಮತ್ತು 25 ಗ್ರಾಂ ಚಿನ್ನದ ಪದಕವನ್ನು ಕರ್ನಾಟಕ ಸರ್ಕಾರ ನೀಡಿ ಗೌರವಿಸಲಿದೆ.